ಯುವವಾಹಿನಿಯ ಸಮಾಜಮುಖಿ ಕಾರ್ಯ ಹೆತ್ತ ತಾಯಿಯ ಸೇವೆಗೆ ಸಮಾನವಾದುದು ,ಭಕ್ತಿ , ತ್ಯಾಗ , ಕರ್ತವ್ಯ ಪ್ರಜ್ಞೆ ಮೂಲಕ ಯುವವಾಹಿನಿ ಯುವಕರ ಮೂಲ ಪ್ರೇರಣೆ ,ಯುವವಾಹಿನಿ ಎಂಬ ದೇವಸ್ಥಾನದಲ್ಲಿ ಭಕ್ತರಂತಿರುವ ಸದಸ್ಯರು ಗುರುವರ್ಯರ ಆದರ್ಶದ ಬೆಳಕಿನಲ್ಲಿ ಮತ್ತಷ್ಟು ಪ್ರಕಾಶಮಾನರಾಗಿ ಕಂಗೊಳಿಸುತ್ತಿದ್ದಾರೆ , ಎಂದು ಜಯಾನಂದ್ ತಿಳಿಸಿದರು . ಹಿಂದುಳಿದ ಸಮಾಜದಲ್ಲಿ ತೀರಾ ಬಡತನದ ಬೇಗೆಯಲ್ಲಿ ಕೆಂಗಟ್ಟು ಮುಂದೆ ಸಾಗಲು ಪರದಾಟ ನಡೆಸುವ ಮಂದಿಗೆ ಇದೇ ಸಮಾಜದ ಸ್ಥಿತಿವರಿತರು ಮತ್ತಷ್ಟು ಸಕ್ರೀಯತೆಯಿಂದ ತೊಡಗಿಸಿಕೊಂಡು ತಮ್ಮ ಹೃದಯ ಶ್ರೀಮಂತಿಕೆಯನ್ನು ವ್ಯಕ್ತಪಡಿಸಿ ಆ ಮೂಲಕ ಸಶಕ್ತ ಯುವ ಸಮಾಜವನ್ನು ಕಟ್ಟುವಲ್ಲಿ ತಮ್ಮ ಕಾಣಿಕೆಯನ್ನು ಸದಾ ಜಾರಿಯಲ್ಲಿರಿಸಬೇಕಾಗಿದೆ, ಎಂದು ದಿನಾಂಕ ೧೧. ೦೧ . ೨೦೧೮ ರಂದು ಬಜ್ಪೆ ಬಿಲ್ಲವ ಸಂಘದಲ್ಲಿ ಜರುಗಿದ ಯುವವಾಹಿನಿ(ರಿ) ಬಜ್ಪೆ ಘಟಕದ ಪದಗ್ರಹಣ ಸಮಾರಂಭದಲ್ಲಿ ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಜಯಾನಂದ್ ಇವರು ತಮ್ಮ ದಿಕ್ಸೂಚಿ ಭಾಷಣದ ಮೂಲಕ ನಿವೇದಿಸಿಕೊಂಡರು.
ಇಂದಿನ ಯುವ ಸಮುದಾಯ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಇನ್ನಷ್ಟು ತಮ್ಮ ಶಕ್ತಿಯನ್ನು ವಿನಿಯೋಗಿಸಬೇಕೆಂದು ನಿವೃತ್ತ ಪೊಲೀಸ್ ಅಧಿಕಾರಿ ಶ್ರೀ ಶಾಂತಪ್ಪ ಮುಗ್ಡಾಲ್ ಇವರು ಇತ್ತೀಚಿಗೆ ಬಜ್ಪೆ ಬಿಲ್ಲವ ಸಂಘದಲ್ಲಿ ನಡೆದ ಬಜ್ಪೆ ಯುವವಾಹಿನಿ ಘಟಕದ ಈ ಸಾಲಿನ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು .
ಇದೇ ಸಂದರ್ಭದಲ್ಲಿ ಘಟಕದ ಸಲಹೆಗಾರರಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಾಧು ಪೂಜಾರಿ ಇವರನ್ನು ಅಭಿನಂದಿಸಲಾಯಿತು. ಗೂಡುದೀಪ ಕಲಾವಿದ, ಕಲಾ ಸಂಘಟಕ ಶ್ರೀ ಜಗದೀಶ್ ಅಮೀನ್ ಸುಂಕದಕಟ್ಟೆ, ರಾಷ್ಟ್ರೀಯ ಕ್ರೀಡಾಳು ಪುಷ್ಪಾವತಿ ಪೂಜಾರಿ ಮುಚ್ಚೂರು ಇವರಿಬ್ಬರನ್ನು ಸನ್ಮಾನಿಸಲಾಯಿತು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಯಶವಂತ ಪೂಜಾರಿ ಪದಪ್ರಧಾನ ಮಾಡಿದರು . ೨೦ ದೇವರಾಜ್ ಅಮೀನ್ ನೇತೃತ್ವದ ೨೦ ಸದಸ್ಯರ ತಂಡವು ಪ್ರಮಾಣ ವಚನ ಸ್ವೀಕರಿಸಿದರು. ನೂತನ ಅಧ್ಯಕ್ಷ ಶ್ರೀ ದೇವರಾಜ್ ಅಮೀನ್ ಸರ್ವರ ಸಹಕಾರದಲ್ಲಿ ಯುವವಾಹಿನಿ ಬಜ್ಪೆ ಘಟಕವನ್ನು ಯಶಸ್ವೀಯಾಗಿ ಮುನ್ನಡೆಸುವ ವಿಶ್ವಾಸ ವ್ಯಕ್ತಪಡಿಸಿದರು.
ಯುವವಾಹಿನಿ(ರಿ) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ಸುವರ್ಣ, ಬಜ್ಪೆ ವೆಸ್ಟ್ ಕೋಸ್ಟ್ ವೈನ್ಸ್ ನ ಮಾಲಕರಾದ ಉಮೇಶ್, ಬಜ್ಪೆ ಬಿಲ್ಲವ ಸಂಘದ ಕೋಶಾಧಿಕಾರಿಯಾದ ಬಾಲಕೃಷ್ಣ ಪೂಜಾರಿ, ಯುವವಾಹಿನಿ ಬಜ್ಪೆ ಘಟಕದ ಸಲಹೆಗಾರರಾದ ರವಿಚಂದ್ರ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಅಮೀನ್ ಮಮತ್ತಿತರರು ಉಪಸ್ಥಿತರಿದ್ದರು. ಬಜ್ಪೆ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಪದಗ್ರಹಣ ಕಾರ್ಯಕ್ರಮದ ಪೂರ್ವದಲ್ಲಿ ಬಜ್ಪೆ ಮತ್ತು ಕೆಂಜಾರು-ಕರಂಬಾರು ಯುವಾಹಿನಿ ಘಟಕದ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಘಟಕದ ಕಾರ್ಯದರ್ಶಿ ಶ್ರೀಮತಿ ಕನಕಾ ಮೋಹನ್ ವಾರ್ಷಿಕ ವರದಿ ವಾಚಿಸಿದರು.
ಕು| ಗ್ರೀಷ್ಮಾ ಹಾಗೂ ಕು| ಶ್ರೇಯ ಸನಿಲ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನಿರ್ಗಮನ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಪೂಜಾರಿ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀ ವಿಶ್ವನಾಥ್ ಪೂಜಾರಿ ರೆಂಜಾಳ ನೂತನ ಪದಾಧಿಕಾರಿಗಳ ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ವಿನೀತ್ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ನೂತನ ಕಾರ್ಯದರ್ಶಿ ಶ್ರೀಮತಿ ಸುನಿತಾ ವಂದಿಸಿದರು.