ಯುವವಾಹಿನಿ ಸಂಸ್ಥೆಯು ಯುವಕರ ಆಶಾಕಿರಣ, ಶಿಸ್ತು, ಕ್ರೀಯಾಶೀಲತೆ, ಮೂಲಕ ನಿರಂತರ ಸಮಾಜಮುಖಿ ಕಾರ್ಯಗಳನ್ನು ನೀಡುವ ಮೂಲಕ ಯುವವಾಹಿನಿಯು ಸರ್ವರ ಪ್ರೀತಿಗೆ ಪಾತ್ರವಾಗಿದೆ, ಈ ನಿಟ್ಟಿನಲ್ಲಿ ಯುವವಾಹಿನಿ ಸುರತ್ಕಲ್ ಘಟಕದ ಪಾತ್ರ ಶ್ಲಾಘನೀಯ, ಮುಂದಿನ ದಿನಗಳಲ್ಲಿ ಸುರತ್ಕಲ್ ಘಟಕ ಸಾಧನೆಯ ಶಿಖರವನ್ನೇರುವಂತಾಗಲಿ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು.
ಅವರು ದಿನಾಂಕ 26.01.2018 ನೇ ಶುಕ್ರವಾರ ಸಸಿಹಿತ್ಲು, ಅಗ್ಗದಕಳಿಯ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ (ರಿ) ಸುರತ್ಕಲ್ ಘಟಕದ 2018-19 ನೇ ಸಾಲಿನ ಪದಪ್ರಧಾನ “ಸಾರಥ್ಯ – 2018” ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ನೂತನ ಅಧ್ಯಕ್ಷರಾಗಿ ಅಶೋಕ್ ಸುವರ್ಣ ಹಾಗೂ ಕಾರ್ಯದರ್ಶಿರಂಜಿತ್ ಕುಮಾರ್ ನೇತ್ರತ್ವದ ತಂಡವು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಸಸಿಹಿತ್ಲು, ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಪ್ರಕಾಶ್ ಕುಮಾರ್ ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಮೇಶ್ ಪೂಜಾರಿ ಯುವವಾಹಿನಿ ಸುರತ್ಕಲ್ ಘಟಕದ ಸಮಾಜಮುಖಿ ಕಾರ್ಯಗಳನ್ನು ಒಳಗೊಂಡ ಚಿಲುಮೆ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಕೆ ಮಾಡಿದರು.
ಕುಳಾಯಿ, ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ವಿಠಲ ಸಾಲ್ಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಸುರತ್ಕಲ್ ಘಟಕದ ಸಲಹೆಗಾರರಾದ ಸಾಧು ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನೀಲ್ ಕೆ.ಅಂಚನ್, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ 2017-18 ನೇ ಸಾಲಿನಲ್ಲಿ ಯಶಸ್ವೀ ಕಾರ್ಯಕ್ರಮಗಳನ್ನು ನೀಡಿದ ಸವಿನೆನಪಿಗಾಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ 2017-18 ನೇ ಸಾಲಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರವೀಂದ್ರ ಕೋಟ್ಯಾನ್ ದಂಪತಿಗಳನ್ನು ಅಭಿನಂದಿಸಲಾಯಿತು. 2017-18 ನೇ ಸಾಲಿನ ವಾರ್ಷಿಕ ವರದಿಯನ್ನು ರಿತೇಶ್ ಕುಮಾರ್ ಮಂಡಿಸಿದರು, ತಾರಾ ಅಶೋಕ್ ಧನ್ಯವಾದ ನೀಡಿದರು, ರಿತೇಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು