ಕೂಳೂರು : ನಮ್ಮ ದೃಷ್ಟಿ ಎತ್ತರಕ್ಕೆ ಇದ್ದಾಗ ಮತ್ತು ಧೃಡ ಚಿತ್ತ ಇದ್ದಾಗ ತಲುಪುವ ಗುರಿ ಹತ್ತಿರವಾಗುತ್ತದೆ ಸಂಘಟನೆಯ ಶಕ್ತಿ ಯುವಸಮುದಾಯದಲ್ಲಿದೆ ಮತ್ತು ಸಮಾನತೆಯಲ್ಲಿದೆ ಹಾಗಾದಾಗ ಯಶಸು ಲಭಿಸುತ್ತದೆ . ನಾಯಕತ್ವಕ್ಕೆ ಅಡಿಪಾಯ ಮುಖ್ಯ ಈ ದಿಶೆಯಲ್ಲಿ ಕೂಳೂರು ಘಟಕದ ಪರಿಶ್ರಮ ಅಭಿನಂದನೀಯ ಮಹಿಳೆಯರಿಗೆ ಅವಕಾಶ ಹೆಚ್ಚಾಗಬೇಕು ಎನ್ನುವ ಕೂಗು ಎಲ್ಲ ಕಡೆ ಇದೆ ಕೂಳೂರು ಘಟಕ ಅದನ್ನು ಅನುಸರಿಸಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ತಿಳಿಸಿದರು.
ಅವರು ದಿನಾಂಕ 27.05.2018 ನೇ ಆದಿತ್ಯವಾರ ಕೂಳೂರು ಚರ್ಚ್ ಹಾಲ್ ನಲ್ಲಿ ಯುವವಾಹಿನಿ (ರಿ) ಕೂಳೂರು ಘಟಕದ 2018-19 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ನೆರವೇರಿಸಿ ಮಾತನಾಡಿದರು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ದೀಪಕ್ ಪೂಜಾರಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಪುಷ್ಪರಾಜ್ ಸಮಾರಂಭ ಅಧ್ಯಕ್ಷತೆಯನ್ನು ವಹಿಸಿದ್ದರು.
ಕೂಳೂರು ಘಟಕದ ಸಮಾಜಮುಖಿ ಸಾಧನೆಯನ್ನು ಒಳಗೊಂಡ , ಮಧುಶ್ರೀ ಪ್ರಶಾಂತ್ ಸಂಪಾದಕೀಯದಲ್ಲಿ ಮೂಡಿ ಬಂದ ಮಾತೃ ಸ್ಪರ್ಷ ಪುಸ್ತಕವನ್ನು ಕೂಳೂರು ಶ್ರೀ ಕೃಷ್ಣ ಶಿಪ್ಪಿಂಗ್ ನಿರ್ದೇಶಕ ಅನಿಲ್ ಕುಮಾರ್ ಬಿಡುಗಡೆಗೊಳಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರಮೀಳಾ ದೀಪಕ್, ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಅಧ್ಯಕ್ಷ ಜಯಾನಂದ ಅಮೀನ್, ಪ್ರಧಾನ ಕಾರ್ಯದರ್ಶಿ ಸದಾಶಿವ ಸುವರ್ಣ, ಉರುಂದಾಡಿ ಗೋಪಾಲಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷ ಗಿರಿಧರ್ ಸನಿಲ್ ಹಾಗೂ ಯುವವಾಹಿನಿ ಕೂಳೂರು ಘಟಕದ ಸಲಹೆಗಾರ ನೇಮಿರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
2018-19 ನೇ ಸಾಲಿನ ಯುವವಾಹಿನಿ ಕೂಳೂರು ಘಟಕದ ನೂತನ ಅಧ್ಯಕ್ಷರಾಗಿ ಲೋಕೇಶ್ ಕೋಟ್ಯಾನ್ ನೇತ್ರತ್ವದ ನೂತನ ತಂಡವು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಮಾಜಿ ಅಧ್ಯಕ್ಷ ಸುಜಿತ್ ರಾಜ್ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು.
SSLC ಹಾಗೂ PUC ಯಲ್ಲಿ ಶ್ರೇಷ್ಠ ಸಾಧನೆ ಮಾಡಿದ 10 ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. 30 ಬಡ ವಿದ್ಯಾರ್ಥಿಗಳಿಗೆ ರೂ.90,000/-ವಿದ್ಯಾರ್ಥಿ ವೇತನ ನೀಡಲಾಯಿತು. ಹಾಗೂ ರೂ 20,000/- ವನ್ನು ಯುವವಾಹಿನಿ ಕೇಂದ್ರ ಸಮಿತಿಯ ವಿದ್ಯಾನಿಧಿ ನೀಡಲಾಯಿತು. ಹಾಗೂ ಕೂಳೂರು ಸರಕಾರಿ ಶಾಲೆಗೆ ರೂ.18,000/- ಮೊತ್ತದ ಪುಸ್ತಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಚಲನಚಿತ್ರ ನಟ ರಂಜಿತ್ ಸುವರ್ಣ ಹಾಗೂ ಬಾಲಿವುಡ್ ನೃತ್ಯ ಸಂಯೋಜಕ ನಿತೇಶ್ ಕೋಟ್ಯಾನ್ ಇವರ ಸಾಧನೆಯನ್ನು ಗುರುತಿಸಿ ಅಭಿನಂದಿಸಲಾಯಿತು.
ಕಾರ್ಯದರ್ಶಿ ವಿನೀತ್ ಕುಮಾರ್ 2017-18 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.ಪುಷ್ಪರಾಜ್ ಸ್ವಾಗತಿಸಿದರು, ದೀಕ್ಷಿತ್ ಸಿ.ಎಸ್ ಧನ್ಯವಾದ ನೀಡಿದರು, ಪ್ರತೀಶ್ ಗೌರೀಶ್, ಪವಿತ್ರ ಸಂತೋಷ್, ಸುಜಿತ್ ರಾಜ್ ಐ ಕಾರ್ಯಕ್ರಮ ನಿರೂಪಿಸಿದರು
Congratulations kulur. Keep it up