ಸಸಿಹಿತ್ಲು : ಸದಸ್ಯರ ಸಂಖ್ಯೆಯನ್ನು ಅವಲಂಭಿಸಿಕೊಂಡು ನಮ್ಮ ಕೆಲಸಗಳು ಯಶಸು ಕಾಣುವುದಿಲ್ಲ ಬದಲಾಗಿ ನಾವು ಮಾಡುವ ಕೆಲಸದಲ್ಲಿನ ಬದ್ಧತೆ, ಮತ್ತು ಕಾರ್ಯದಕ್ಷತೆಯಿಂದ ನಿಜವಾದ ಕಾರ್ಯಸಾಧನೆ ಸಾಧ್ಯವಾಗುತ್ತದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು.
ಅವರು ಯುವವಾಹಿನಿ (ರಿ) ಸಸಿಹಿತ್ಲು ಘಟಕದ ಪದಗ್ರಹಣ ಸಮಾರಂಭದಲ್ಲಿ ನೂತನ ತಂಡಕ್ಕೆ ಪ್ರಮಾಣವಚನ ಭೋಧಿಸಿ ಮಾತನಾಡಿದರು. ಯುವವಾಹಿನಿ ಸಸಿಹಿತ್ಲು ಘಟಕ ಒಂದು ಗ್ರಾಮ ವ್ಯಾಪ್ತಿಯನ್ನು ಹೊಂದಿದೆ, ಹೀಗಿದ್ದರೂ ಹತ್ತಾರು ಸಮಾಜಮುಖಿ ಕಾರ್ಯವನ್ನು ನಡೆಸಿದೆ, ಸಾಂಸ್ಕೃತಿಕವಾಗಿ ಉತ್ತಮ ಹೆಸರನ್ನು ಹೊಂದಿದೆ. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಹೊಂದಿದ ಘಟಕ ಮತ್ತೊಮ್ಮೆ ಯುವ ನೇತಾರನ ಸಾರಥ್ಯಕ್ಕೆ ತೆರಳಿದೆ ಈ ಮೂಲಕ ಇನ್ನಷ್ಟು ಕೆಲಸ ಆಗಲಿ ಎಂದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಅಗ್ಗಿದಕಳಿಯ ಸಸಿಹಿತ್ಲು ಇದರ ಅಧ್ಯಕ್ಷರಾದ ಶ್ರೀಯುತ ಪ್ರಕಾಶ್ ಕುಮಾರ್ ಬಿ.ಎನ್ ಅವರು, ಯುವವಾಹಿನಿ ಮೂಲಕ ಸಮಾಜಿಕವಾಗಿ ಉತ್ತಮ ಕಾರ್ಯ ನಡೆಯುತ್ತಿದೆ, ಸಸಿಹಿತ್ಲು ಯುವವಾಹಿನಿಯೂ ಸಂಘದ ಜೊತೆ ಕೈ ಜೋಡಿಸಿ ಉತ್ತಮ ಕೆಲಸ ಮಾಡುತ್ತಿದೆ. ಇದರ ಸೇವಾ ಕಾರ್ಯಕ್ಕೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನಿಜವಾದ ಕಾಣಿಕೆ ಎಂದರು. ವೇದಿಕೆಯಲ್ಲಿ ಸಸಿಹಿತ್ಲು ಘಟಕದ ಸಲಹೆಗಾರರಾರ ಪದ್ಮನಾಭ ಮರೋಳಿ, ಮಂಗಳೂರು ತಾಲೂಕು ಸಂಘಟನಾ ಕಾರ್ಯದರ್ಶಿ ಸುನೀಲ್.ಕೆ.ಅಂಚನ್, ಉಪಸ್ಥಿತರಿದ್ದರು. ನಿರ್ಗಮನಾಧ್ಯಕ್ಷರಾದ ಪ್ರದೀಪ್ ಎಸ್.ಆರ್ ತನ್ನ ಅವಧಿಯಲ್ಲಿ ಸಹಕರಿಸಿದವರಿಗೆ ವಂದನೆ ಅರ್ಪಿಸಿದರು. ಮಧುಬಂಗೇರಾ ಕಲ್ಲಡ್ಕ ನೂತನ ಅಧ್ಯಕ್ಷರಾಗಿ, ಕುಮಾರಿ ವೀಣಾ ಕಾರ್ಯದರ್ಶಿಯಾಗಿ ಶೈಲೇಶ್ ಉಪಾಧ್ಯಕ್ಷರಾಗಿ, ಕುಮಾರಿ ರೀತಾ ಕೋಶಾಧಿಕಾರಿಯಾಗಿ ಮತ್ತು ಇತರ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು. ನೀತಾ ಸ್ವಾಗತಿಸಿ, ನಿರೀಕ್ಷಾ ವಂದಿಸಿದರು. ತಿಲಕ್‌ರಾಜ್ ವಂದಿಸಿದರು.