ಯಡ್ತಾಡಿ : ವಿದ್ಯಾರ್ಥಿ ಜೀವನದಲ್ಲಿ ಸಿಗುವ ವಿಪುಲವಾದ ಅವಕಾಶವನ್ನು ಬಳಸಿಕೊಂಡರೆ ಜೀವನದಲ್ಲಿ ಉನ್ನತ ಮಟ್ಟಕ್ಕೇರಲು ಸಾಧ್ಯ , ಇಂತಹ ಶಿಬಿರದಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಪಡೆಯಲು ಉತ್ತಮ ಅವಕಾಶ ಲಭಿಸುತ್ತವೆ ಎಂದು ಯುವವಾಹಿನಿ (ರಿ) ಯಡ್ತಾಡಿ ಘಟಕದ ಅಧ್ಯಕ್ಷರಾದ ಶಂಕರ ಪೂಜಾರಿ ತಿಳಿಸಿದರು
ಅವರು ದಿನಾಂಕ 15.04.2018 ನೇ ಆದಿತ್ಯವಾರ ಯುವವಾಹಿನಿ (ರಿ) ಯಡ್ತಾಡಿ ಘಟಕ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಯಡ್ತಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಕಸನ 2018 ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಯಡ್ತಾಡಿ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಿಠ್ಠಲ ಹೆಗ್ಡೆ ಶಿಬಿರ ಉದ್ಘಾಟಿಸಿದರು. ಶಿಬಿರದ ಸಂಯೋಜಕ ನರೇಂದ್ರ ಕುಮಾರ್ ಕೋಟ ಮಾತನಾಡಿ ಜಾತಿ, ಮತ ಭೇದವಿಲ್ಲದೆ ಒಂದಾಗಿ ಬದುಕುವುದನ್ನು ಶಿಬಿರದಲ್ಲಿ ಭಾಗವಹಿಸುವ ಮೂಲಕ ಅರ್ಥ ಮಾಡಿಕೊಳ್ಳಲು ಸಾಧ್ಯ . ನಮ್ಮಲ್ಲಿರುವ ತಪ್ಪುಗಳನ್ನು ತಿದ್ದಿಕೊಂಡು ಹೊಸತನ ಹೊಸ ಅನುಭವ ಕಲಿಕೆ ಇಂತಹ ಶಿಬಿರಗಳಿಂದ ಸಾಧ್ಯ ಎಂದರು.
ಯಡ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಾ ಮಾತನಾಡಿ ಮಕ್ಕಳಲ್ಲಿರುವ ಸೃಜನಶೀಲತೆ, ಬುದ್ಧಿಮತ್ತೆಗಳು ವಿಕಸನ ಶಿಬಿರಗಳ ಮೂಲಕ ಇನ್ನಷ್ಟು ಜಾಗೃತ ಕೊಳ್ಳುತ್ತವೆ ಎಂದರು.
ಉದ್ಯಮಿ ಮಹಮ್ಮದ್ ರಫೀಕ್ ಗುತ್ತಿಗೆದಾರ ದಿವಾಕರ ಶೆಟ್ಟಿ, ಉದ್ಯಮಿ ಕೃಷ್ಣ ನಾಯ್ಕ ಶಿರಿಯಾರ, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ, ನಡೂರು ಚಿಗುರು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಅಲ್ತಾರು ನಾಗರಾಜ್ , ಕಾರ್ಯದರ್ಶಿ ಎ.ಕೆ.ಶೆಟ್ಟಿ ನಡೂರು, ಕೋಟ ಸಮರ್ಪಣಾದ ನಿರ್ದೇಶಕರಾದ ಸತೀಶ್ ವಡ್ಡರ್ಸೆ , ಯಡ್ತಾಡಿ ಸೌಜನ್ಯ ಯುವಕ ಮಂಡಲದ ಅಧ್ಯಕ್ಷರಾದ ಶರತ್ ಆಚಾರ್ , ಸಾಯಿಬ್ರಕಟ್ಟೆ ವಿನಾಯಕ ಯುವಕ ಮಂಡಲದ ಅಧ್ಯಕ್ಷರಾದ ಶರತ್ ಪೂಜಾರಿ, ಯಡ್ತಾಡಿ ಅಲ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಮಹೇಶ್ ಪೂಜಾರಿ ಉಪಸ್ಥಿತರಿದ್ದರು. ಯುವವಾಹಿನಿ ಯಡ್ತಾಡಿ ಘಟಕದ ಅಜಿತ್ ಕುಮಾರ್ ಸ್ವಾಗತಿಸಿದರು. ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು