ಮೂಡಬಿದ್ರೆ : ಬಹುಮುಖ ನೆಲೆಗಳಿಂದ ಶಿಕ್ಷಣವು ದೊರೆತಾಗ ಮಾತ್ರ ಬದುಕಿನ ನಡೆ ಜ್ಞಾನದ ಹಾದಿಯಾಗುತ್ತದೆ. ಪಠ್ಯ ಕೇಂದ್ರಿತ ಶಿಕ್ಷಣವು ಅಂಕಗಳನ್ನೇ ಮಾನದಂಡವಾಗಿಸಿದೆ. ಸ್ಪರ್ಧಾತ್ಮಕವಾದ ಆಧುನಿಕ ಶಿಕ್ಷಣ ಕ್ರಮವು ವಿದ್ಯಾರ್ಥಿಗಳನ್ನು ಬದುಕಿನ ಜೀವನಾನುಭವಗಳಿಂದ ವಂಚಿತವನ್ನಾಗಿಸಿದೆ. ಪಕೃತಿ ವರವಾದ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಸಂಸ್ಕಾರವು ಇಲ್ಲವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಬದುಕಿನಲ್ಲಿ ಎದುರಾಗುವ ಸವಾಲು, ಆತಂಕವನ್ನು ಎದುರಿಸಲು ನೈತಿಕ ಸ್ಥೈರ್ಯ ಇಲ್ಲಾವಾಗಿ ಅದೆಷ್ಟೋ ವಿದ್ಯಾರ್ಥಿಗಳು ಆತ್ಮಹತ್ಯೆ ರೂಪದ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಶೋಚನೀಯ ಸಂಗತಿ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು.
ಅವರು ದಿನಾಂಕ 28.04.2018 ನೇ ಶನಿವಾರ ಯುವವಾಹಿನಿ (ರಿ) ಮೂಡಬಿದ್ರೆ ಘಟಕದ ಆಶ್ರಯದಲ್ಲಿ ಶೀ ನಾರಾಯಣಗುರು ಸೇವಾದಳ ಮೂಡಬಿದ್ರೆ, ಶ್ರೀ ನಾರಾಯಣಗುರು ಮಹಿಳಾ ಘಟಕ ಹಾಗೂ ಮೂಡಬಿದ್ರೆ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಇದರ ಸಹಯೋಗದೊಂದಿಗೆ ಮೂಡಬಿದ್ರೆ ನಾರಾಯಣಗುರು ಸಭಾಭವನದಲ್ಲಿ ಜರುಗಿದ ಶಿಕ್ಷಣ, ವಿದ್ಯಾರ್ಥಿ ವೇತನ, ವೃತ್ತಿ ಮಾರ್ಗದರ್ಶನ ಭವಿಷ್ಯ ನಿರ್ಮಾಣ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮೂಡಬಿದ್ರೆ ನಿಷ್ಮಿತಾ ಟವರ್ಸ್ ಮಾಲೀಕರಾದ ನಾರಾಯಣ ಪಿ.ಎಮ್ ಕಾರ್ಯಾಗಾರ ಉದ್ಘಾಟಿಸಿದರು. ಯುವವಾಹಿನಿ (ರಿ) ಮೂಡಬಿದ್ರೆ ಘಟಕದ ಅಧ್ಯಕ್ಷರಾದ ರಾಜೇಶ್ ಡಿ.ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಮೂಡಬಿದ್ರೆ ಘಟಕ ಹಾಗೂ ಪುಣ್ಯ ಭೂಮಿ ತುಳುನಾಡ ಸೇವಾ ಟ್ರಸ್ಟ್ ವತಿಯಿಂದ ಕಿಡ್ನಿ ವೈಫಲ್ಯ ದಿಂದ ಬಳಲುತ್ತಿರುವ, ಮಂಗಳೂರು ತಾಲೂಕು ದರೆಗುಡ್ಡೆ ಕೆಲ್ಲಪುತ್ತಿಗೆಯ ಮೇಲಿನ ಮನೆಯ ಡೊಂಬಯ್ಯ ಪೂಜಾರಿ ಎಂಬವರ ಮಗಳು ಬಡ ಕುಟುಂಬದ ಪೂಜಾ ಪೂಜಾರಿ ಇವರಿಗೆ ವೈದ್ಯಕೀಯ ನೆರವು ರೂ 15,000/- ಹಸ್ತಾಂತರಿಸಲಾಯಿತು ಹಾಗೂ ಮಂಗಳೂರು ತಾಲೂಕಿನ ನೆಲ್ಲಿಕಾರ್ ನಿವಾಸಿ ಮನೋಜ್ ಪೂಜಾರಿ ಕಡು ಬಡತನದ ಲ್ಲಿ ಬದುಕುತ್ತಿರುವ ಇವರಿಗೆ ರೂ 5,000/- ವೈದ್ಯಕೀಯ ನೆರವು ನೀಡಲಾಯಿತು.
ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗದ ಉಪನ್ಯಾಸಕರಾದ ಸುಧೀಂದ್ರ ಜೆ.ಶಾಂತಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮೂಡಬಿದ್ರೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ರವೀಂದ್ರ ಎಮ್.ಸುವರ್ಣ, ಮೂಡಬಿದ್ರೆ ನಾರಾಯಣಗುರು ಸೇವಾದಳದ ಅಧ್ಯಕ್ಷರಾದ ರಮೇಶ್ ಅಮಿನ್, ಮೂಡಬಿದ್ರೆ ನಾರಾಯಣಗುರು ಮಹಿಳಾ ಘಟಕದ ಅಧ್ಯಕ್ಷರಾದ ಮಾಲತಿ ಗೋಪಿನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೇಸೀ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಹಾಗೂ ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ನ ಗೌರವ ವಿಶ್ವಸ್ಥರು ಚಂದ್ರಶೇಖರ್ ಎಸ್.ಎಡಪದವು ಭವಿಷ್ಯ ನಿರ್ಮಾಣ ಕಾರ್ಯಾಗಾರ ನಡೆಸಿಕೊಟ್ಟರು.
ಯುವವಾಹಿನಿ (ರಿ) ಮೂಡಬಿದ್ರೆ ಘಟಕದ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್ ಸ್ವಾಗತಿಸಿದರು ಕಾರ್ಯದರ್ಶಿ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಅಮೀನ್ ಧನ್ಯವಾದ ನೀಡಿದರು.