ದಿ. 18-09-2016 ರಂದು ಕುಳಾಯಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಯುವವಾಹಿನಿ ಸುರತ್ಕಲ್ ಘಟಕದ ವತಿಯಿಂದ ಗುರುಜಯಂತಿ ಪ್ರಯುಕ್ತ ಶ್ರೀ ಗುರುಸ್ಮರಣೆ ಕಾರ್ಯಕ್ರಮ ಜರಗಿತು.
ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಸುರತ್ಕಲ್ ಪರಿಸರದ ಆಮಂತ್ರಿತ ಭಕ್ತಿಗೀತೆ ಸಂಗೀತ ಬಳಗದವರಿಂದ ಭಕ್ತಿಗೀತೆ ಹಾಡುಗಾರಿಕೆ ಸಮೂಹ ಸ್ಪರ್ಧೆಯನ್ನು ಘಟಕದ ಮಾಜಿ ಅಧ್ಯಕ್ಷ ವಿಜಯ ಎಸ್. ಕುಕ್ಯಾನ್‌ರವರ ಸಂಚಾಲಕತ್ವದಲ್ಲಿ ಆಯೋಜಿಸಲಾಗಿತ್ತು.
ಭಕ್ತಿಗೀತೆ ಸ್ಪರ್ಧಾ ಕಾರ್ಯಕ್ರಮವನ್ನು ಸುರತ್ಕಲ್ ಅಕ್ಷಯ ಡೆವಲಪರ್‍ಸ್‌ನ ಮಾಲಕ ಅಕ್ಷಯ ಎನ್. ಬಂಗೇರರವರು ಉದ್ಘಾಟಿಸಿದರು. ಈ ಸ್ಪರ್ಧಾ ಕಾರ್ಯಕ್ರಮ 8 ಭಕ್ತಿಗೀತೆ ಸಂಗೀತ ಬಳಗದವರು ಭಾಗವಹಿಸಿದ್ದರು.
ಸಂಜೆ ನಡೆದ ಸಮಾರೋಪ ಹಾಗೂ ಸಭಾ ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರು ಸಂಘ ಕುಳಾಯಿ ಇದರ ಅಧ್ಯಕ್ಷ ಎಂ.ಟಿ. ಸಾಲ್ಯಾನ್‌ರವರು ಉದ್ಘಾಟಿಸಿದರು.
ಶ್ರೀ ಸುಧಾಕರ ರಾವ್ ಪೇಜಾವರರವರು ಶ್ರೀ ನಾರಾಯಣ ಗುರುಗಳ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ನಾಟಕ ಹಾಗೂ ಸಾಹಿತ್ಯ ರಂಗದಲ್ಲಿ ಸಾಧನೆಗೈದ ವಸಂತ ಅಮೀನ್, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಕೇಶವ ಪೂಜಾರಿ ಹಾಗೂ ಸಮಾಜಸೇವೆಯಲ್ಲಿ ಸಾಧನೆಗೈದ ಎನ್.ಎಸ್. ಉಮೇಶ್ ದೇವಾಡಿಗ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಹಾಗೂ 11 ಮಂದಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಯಕ್ಷಗಾನ ಹಾಗೂ ವಿವಿಧ ಕಲಾಕ್ಷೇತ್ರಗಳಲ್ಲಿ ಸಾಧನೆಗೈದು ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಪ್ರತಿಭೆ ಶ್ರೀಮತಿ ಪ್ರತೀಕ್ಷಾ ಸೌಪರ್ಣರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಗುರುಸ್ಮರಣೆ ಪ್ರಯುಕ್ತ 20-08-2016 ರಂದು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಭಾಗವಹಿಸಿದ ಎಲ್ಲ ಸಂಗೀತ ಬಳಗದವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ಸುರತ್ಕಲ್ ಘಟಕದ ಮುಖವಾಣಿ ಚಿಲುಮೆ ಪತ್ರಿಕೆಯನ್ನು ಮಹಾಬಲ ಪೂಜಾರಿ ಕಡಂಬೋಡಿ ಬಿಡುಗಡೆಗೊಳಿಸಿದರು. ಚಿಲುಮೆ ಸಂಪಾದಕ ಕೃಷ್ಣ ಪಿ. ಅಂಚನ್‌ರವರು ಕಾರ್‍ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇನ್‌ಫೋಸಿಸ್‌ನ ಸೀನಿಯರ್ ಪ್ರಾಜೆಕ್ಟ್ ಮೆನೇಜರ್ ಭರತೇಶ್ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ ಭಾಗವಹಿಸಿದ್ದರು.
ಸುರತ್ಕಲ್ ಘಟಕದ ಅಧ್ಯಕ್ಷ ಭಾಸ್ಕರ್ ಸಾಲ್ಯಾನ್ ಅಗರಮೇಲುರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್‍ಯದರ್ಶಿ ವಿವೇಕ್ ಬಿ. ಕೋಟ್ಯಾನ್ ಹಾಗೂ ಕಾರ್ಯಕ್ರಮ ಸಂಚಾಲಕ ಕಿಶೋರ್ ಕುಮಾರ್, ಕುತ್ತೆತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ಭಾಸ್ಕರ್ ಸಾಲ್ಯಾನ್ ಅಗರಮೇಲು ಸ್ವಾಗತಿಸಿದರು. ಗಂಗಾಧರ ಪೂಜಾರಿ ಚೇಳ್ಯಾರು ಪ್ರಸ್ತಾವನೆಗ್ಯದರು. ಕಿಶೋರ್ ಕುಮಾರ್ ವಂದಿಸಿದರು. ಶ್ರೀ ಯೋಗೀಶ್ ಸನಿಲ್ ಕುಳಾಯಿ, ರಿತೇಶ್ ಕುಮಾರ್ ಮತ್ತು ಶ್ರೀ ವಿನಯ ಕುಮಾರ್ ಜೋಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಸುರತ್ಕಲ್ ಘಟಕದ ವತಿಯಿಂದ ಗುರುಜಯಂತಿ ಪ್ರಯುಕ್ತ ತಾ. 20-08-2016 ರಂದು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.