ಮೂಡಬಿದಿರೆ: ಹಳ್ಳಿಯ ಅಭಿವೃಧ್ಧಿಯಲ್ಲಿ ಯುವಜನತೆಯ ಪಾತ್ರ ಬಲು ಮಹತ್ವಪೂರ್ಣವಾಗಿದೆ. ಹಳ್ಳಿಯ ಜನರಿಗೆ ಉದ್ಯೋಗ ಆರೋಗ್ಯ ವ್ಯವಸ್ಥೆಗಳ ಬಗ್ಗೆ ಹಾಗೂ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಕೆಲಸ ಯುವವಾಹಿನಿಯಂತಹ ಘಟಕಗಳಿಂದಾಗಬೇಕಾಗಿದೆ ಎಂದು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಉಪಾಧ್ಯಕ್ಷ ನಿವೃತ್ತ ಎಸ್ ಪಿ ಪೀತಾಂಬರ ಹೆರಾಜೆ ಹೇಳಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ 26 ನೇ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ದಿನಾಂಕ 10.12.2017 ರಂದು ಮೂಡಬಿದಿರೆಯ ಬ್ರಹ್ಮಶ್ರೀ ನಾರಾಯಣಗುರು ಸಭಾ ಭವನದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿಯ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ವಹಿಸಿದ್ದರು. ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿದ್ದರು. ಚಲನ ಚಿತ್ರ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ಪುರಸಭಾಧ್ಯಕ್ಷೆ ಹರಿನಾಕ್ಷಿ ಎಸ್ ಸುವರ್ಣ ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಬೆಳ್ತಂಗಡಿ ಎ.ಪಿ.ಎಮ್.ಸಿ ಅಧ್ಯಕ್ಷ ಸತೀಶ್ ಕೆ, ಡಾ ರಮೇಶ್, ಮೂಡಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ರವೀಂದ್ರ ಎಮ್. ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮೂಡಬಿದಿರೆ ಶ್ರೀ ನಾರಾಯಣ ಗುರು ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಗೋಪಿನಾಥ್ ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ ವಿವಿಧೆಡೆಗಳ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘಗಳ ಅಧ್ಯಕ್ಷರ ನೆಲೆಯಲ್ಲಿ ರಕ್ಕಯ ಪೂಜಾರಿ ಶಿರ್ತಾಡಿ, ನಾರಾಯಣ ಪೂಜಾರಿ ಬೈರೊಟ್ಟು, ಜಯಪೂಜಾರಿ ನಿಡ್ಡೋಡಿ, ಗಂಗಾಧರ ಪೂಜಾರಿ ಕಲ್ಲಮುಂಡ್ಕೂರು, ರಾಜೇಶ್ ಸುವರ್ಣ ಬೆಳುವಾಯಿ,ನಿಯೋಜಿತ ಅಧ್ಯಕ್ಷ ರಾಜೇಶ್ ಡಿ ಕೋಟ್ಯಾನ್, ಸದಸ್ಯ ಹರೀಶ್ ಕುಮಾರ್ ಉಪಸ್ಥಿತರಿದ್ದರು. ನಿಯೋಜಿತ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ ಕೆ ಸ್ವಾಗತಿಸಿದರು, . ಘಟಕದ ಕಾರ್ಯದರ್ಶಿ ರಾಮ್ ಕುಮಾರ್ ಮಾರ್ನಾಡ್ ವಂದಿಸಿದರು. ಯುವವಾಹಿನಿ(ರಿ) ಮೂಡಬಿದಿರೆ ಘಟಕದ ೨೭ ಮಂದಿ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಪದಪ್ರಧಾನ ಮಾಡಿದರು ಕೇಂದ್ರ ಸಮಿತಿಯ ಜತೆ ಕಾರ್ಯದರ್ಶಿ ಚೇತನ್ ಕುಮಾರ್ ಪ್ರಸ್ತಾವನೆಗೈದರು. ಕೇಂದ್ರ ಸಮಿತಿಯ ಕಾರ್ಯದರ್ಶಿ ರಾಜೇಶ್ ಸುವರ್ಣ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು ಮತ್ತು ನಿರ್ದೇಶಕ ಶಶಿಧರ್ ಕಿನ್ನಿಮಜಲು ನಿರೂಪಿಸಿದರು