ಕಂಕನಾಡಿ: ಯುವವಾಹಿನಿ ಸ್ವಾಭಿಮಾನದ ಸ್ಪೂರ್ತಿ, ಸಮಾಜದಲ್ಲಿ ಸಂಘಟನೆಯ ಅರಿವು ಮೂಡಿಸಿದೆ, ಆತ್ಮವಿಶ್ವಾಸವನ್ನು ಬಿಟ್ಟು ಮಿಕ್ಕೆಲ್ಲವನ್ನೂ ಕಳಕೊಂಡರೂ ಚಿಂತೆ ಇಲ್ಲ ಎಂಬ ಗುರುವರ್ಯರ ಸಂದೇಶದಂತೆ ನಾವು ಕೀಳರಿಮೆ ಬಿಟ್ಟು ಕತ್ತಲೆಯಿಂದ ಜ್ಞಾನದ ಬೆಳಕಿನೆಡೆ ಮುನ್ನಡೆಯೋಣ , ಯುವವಾಹಿನಿಯ ನಡೆ ಜಾಗೃತ ಸಮಾಜದ ಕಡೆ ಮುಖ ಮಾಡಿದೆ ಇದು ನಿರಂತರ ಪ್ರಕ್ರಿಯೆಯಾಗಲಿ ಹಾಗೂ ಯುವವಾಹಿನಿ ಕಂಕನಾಡಿ ಘಟಕವು ಶ್ರೇಷ್ಠ ಘಟಕವಾಗಿ ಹೊರಹೊಮ್ಮಲಿ ಎಂದು ಮೆಸ್ಕಾಮ್ ಕಾರ್ಯಪಾಲಕ ಇಂಜಿನಿಯರ್ ಜಯಾನಂದ ಎಮ್ ತಿಳಿಸಿದರು
ಅವರು ದಿನಾಂಕ 01.04.2018 ರಂದು ಉಜ್ಜೋಡಿ ಶ್ರೀ ಮಹಾಕಾಂಳಿ ದೈವಸ್ಥಾನದ ವಠಾರದಲ್ಲಿ ಜರುಗಿದ ಯುವವಾಹಿನಿ(ರಿ) ಕಂಕನಾಡಿ ಘಟಕದ 2018-19 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉಜ್ಜೋಡಿ ಶ್ರೀ ಮಹಾಂಕಾಳಿ ದೈವಸ್ಥಾನದ ಅಧ್ಯಕ್ಷರಾದ ಕೆ.ಶ್ರೀನಿವಾಸ ಬಂಗೇರ ಸಮಾರಂಭ ಉದ್ಘಾಟಿಸಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಭವಿತ್ ರಾಜ್ ನೇತ್ರತ್ವದ 19 ಸದಸ್ಯರ ತಂಡವು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಮಾಜಿ ಅಧ್ಯಕ್ಷರಾದ ಹರೀಶ್ ಕೆ ಸನಿಲ್ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು
ಗುರು ಹಿರಿಯರ ಸಲಹೆ ಮಾರ್ಗದರ್ಶನ ಹಾಗೂ ಯುವವಾಹಿನಿ ಸದಸ್ಯರ ಸಹಕಾರದ ಮೂಲಕ ಕಂಕನಾಡಿ ಘಟಕವನ್ನು ಮತ್ತಷ್ಟು ಯಶಸ್ಸಿನ ಪಥದತ್ತ ಕೊಂಡೊಯ್ಯಲು ಶ್ರಮಿಸುವುದಾಗಿ ಯುವವಾಹಿನಿ (ರಿ) ಕಂಕನಾಡಿ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಭವಿತ್ ರಾಜ್ ತಿಳಿಸಿದರು.
2017-18 ನೇ ಸಾಲಿನಲ್ಲಿ ಯಶಸ್ವೀ ಕಾರ್ಯಕ್ರಮಗಳನ್ನು ನೀಡಿದ ಹಾಗೂ ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಗೋಪಾಲ ಪೂಜಾರಿಯವರು ಕಳೆದ ಒಂದು ವರ್ಷದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಸುರೇಶ್ ಎಮ್.ಎಸ್, ವೈದಿಕ ಕ್ಷೇತ್ರದ ಸಾಧನೆಗಾಗಿ ನಿತಿನ್ ಎಸ್ ಶಾಂತಿ, ಕಲಾ ಕ್ಷೇತ್ರದ ಸಾಧನೆಗಾಗಿ ಚಿತ್ರನಟ ಸೂರಜ್ ಅಮೀನ್ ಹಾಗೂ ಘಟಕದ ಸಾಂಸ್ಕೃತಿಕ ನಿರ್ದೇಶಕ ಗಣೇಶ್ ಪ್ರಸಾದ್ ಇವರ ಸಾಧನೆಯನ್ನು ಗುರುತಿಸಿ ಗೌರವಪೂರ್ವಕವಾಗಿ ಅಭಿನಂದಿಸಲಾಯಿತು.
ಎಸ್ ಆರ್ ಆರ್ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕರಾದ ಶೈಲೇಂದ್ರ ವೈ ಸುವರ್ಣ, ಶ್ರೀ ಗುರು ಸೌಹಾರ್ದ ಸಹಕಾರ ಮತ್ತು ಮಂಗಳೂರು ಬಿಲ್ಡಿಂಗ್ ಕೋ ಅಪರೇಟಿವ್ ನಿರ್ದೇಶಕರಾದ ದಯಾಮಣಿ ವಿ.ಕೋಟ್ಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಅಶೋಕ್ ಕುಮಾರ್, ಜಿತೇಂದ್ರ ಜೆ.ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಿರ್ಗಮನ ಅಧ್ಯಕ್ಷರಾದ ಗೋಪಾಲ ಎಮ್ ಪೂಜಾರಿ ನೂತನ ಅಧ್ಯಕ್ಷರಾದ ಭವಿತ್ ರಾಜ್ ಅವರಿಗೆ ಸಾಂಕೇತಿಕವಾಗಿ ಅಧಿಕಾರ ಹಸ್ತಾಂತರ ಮಾಡಿದರು.
ಕಾರ್ಯದರ್ಶಿ ಮೋಹನ್ ಅಮೀನ್ 2017-18 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಗೋಪಾಲ ಪೂಜಾರಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು, ನೂತನ ಕಾರ್ಯದರ್ಶಿ ಸುಮಾ ವಸಂತ್ ಧನ್ಯವಾದ ನೀಡಿದರು, ರಾಕೇಶ್ ಕುಮಾರ್ , ವಿದ್ಯಾ ರಾಕೇಶ್ ಹಾಗೂ ಅಶ್ವಿತಾ ಕಾರ್ಯಕ್ರಮ ನಿರೂಪಿಸಿದರು