Yuvavahini

APR 08, 2018 2.20 AM IST

ತೊಟ್ಟಿಲು ತೂಗಿದ ಕೈ ಎಲ್ಲದಕ್ಕೂ ಸೈ ಎಂದು ತೋರಿಸಿಕೊಟ್ಟ ಸಾಧಕಿಯರೊಂದಿಗೆ ಸಖೀ‌ ಸಂವಾದ

ಬದುಕಿನ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದಾಗ ಯಶಸ್ಸು ಸಾಧ್ಯ : ಸುಮತಿ

 ಉಡುಪಿ :  ಬದುಕಿನ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದಾಗ ಯಶಸ್ಸು ಸಾಧ್ಯ ಹಾಗೂ ತನ್ನ ಸಾಧನೆಯ ಹಿಂದೆ ಕಷ್ಟದ ದಿನಗಳಿದ್ದವು ಅವೆಲ್ಲವನ್ನು ಸವಾಲಾಗಿ ಸ್ವೀಕರಿಸಿ ಬದುಕಿನಲ್ಲಿ ಯಶಸ್ವೀಯಾಗಿದ್ದೇನೆ ಎಂದು ಶಾಲಾ ಮಕ್ಕಳ ಮಹಿಳಾ ವಾಹನ ಚಾಲಕಿ ಸುಮತಿ ತಿಳಿಸಿದರು.

ಅವರು ದಿನಾಂಕ 08.04.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ಜರುಗಿದ ತೊಟ್ಟಿಲು ತೂಗಿದ ಕೈ ಎಲ್ಲದಕ್ಕೂ ಸೈ ಎಂದು ತೋರಿಸಿಕೊಟ್ಟ ಸಾಧಕಿಯರೊಂದಿಗೆ ಸಖೀ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ತೊಟ್ಟಿಲು ತೂಗಿದ ಕೈ ಎಲ್ಲದಕ್ಕೂ ಸೈ ಎಂದು ತೋರಿಸಿಕೊಟ್ಟ ಸಾಧಕಿಯರೊಂದಿಗೆ ಸಖೀ ಸಂವಾದ ಕಾರ್ಯಕ್ರಮವನ್ನು ಉಷಾ ನಾರಾಯಣ್ ಇವರು ಸಾಂಕೇತಿಕವಾಗಿ ತೊಟ್ಟಲು ತೂಗಿ ತೊಟ್ಟಲೊಳಗಿಂದ ಸಾಧಕಿಯರಿಗಾಗಿ ಹೂವನ್ನೆತ್ತಿ ಕೊಡುವ ಮೂಲಕ ವಿಶಿಷ್ಠವಾದ ರೀತಿಯಲ್ಲಿ ಉದ್ಘಾಟಿಸಿದರು.

ಮಹಿಳೆಯರಿಗೆ ಅವರದೇ ಆದ ಹಕ್ಕು ಭಾದ್ಯತೆಗಳಿವೆ , ಎಲ್ಲರ ಕಷ್ಟಸುಖಗಳಿಗೆ ಸ್ಪಂದಿಸುವ ಆಕೆ ಸಮಸ್ಯೆಗಳನ್ನು ಸಮಾಧಾನದಿಂದ ನಿಭಾಯಿಸುವವಳು, ಮಹಿಳೆಯರ ಮಾನಸಿಕ‌ ಸ್ಥಿತಿ ಗತಿಯ ಬೆಳವಣಿಗೆಗೆ ಸಖೀ ಸಂವಾದ ಪೂರಕವಾಗಿದೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು.

ಸಖೀ ಸಂವಾದ :
ತನ್ನ ತಂದೆಯ ಸಹಕಾರದಿಂದ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಯಿತು, ಗಾಡಿಯ ಎರಡು ಚಕ್ರದಂತೆ ಗಂಡು ಹೆಣ್ಣು ಇಬ್ಬರ ಶಕ್ತಿ ಸೇರಿದಾಗ ಬದುಕಿನಲ್ಲಿ ಯಶಸ್ಸು ಸಾಧ್ಯ ಎಂದು ಮಹಿಳಾ ಉದ್ಯಮಿ ರೇಣು ಜಯರಾಮ್ ತಿಳಿಸಿದರು.

ಹೆಣ್ಣು ಕಲಿತರೆ ಶಾಲೆ ತೆರೆದಂತೆ, ಹೆಣ್ಣು ತ್ಯಾಗಮಯಿ ಮುಂತಾದ ಮಾತುಗಳಿಂದ ಬಂಗಾರದ ಸೂಜಿಯಿಂದ ಚುಚ್ಚಿದಂತೆ, ಮುತ್ತಿನ ಸರಪಳಿಯಿಂದ ಬಂಧಿಸಿದಂತೆ ಇಂತಹ ಕ್ಷುಲ್ಲಕ ಮಾತುಗಳಿಂದ ಹೆಣ್ಣಿನ ಬೆಳವಣಿಗೆ ಸಾಧ್ಯವಿಲ್ಲ, ವ್ಯಕ್ತಿತ್ವ ವಿಕಸನದ ಮೂಲಕ ಮಾತ್ರ ಹೆಣ್ಣಿನ ಬೆಳವಣಿಗೆ ಸಾಧ್ಯ, ಬದುಕು ಅಂದ್ರೆ ಸಾಹಿತ್ಯ ಅದೇ ರೀತಿ ಸಾಹಿತ್ಯ ಅಂದ್ರೆ ಬದುಕು, ಸಾಹಿತ್ಯದ ಮೂಲಕ ಗೋಡೆಗಳನ್ನು ಒಡೆದು ಹೀಗೂ ಬದುಕಬಹುದು ಎಂದು ತೋರಿಸಬಹುದು. ಹೆಣ್ಣು ಮಕ್ಕಳಲ್ಲಿ ಸಹೋದರಿಯತ್ವ ಇಲ್ಲದಿರುವುದೇ ವಿಷಾದದ ವಿಚಾರ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕರಾದ ಸುಧಾರಾಣಿ ಅಭಿಪ್ರಾಯ ಪಟ್ಟರು.

ಋಣಾತ್ಮಕ ಚಿಂತನೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಶೇಕಡಾ 90 ಕ್ಕೂ ಹೆಚ್ಚು ಪುರುಷ ಸಹೋದ್ಯೋಗಿಗಳ ಜತೆ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ. ಬದುಕಿನಲ್ಲಿ ಎಲ್ಲಾ ಒತ್ತಡವನ್ನು ತಾಳ್ಮೆ, ಸಹನೆಯಿಂದ ನಿರ್ವಹಿಸಿದ್ದೇನೆ ಎಂದು ಮಹಿಳಾ ಪೋಲಿಸ್ ಉಪಠಾಣಾಧಿಕಾರಿ ಮುಕ್ತ ತಿಳಿಸಿದರು.

ನಿರಂತರ ಕಲಿಕೆಯಿಂದ ಸಾಧನೆ ಸಾಧ್ಯ, ತನ್ನ ವೃತ್ತಿ ಬದುಕಿನಲ್ಲಿ ಕಂಡಿರುವ ಎಲ್ಕಾ ಸಮಸ್ಯೆಗಳ ಬುಡ ಮನೆ ಮತ್ತು ಹೆತ್ತವರು ಆಗಿದ್ದಾರೆ, ಆದ್ದರಿಂದ ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ‌ ಗುರು ಎಂದು ಆಪ್ತ ಸಮಾಲೋಚಕರಾದ ಶಿಲ್ಪಾ ಜೋಶಿ ತಿಳಿಸಿದರು.

ಭರತನಾಟ್ಯ ಕಲಾವಿದೆ ಮಾನಸಿ ಸುಧೀರ್ ತನ್ನ ಸಾಧನೆಯ ಹಿಂದಿರುವ ಹೆತ್ತವರಿಗೆ ಕೃತಜ್ಞತೆ ಸಲ್ಲಿಸಿದರು.

ಲೇಖಕಿ , ರಂಗಭೂಮಿ ಕಲಾವಿದೆ ಪೂರ್ಣಿಮಾ ಸುರೇಶ್ ಸಮನ್ವಯಕಾರರಾಗಿ ಭಾಗವಹಿಸಿದ್ದರು. ಸಭಿಕರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲಾಯಿತು.

ಯುವವಾಹಿನಿ ಉಡುಪಿ ಘಟಕದ ಸಲಹೆಗಾರರಾದ ವಿಜಯ ಕುಮಾರ್ ಕುಬೆವೂರು, ಶಂಕರ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಯುವವಾಹಿನಿ ಉಡುಪಿ ಘಟಕದ ಮಹಿಳಾ ಸಂಘಟನಾ ನಿರ್ದೇಶಕರಾದ ಸುಶ್ಮಿತಾ ಗಿರಿರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ರಮೇಶ್ ಕುಮಾರ್ ಸ್ವಾಗತಿಸಿದರು, ಯುವವಾಹಿನಿ ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕರಾದ ಸಂಧ್ಯಾ ಅಶೋಕ್ ಕೋಟ್ಯಾನ್ ಪ್ರಸ್ತಾವನೆ ಮಾಡಿದರು, ಯುವವಾಹಿನಿ ಉಡುಪಿ ಘಟಕದ ಕಾರ್ಯದರ್ಶಿ ಭಾರತಿ ಭಾಸ್ಕರ್ ಸುವರ್ಣ ವಂದಿಸಿದರು, ಅಮಿತಾಂಜಲಿ ಕಿರಣ್ ಕಾರ್ಯಕ್ರಮ ನಿರೂಪಿಸಿದರು.

2 thoughts on “ಬದುಕಿನ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದಾಗ ಯಶಸ್ಸು ಸಾಧ್ಯ : ಸುಮತಿ

  1. I read over full conversation of all your respectable guests and I appreciate all of u. I really thank u that u all are doing this kind of job through yuvavahini. so all d ladies who r getting chance to prove them through this kind of programmes.

  2. ಮಹಿಳಾ ಸಬಲೀಕರಣಕ್ಕೆ ಪೂರಕವಾದ ಕಾರ್ಯಕ್ರಮ….ಉಡುಪಿ ಘಟಕಕ್ಕೆ ಶುಭವಾಗಲಿ…

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!