Yuvavahini

FEB 15, 2018 3.23 PM IST

ಯುವ ಸಿಂಚನ : ಫೆಬ್ರವರಿ 2018

ಬಂಟ್ವಾಳದಲ್ಲಿ ‘ಡೆನ್ನಾನ… ಡೆನ್ನನ’ದ ಇಂಪು

ತುಳು ನಾಡ ವೀರ ಪುರುಷರ ಕಥೆಗಳು ಇಂದಿಗೂ ಜೀವಂತವಾಗಿದೆ ಎಂದರೆ ಅದು ತುಳುನಾಡ ಪಾಡ್ದನದ ಮೂಲಕ. ಅದು ನಮ್ಮ ಹಿರಿಯರ ಸಂಸ್ಕೃತಿಯ ಮೂಲಕ , ತುಳುನಾಡ ಸಂಸ್ಕೃತಿಯಲ್ಲಿ ಬೆರೆತು ಹೋದ ವೀರ ಪುರುಷರ, ಮಾತೆಯರ ಕಥೆಗಳು ಪ್ರಾರಂಭವಾಗುವುದೇ ಪಾಡ್ದನದ ಮೊದಲ ಎರಡು ಪದಗಳಾದ ಡೆನ್ನಾನ ಡೆನ್ನಾನದಿಂದ ಬಿ.ಸಿ ರೋಡಿನ ನಾರಾಯಣ ಗುರು ವೃತದ ಬಳಿಯಿರುವ ಸ್ಪರ್ಶ ಕಲಾಮಂದಿರದಲ್ಲಿ , ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಬಂಟ್ವಾಳ ಆತಿಥ್ಯದಲ್ಲಿ . ಡೆನ್ನಾನ ಡೆನ್ನಾನ ಎಂಬ ಸಾಂಸ್ಕೃತಿಕ ಸ್ಪರ್ಧೆ ಯುವವಾಹಿನಿ ಆಂತರಿಕ ಘಟಕಗಳಿಗೆ ನಡೆಯಿತು.
ಯುವವಾಹಿನಿ ಅಂದರೆ ನೆನಪಾಗುವುದು ಅಲ್ಲಿನ ಶಿಸ್ತು, ಸಮಯ ಪರಿಪಾಲನೆ , ಅಚ್ಚುಕಟ್ಟಾಗಿ ನ ಕಾರ್ಯಕ್ರಮ ಗಳು , 30 ವರುಷದ ಹಿಂದೆ ಮಂಗಳೂರಿನಲ್ಲಿ ಜನ್ಮ ತಾಳಿದ ಯುವವಾಹಿನಿ , ತನ್ನ ಸಮಾಜದ ಯುವ ಜನರನ್ನು ಒಂದು ಗೂಡಿಸುವ ಕೆಲಸವನ್ನು ಮಾಡುತ್ತಿದೆ ಅವರಲ್ಲಿನ ಪ್ರತಿಭೆ ಗಳನ್ನು ಹುಡುಕಿ , ಜಗತ್ತಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ವೇದಿಕೆ ನಿರ್ಮಿಸುತ್ತಿದೆ, ತನ್ನ ಚಟುವಟಿಕೆಗಳಿಂದ ವಿಭಿನ್ನವಾಗಿ ಕಾಣುವ ಯುವವಾಹಿನಿ ತಾನು ಉಳಿದ ಸಂಘಟನೆಗಳಿಗಿಂತ ಹೇಗೆ ಭಿನ್ನ ಎಂದು ತೋರಿಸಿ ಕೊಟ್ಟಿದೆ. ಹಾಗು ತನ್ನ ಸಾಮಾಜಿಕ ಬದ್ಧತೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳಿಗೆ ಮೆಚ್ಚುಗೆಯನ್ನು ಪಡೆದ ಸಂಘಟನೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನ ಮುಡಿಗೆರಿಸಿದೆ.

ಮಂಗಳೂರಿನ ಯುವವಾಹಿನಿ ಪ್ರಾರಂಭವಾದ ಮುಂದಿನ ವರ್ಷ ಅಂದರೆ 1988ರಲ್ಲಿ ಬಂಟ್ವಾಳದಲ್ಲಿ ಯುವವಾಹಿನಿ ಘಟಕ ಆರಂಭವಾಯಿತು , ಕೇಂದ್ರ ಸಮಿತಿಯ ಎಲ್ಲ ಸಮಾಜ ಮುಖಿ ಕೆಲಸ ಗಳಿಗೆ ಹೆಗಲನ್ನು ಕೊಡುತ್ತಿದ್ದ ಬಂಟ್ವಾಳ ಘಟಕ ಅದರ ಸಹಯೋಗದೊಂದಿಗೆ ಹಲವಾರು ಕಾರ್ಯಕ್ರಮ ಗಳನ್ನು ಮಾಡಿಕೊಂಡು ಬಂದಿವೆ ಹಾಗೂ ಉಳಿದೆಲ್ಲಾ ಘಟಕಗಳಿಗಿಂದ ಆತಿಥ್ಯದಲ್ಲಿ ತನ್ನದೇ ಆದ ಹೆಸರನ್ನು ಪಡೆದುಕೊಂಡಿದೆ. ಯುವವಾಹಿನಿ (ರಿ ) ಬಂಟ್ವಾಳ ಘಟಕದ 2013ರಲ್ಲಿ ಭುವನೇಶ್ ಪಚ್ಚಿನಡ್ಕರವರ ಅಧ್ಯಕ್ಷಾವಧಿಯಲ್ಲಿ ಜರುಗಿದ ಗುರುಸಂದೇಶ ಯಾತ್ರೆ ಹಾಗೂ ಯುವ ಬಿಲ್ಲವ ಸಮಾವೇಶ, 2015 ರಲ್ಲಿ ರಾಜೇಶ್ ಸುವರ್ಣರವರ ಅಧ್ಯಕ್ಷಾವಧಿಯಲ್ಲಿ ಮೆಲ್ಕಾರ್ ಬಿರ್ವ ಆಡಿಟೋರಿಯಂ ನಲ್ಲಿ ಜರುಗಿದ ಯಶಸ್ವಿ ಯುವವಾಹಿನಿಯ ವಾರ್ಷಿಕ ಸಮಾವೇಶ , ಇದರೊಂದಿಗೆ ಇವರ ಆತಿಥ್ಯದಲ್ಲಿ ನಡೆದ ಡೆನ್ನಾನ ಡೆನ್ನಾನ ಸಾಂಸ್ಕತಿಕ ಸ್ಪರ್ಧೆ ಇತಿಹಾಸದ ಪುಟವನ್ನು ಸೇರಿದೆ.
ಡೆನ್ನಾನ ಡೆನ್ನಾನ 2018 ರ ವಿಶೇಷತೆಗಳು
ಈಗಾಗಲೆ 28 ಘಟಕಗಳನ್ನು ಹೊಂದಿರುವ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು , ಕಾರ್ಯಕ್ರಮಗಳಿಗೆ ಅಗಮಿಸಿದ ಎಲ್ಲಾ ಸದಸ್ಯರಿಗೂ ಆರತಿ ಎತ್ತಿ ಸ್ವಾಗತ ಮಾಡಲಾಯಿತು. ತನ್ನ ಎಲ್ಲ ಘಟಕಗಳ ಹೆಸರನ್ನು ಒಳಗೊಂಡ ಆಕರ್ಷಕ ದ್ವಾರಗಳು ಮತ್ತು ವರ್ಣರಂಜಿತ ಬಣ್ಣದ ಕೊಡೆಗಳು ಸ್ಪರ್ಶ ಕಲಾಮಂದಿರಕ್ಕೆ ಮೆರುಗನ್ನು ನೀಡುತ್ತಿದ್ದವು . ತುಳುನಾಡ ಸಂಸ್ಕೃತಿ, ಜಾನಪದ ವನ್ನು ನೆನಪಿಸುವ ಕಾರ್ಯಕ್ರಮದ ಉದ್ಘಾಟನೆಯ ಮೊದಲು ಯುವವಾಹಿನಿ ಚಿಹ್ನೆಯನ್ನು ಒಳಗೊಂಡ ಧ್ವಜದ ಆರೋಹಣ, ವೈಶಿಷ್ಟ್ಯ ಪೂರ್ಣ ವಾದ ಧ್ವಜ ಸ್ಠoಭವನ್ನು ನಿರ್ಮಿಸಲಾಗಿತ್ತು.
ತನ್ನ 28 ಘಟಕಗಳ ನೆನಪಿಗಾಗಿ 28 ಬಾರಿ ಡೋಲು ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. 28 ಘಟಕದಲ್ಲಿ ಹೆಚ್ಚಿನ ತಂಡಗಳು , ಸ್ಪರ್ಧೆಯಲ್ಲಿ ತಮ್ಮ ಕೌಶಲ್ಯಗಳನ್ನು ಸಭಿಕರಿಗೆ ತೋರಿಸಿದರು , ಈ ಮೂಲಕ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು .
ಇಲ್ಲಿ ಇಷ್ಟವಾಗಿದ್ದು ಬಂದ ಅತಿಥಿಗಳಿಗೆ ಮಾತನಾಡಲು ಸ್ವಲ್ಪವೇ ಸಮಯ ಮೀಸಲಿಟ್ಟಿದ್ದು ಇದರಿಂದ ಸಭಿಕರಿಗೆ ಬೋರ್ ಆಗಿರಲಿಲ್ಲ ಎಲ್ಲರೂ ಮನೂರಂಜನೆಯ ರಸದ ಕಡಲಿನಲ್ಲಿ ತೇಲಾಡಿದರು .
ಭಾಗವಹಿಸಿದ ಹೆಚ್ಚಿನ ತಂಡಗಳ ಪ್ರಯತ್ನ ಚೆನ್ನಾಗಿತ್ತು ಆದರೆ ಬಹುಮಾನ ಸಿಗುವುದು ಒಂದು ತಂಡಕ್ಕೆ ಮಾತ್ರ . ತುಳುನಾಡ ಜಾನಪದದಲ್ಲಿ ಬರುವ ದೈಯಿ ಬೈದೆತಿಯ ಜೀವನ ಕಥೆಯನ್ನು ಹತ್ತು ನಿಮಿಷಗಳಲ್ಲಿ ಸೇರಿದ್ದ ಸಭಿಕರಿಗೆ ಪರಿಚಯ ಮಾಡಿದ ಮೂಡಬಿದಿರೆ ಯುವವಾಹಿನಿ ಘಟಕವು ಈ ಸ್ಪರ್ಧೆಯಲ್ಲಿ ಜಯದ ಮಾಲೆಯನ್ನು ಕೊರಳಿಗೆ ಹಾಕಿತು.
ಕೇಳಿದಷ್ಟು ಇನ್ನೂ ಕೇಳಬೇಕೆನ್ನಿಸುವ ದಿನೇಶ್ ಸುವರ್ಣ ಹಾಗೂ ರಾಜೇಶ್ ಸುವರ್ಣ ಪರಿಕಲ್ಪನೆಯ, ಭಾಸ್ಕರ್ ರಾವ್ ಬಿ ಸಿ ರೋಡ್ ಹಾಡಿರುವ “ಯುವವಾಹಿನಿಯೆ ಬೀರುವೆರೇ ಯುವ ಸಂಘಟನೆ ಹಾಡು ……ಮತ್ತೆ ಮತ್ತೆ ಕೇಳಬೇಕು ಅನಿಸುವಂತೆ ಮಾಡಿತು.
ಒಟ್ಟಾರೆ ಬಂಟ್ವಾಳ ಯುವವಾಹಿನಿ ಘಟಕ ಏರ್ಪಡಿಸಿದ ಡೆನ್ನಾನ ಡೆನ್ನಾನ ಕಾರ್ಯಕ್ರಮ ಅದ್ಬುತವಾಗಿ ಮೂಡಿಬಂದಿತು.

ರವಿ ಮೂಡುಕೊಣಾಜೆ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!