ವಿದ್ಯೆಯು ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ಪೂರಕವಾದುದು. ಶಿಕ್ಷಣ ದ ಬಗೆಗಿನ ಕಾಳಜಿಯು ಅಗತ್ಯವಾದುದು. ಯಾವುದೇ ಪ್ರತಿಷ್ಠೆ, ಸ್ಥಾನಮಾನಕ್ಕಾಗಿ ನಮ್ಮ ಕೆಲಸ ಕಾರ್ಯಗಳು ಇರಕೂಡದು. ನಿಸ್ವಾರ್ಥ ವಾದ ಮನಸ್ಸಿನ ಸೇವೆಯನ್ನು ಸಮಾಜ ಗುರುತಿಸುತ್ತದೆ. ಸಾಮಾಜಿಕ ಸೇವೆಯಿಂದ ದೊರೆಯುವ ತೃಪ್ತಿ ಎಲ್ಲಾ ಬಗೆಯ ಸನ್ಮಾನ ಪ್ರಶಂಸೆಗಳನ್ನು ಮೀರಿದುದು. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಕೂಡದು ಎನ್ನುವ ಮಹತ್ವಾಕಾಂಕ್ಷೆ ಯಿಂದ ಎಲ್ ಸಿ ಆರ್ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿದೆ. ಅನೇಕ ಮಂದಿ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣವನ್ನು ಈ ವಿದ್ಯಾಸಂಸ್ಥೆಯಲ್ಲಿ ಪಡೆಯುತ್ತಿದ್ದಾರೆ. ಇದು ನಮ್ಮ ಹೆಮ್ಮೆ. ಯುವವಾಹಿನಿ ಸಂಘಟನೆಯು ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಈ ಬಗೆಯ ಅಭಿನಂದನೆಯನ್ನು ಮಾಡುತ್ತಿದ್ದಾರೆ ಅವರಿಗೆ ಆಭಾರಿಯಾಗಿದ್ದೇನೆ ಎಂದು ಎಲ್.ಸಿ.ಆರ್ ವಿದ್ಯಾಸಂಸ್ಥೆ ಕಕ್ಯಪದವು ಇದರ ಸಂಸ್ಥಾಪಕ ರೋI ರೋಹಿನಾಥ ಪಾದೆ ಹೇಳಿದರು.
ಅವರು ಮೆಲ್ಕಾರ್ ಬಿರ್ವ ಸೆಂಟರ್ ನಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಆಶ್ರಯ ದಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಆತಿಥ್ಯ ದಲ್ಲಿ ನಡೆದ ಅನ್ವೇಷಣಾ ರಾಷ್ಟ್ರೀಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ *ಯುವವಾಹಿನಿ ಅನ್ವೇಷಣಾ ಪ್ರಶಸ್ತಿ-2017* ನ್ನು ಸ್ವೀಕರಿಸಿ ಮಾತನಾಡಿದರು.
ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಲೋಕೇಶ್ ಸುವರ್ಣ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ವಿಜಯ ಬ್ಯಾಂಕ್ ಪ್ರಬಂಧಕ ಬೇಬಿ ಕುಂದರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಗೌರವ ಕಾರ್ಯದರ್ಶಿ ಬಿ.ತಮ್ಮಯ, ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ., ಶ್ರೀಧರ ಅಮೀನ್ ಉಪಸ್ಥಿತರಿದ್ದರು.
ಯುವವಾಹಿನಿ ಉಪಾಧ್ಯಕ್ಷ ಗಣೇಶ್ ಪೂಂಜೆರಕೋಡಿ ಸ್ವಾಗತಿಸಿ, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ವಂದಿಸಿದರು. ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು