ಬೆಳ್ತಂಗಡಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ನಗರದ ನಾಮಫಲಕ ಅನಾವರಣ ಕಾರ್ಯಕ್ರಮವು ಸೆ. 16 ರಂದು ಶಾಸಕ ಕೆ. ವಸಂತ ಬಂಗೇರ ಮಾರ್ಗದರ್ಶನದಲ್ಲಿ ಜರಗಿತು. ಪಟ್ಟಣ ಪಂಚಾಯತ್ ಬೆಳ್ತಂಗಡಿ, ಯುವವಾಹಿನಿ ಸಂಚಾಲನಾ ಸಮಿತಿ ಬೆಳ್ತಂಗಡಿ ನಗರ ಇವರ ಸಹಕಾರದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನದ ಸಂದರ್ಭದಲ್ಲಿ ಬೆಳ್ತಂಗಡಿ ಹಳೆಕೋಟೆ ಸಾಯಿ ಮಂದಿರದ ಎದುರುಗಡೆ ಶ್ರೀ ನಾರಾಯಣಗುರು ನಗರದ ನಾಮಫಲಕವನ್ನು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್. ಪದ್ಮನಾಭ ಅನಾವರಣಗೊಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ., ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ನ.ಪಂ. ಉಪಾಧ್ಯಕ್ಷ ಜಗದೀಶ್ ಡಿ., ನಗರ ಪಂಚಾಯತ್ ಸದಸ್ಯರುಗಳಾದ ಜೇಮ್ಸ್ ಡಿ’ಸೋಜ, ರಾಜೇಶ್, ನಗರ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರು ಸಂತೋಷ್ ಕುಮಾರ್ ಜೈನ್, ಹಿರಿಯರಾದ ಬಾಬು ಪೂಜಾರಿ ಕೆಲ್ಲೆಕೆರೆ, ಶೇಖರ್ ಬಂಗೇರ ಹೇರಾಜೆ, ರಮೇಶ್ ಬಂಗೇರ ಮೊದಲಾದವರು ಭಾಗವಹಿಸಿದರು. ಯುವವಾಹಿನಿ ಸಂಚಾಲನ ಸಮಿತಿಯ ಬೆಳ್ತಂಗಡಿ ನಗರ ಇದರ ಸಂಚಾಲಕ ಸಂತೋಷ್ ಕರ್ಕೇರ ಹಾಗೂ ಸದಸ್ಯರುಗಳು, ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಪ್ರಶಾಂತ್ ಮಚ್ಚಿನ, ಸಲಹೆಗಾರರಾದ ರಘುನಾಥ ಶಾಂತಿ, ರಮಾನಂದ ಸಾಲಿಯಾನ್, ಮನೋಹರ್ ಇಳಂತಿಲ, ರಾಕೇಶ್ ಮೂಡುಕೋಡಿ, ಗೋಪಾಲಕೃಷ್ಣ ಸಾಲಿಯಾನ್, ತಾ.ಪಂ.ಸದಸ್ಯೆ ಕೇಶಾವತಿ, ಮಹಿಳಾ ಬಿಲ್ಲವ ವೇದಿಕೆಯ ಕಾರ್ಯದರ್ಶಿ ರಾಜಶ್ರೀ ರಾಮನ್, ಯುವ ಬಿಲ್ಲವ ವೇದಿಕೆಯ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್ ನಿರ್ದೇಶಕರುಗಳಾದ ವಿಠಲ್ ಸಿ. ಪೂಜಾರಿ, ಉಮೇಶ್ ಸುವರ್ಣ, ಜಯರಾಜ್ ನಡಕ್ಕರ, ನವೀನ್ ಇಂದಬೆಟ್ಟು, ಯಶೋಧರ ಚಾರ್ಮಾಡಿ, ಉಮಾನಾಥ್ ಕೋಟ್ಯಾನ್ ಮೊದಲಾದವರು ಭಾಗವಹಿಸಿದ್ದರು.
ನಾಮಫಲಕದ ಬಗ್ಗೆ ಯುವವಾಹಿನಿ (ರಿ) ಬೆಳ್ತಂಗಡಿ ಘಟಕವು ನಗರ ಪಂಚಾಯತ್‌ಗೆ ೨ ವರ್ಷಗಳಿಂದ ಮನವಿಯನ್ನು ಸಲ್ಲಿಸುತ್ತಾ ಬಂದಿದ್ದು ಈ ಮನವಿಗೆ ಸಂದ ಗೌರವ ಇದಾಗಿರುತ್ತದೆ.
ಘಟಕದ ಉಪಾಧ್ಯಕ್ಷ ಅಶ್ವಥ್ ಕುಮಾರ್ ಸ್ವಾಗತಿಸಿ, ಸಲಹೆಗಾರ ನಿತ್ಯಾನಂದ ನಾವರ ವಂದಿಸಿದರು. ಸ್ಮಿತೇಶ್ ಎಸ್. ಬಾರ್ಯ ಕಾರ್ಯಕ್ರಮ ನಿರೂಪಿಸಿದರು.