Yuvavahini

MAR 27, 2018 3.53 PM IST

ರ್ನಾಟಕ ತುಳು ಸಾಹಿತ್ಯಅಕಾಡೆಮಿಯ ನಾಟಕ ಪರ್ಬ

ಕೋಟಿ ಚೆನ್ನಯ ನಾಟಕಕ್ಕೆ ಹೊಸ ಛಾಪು ಮೂಡಿಸಿದ ಯುವವಾಹಿನಿ ಕಲಾವಿದರು

ಕಥೆಗಾರ,ಕಾದಂಬರಿಗಾರ,ನಾಟಕಗಾರ ದಿ.ವಿಶುಕುಮಾರ್‌ ಅವರ ಕೋಟಿ ಚೆನ್ನಯ ನಾಟಕಕ್ಕೆ ಮರ ಜೀವ ತುಂಬಿದ ಯುವವಾಹಿನಿ ಕಲಾವಿದರು ಇಂದು ತುಳು ನಾಟಕರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ.

ಕರ್ನಾಟಕ ತುಳು ಸಾಹಿತ್ಯಅಕಾಡೆಮಿ ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆಸಿದ ಎಂಟು ದಿನಗಳ ನಾಟಕ ಪರ್ಬದಲ್ಲಿ ಯುವವಾಹಿನಿನಿಯ ೫೧ ಮಂದಿ ಕಲಾವಿದರು ವಿಶುಕುಮಾರ್‌ ಅವರ ಕೋಟಿಚೆನ್ನಯ ನಾಟಕ ಅಭಿನಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.ಐದು ದಶಕದ ಹಿಂದೆ ತುಳು ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ್ದ, ಬಳಿಕ ಸಿನಿಮವಾಗಿ ಪ್ರೇಕ್ಷಕರ ಮನ ಗೆದ್ದ ಕೋಟಿಚೆನ್ನಯ ನಾಟಕ ಯಾವುದೇ ಪರಿವರ್ತನೆಗಳಿಲ್ಲದೆ ವೇದಿಕೆಯಲ್ಲಿ ಪ್ರದರ್ಶನಗೊಂಡಿತು.

 

ಕೋಟಿಚೆನ್ನಯರ ಬಂಧನಕ್ಕೆಕುಟಿಲ ತಂತ್ರ ಹೆಣೆಯುವ ಕೇಮಾರ್ ಬಲ್ಲಾಳರಾಗಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಮಿಂಚಿದ್ದು ಮೊದಲ ನಾಟಕದಲ್ಲಿಯೇ ಸೈ ಎಣಿಸಿಕೊಂಡರು. ಪೆರುಮಲ ಬಲ್ಲಾಳರಾಗಿ ಸಸಿಹಿತ್ಲು ಘಟಕದ ಪ್ರದೀಪ್, ಬುದ್ದಿವಂತನಾಗಿ ಶೈಲೇಶ್ ಸಸಿಹಿತ್ಲು, ಕೋಟಿಯಾಗಿ ಮಂಗಳೂರು ಘಟಕದ ರಾಜಶೇಖರ್, ಚೆನ್ನಯನಾಗಿ ರಾಕೇಶ್ ಕುಮಾರ್ , ಸಣ್ಣ ಕೋಟಿಯಾಗಿ ರಕ್ಷಿತ್‌ಯಶವಂತ್, ಚೆನ್ನಯನಾಗಿ ರಜತ್ ಸಸಿಹಿತ್ಲು, ದೇಯಿಯಾಗಿ ರಾಜೇಶ್ವರಿ ಮೂಲ್ಕಿ, ಕಿನ್ನಿದಾರುವಾಗಿ ಮಹಿಳಾ ಘಟಕದ ಅಮಿತಾಗಣೇಶ್, ಬೂಡಿ ಬೊಮ್ಮಯ್ಯರಾಗಿ ಜಯಕುಮಾರ್ ಮೂಲ್ಕಿ, ಚಾವಡಿ ಸಾಂತಯ್ಯನಾಗಿ ಸುನೀಲ್ ಕೆ. ಅಂಚನ್,ಅಬ್ಬೆಯಾಗಿ ರಕ್ಷಿತಾಯೋಗೀಶ್ ಮೂಲ್ಕಿ,ಸಾಯನ ಬೈದ್ಯನಾಗಿ ಕೃಷ್ಣ ಬಜ್ಪೆ, ಪಯ್ಯನಾಗಿ ಮಾಧವಕೋಟ್ಯಾನ್,ಚಾಮುಂಡ ಬೈದ್ಯನಾಗಿ ನಿತಿನ್ ಪಣಂಬೂರು, ಕಿನ್ನಿಚೆನ್ನಯನಾಗಿ ರಂಜನ್ ಪಣಂಬೂರು, ಮಂಜು ಪೆರ್ಗಡೆಯಾಗಿ ದೇವರಾಜ್ ಬಜ್ಪೆ,ಸೈನಿಕರಾಗಿ ಮಂಗಳೂರು ಘಟಕದ ಅಧ್ಯಕ್ಷರಾದ ನವೀನ್‌ಚಂದ್ರ, ಗಣೇಶ್, ಅಮಣ ಬಣ್ಣಾಯ ಮಾಧವ ಬಜ್ಪೆ,ಸುಂಕದದೇರೆ ಯೋಗೀಶ್ ಬಜ್ಪೆ, ಓಲೆಕಾರ ಮೋಹನ್‌ದಾಸ್, ಜಟ್ಟಿ ರಾಜೇಶ್‌ ಐಡಿಯಲ್, ಭಾಸ್ಕರ ಪೂಜಾರಿ, ಕಮಲಾಕ್ಷ, ದಾಮೋದರ, ಗಣೇಶ್‌ವಿ, ಶ್ರೀಕಾಂತ್, ಸುರೇಶ್‌ಕೊಲೆಯ, ಮೋಹನ್‌ದಾಸ್ ಮಾಲೆಮಾರ್, ಗೋಪಾಲ್ ಮಾಲೆಮಾರ್, ಶ್ರೀಕಾಂತ್ ಸುವರ್ಣ, ಸುನೀತಾ, ಜಯಗಣೇಶ್ , ವಸಂತಿ, ಅಭಿನಯಿಸಿದ್ದರು. ನಾಟಕದ ಸಂಪೂರ್ಣ ನಿರ್ವಹಣೆ: ಹರೀಶ್ ಕೆ ಪೂಜಾರಿ ಇವರದ್ದು ಸಂಗೀತ ವಿಶ್ವನಾಥ ನೆಲ್ಯಾಡಿ,ಸಹಕಾರ ,ಮಧು ಬಂಗೇರಕಲ್ಲಡ್ಕ ಮತ್ತು ರಾಜೇಶ್ ಬಂಟ್ವಾಳ, ಮುಖವರ್ಣಿಕೆ ವರ್ಣಕಲಾಆರ್ಟ್ಸ್ ಮಂಗಳೂರುಇವರು ನೀಡಿದ್ದು ನಾಟಕವನ್ನುಯುವವಾಹಿನಿ ಕೇಂದ್ರ ಸಮಿತಿಯಉಪಾಧ್ಯಕ್ಷರಾದ ನರೇಶ್‌ಕುಮಾರ್ ಸಸಿಹಿತ್ಲು ನಿರ್ದೇಶಿಸಿದ್ದರು.

2 thoughts on “ಕೋಟಿ ಚೆನ್ನಯ ನಾಟಕಕ್ಕೆ ಹೊಸ ಛಾಪು ಮೂಡಿಸಿದ ಯುವವಾಹಿನಿ ಕಲಾವಿದರು

  1. ಅತ್ಯದ್ಬುತವಾಗಿ ನಾಟಕಗಳು ಮೂಡಿ ಬ೦ದಿದೆ..

  2. Yuva vahini has good potential to produce abundant number of new quality artists. Keep it up.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!