ಕೊಲ್ಯ : ನಿರ್ದಿಷ್ಟ ಗುರಿಯೊಂದಿಗೆ , ಸಂಘಟಿತ ಸಾಧನೆಯೆಡೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸದೃಡವಾಗಲು ಯುವವಾಹಿನಿ ವೇದಿಕೆ ನಿರ್ಮಿಸಿದೆ, ಸಮಾಜದ ಎಲ್ಲಾ ವರ್ಗದವರನ್ನು ಸೇರಿಸಿಕೊಂಡು ಸಮಾಜಮುಖಿ ಕಾರ್ಯವನ್ನು ನಡೆಸುತ್ತಿರುವ ಯುವವಾಹಿನಿಯ ಕಾರ್ಯ ಶ್ಲಾಘನೀಯ ಎಂದು ಹೈಕೋರ್ಟ್ ನ್ಯಾಯವಾದಿ ನವನೀತ ಡಿ.ಹಿಂಗಾಣಿ ತಿಳಿಸಿದರು.
ಅವರು ದಿನಾಂಕ 11.03.2018 ರಂದು ಕೊಲ್ಯ ನಾರಾಯಣಗುರು ಮಂದಿರದಲ್ಲಿ ಯುವವಾಹಿನಿ (ರಿ) ಕೊಲ್ಯ ಘಟಕದ 2018-19 ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು. ಮಾಡೂರು ಶ್ರೀ ಶಿರಡಿ ಸಾಯಿ ಮಂದಿರದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಪಿ. ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟಿಸಿದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿಯವರು ಯುವವಾಹಿನಿ (ರಿ) ಕೊಲ್ಯ ಘಟಕದ ನೂತನ ತಂಡಕ್ಕೆ ಪ್ರತಿಜ್ಷಾ ವಿಧಿ ಭೊಧಿಸಿದರು.
ಕೊಲ್ಯ ಬಿಲ್ಲವ ಸಂಘದ ಅಧ್ಯಕ್ಷರಾದ ಈಶ್ವರ ಸುವರ್ಣ ಕಣೀರುತೋಟ, ಬಿರುವೆರ್ ಕುಡ್ಲ ಉಳ್ಳಾಲ ವಲಯದ ಅಧ್ಯಕ್ಷರಾದ ಚಂದ್ರಹಾಸ್, ಕುಂಪಲ ಕೇಸರಿ ಮಾತೃ ಮಂಡಳಿಯ ಅಧ್ಯಕ್ಷರಾದ ಜಯಲಕ್ಷ್ಮಿ ಮೋನಪ್ಪ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನೀಲ್ ಕೆ.ಅಂಚನ್, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಕೆ ಮಾಡಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕುಸುಮಾಕರ ಕುಂಪಲ ಮಾತನಾಡಿ ಸರ್ವರ ಸಹಕಾರದ ಮೂಲಕ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಆತ್ಮವಿಶ್ವಾಸ ಇದೆ ಎಂದರು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರುರ್ಯರ ಅಪ್ರತಿಮ ಸೇವಕರಾದ ಮಾಧವ ಪರ್ಯತ್ತೂರು, ಪುರುಷೋತ್ತಮ ಅಡ್ಕ, ಗೋಪಾಲಕೃಷ್ಣ ಸೋಮೇಶ್ವರ ಇವರುಗಳ ಸೇವೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು. ಕಳೆದ ಒಂದು ವರ್ಷದಲ್ಲಿ ಸಂಘಟನೆಯನ್ನು ಮುನ್ನಡೆಸಲು ಸಹಕರಿಸಿದ ಎಲ್ಲರಿಗೂ ನಿರ್ಗಮನ ಅಧ್ಯಕ್ಷರಾದ ಸುರೇಶ್ ಬಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಕೊಲ್ಯ ಘಟಕ, ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಷನ್, ಹೀಲ್ಸ್ ಮಂಗಳೂರು ಇವರ ಸಹಯೋಗದೊಂದಿಗೆ ಮೇರಮಜಲು ಗ್ರಾಮದ 10 ವರ್ಷ ಪ್ರಾಯದ ಕಾವ್ಯ ಕುಶಿಂಗ್ ಸಿಂಡ್ರೊಮ್ ಎಂಬ ಹಾರ್ಮೋನ್ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿರುವ ಈ ಮುಗ್ದ ಕಂದನ ವೈದ್ಯಕೀಯ ನೆರವಿಗಾಗಿ ರೂ.31,000 ಹಸ್ತಾಂತರ ಮಾಡಲಾಯಿತು.
ರವಿ ಎಸ್.ಕೊಂಡಾಣ ಸ್ವಾಗತಿಸಿದರು, ಆನಂದ ಮಲಯಾಳಕೋಡಿ ಪ್ರಸ್ತಾವನೆ ಮಾಡಿದರು, ಲತೀಶ್ ಎಂ.ಸಂಕೊಲಿಗೆ 2017-18 ನೇ ಸಾಲಿನ ವಾರ್ಷಿಕ ವರದಿ ನೀಡಿದರು, ನೂತನ ಕಾರ್ಯದರ್ಶಿ ಲತೀಶ್ ಮಾಡೂರು ಧನ್ಯವಾದ ನೀಡಿದರು, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.