ವೇಣೂರು: ಯುವವಾಹಿನಿ ಯುವಕರ ಘಟಕ ಯುವಶಕ್ತಿಯನ್ನು ಬಳಸಿಕೊಳ್ಳುತ್ತಿರುವ ಯುವವಾಹಿನಿ ಘಟಕಗಳು ಸಮಾಜದಲ್ಲಿ ಉತ್ತಮ ಕಾರ್ಯಸಾಧನೆ ಮಾಡುತ್ತಿದೆ. ಶಿಕ್ಷಣ, ಆರೋಗ್ಯದ ಜತೆಗೆ ಬಡವರಿಗೆ ಸಹಾಯ ಹಸ್ತ ನೀಡುವ ಮೂಲಕ ಸಮಾಜದಲ್ಲಿ ಯುವವಾಹಿನಿ ವಿಶಿಷ್ಟ ಸಂಚಲನ ಮೂಡಿಸಿದೆ ಎಂದು ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಹೇಳಿದರು.ವೇಣೂರು ಗಾರ್ಡನ್ ವ್ಯೂ ಸಭಾಂಗಣದಲ್ಲಿ ದಿನಾಂಕ 01.12.2017 ರಂದು ಶುಕ್ರವಾರ ಜರಗಿದ ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ 25ನೇ ವೇಣೂರು ನೂತನ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಯುವವಾಹಿನಿ ಸಮಾಜ ಸೇವೆಯ ಜತೆಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾಯಕದಲ್ಲಿ ನಿರತವಾಗಿದೆ. ಯುವಕರ ಶಕ್ತಿಯನ್ನು ಬಳಸಿಕೊಂಡು ಯುವವಾಹಿನಿ ಇನ್ನಷ್ಟು ಕಾರ್ಯಸಾಧನೆ ಮಾಡುವಂತಾಗಲಿ ಎಂದರು.
ಯುವವಾಹಿನಿ (ರಿ) ಮಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಭಾಷಣಕಾರರಾಗಿ ಬೆಂಗಳೂರಿನ ಖ್ಯಾತ ನ್ಯಾಯವಾದಿ ನವನೀತ್ ಹಿಂಗಾಣಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಬೆಳ್ತಂಗಡಿ ಎ.ಪಿ,ಎಮ್.ಸಿ. ಅಧ್ಯಕ್ಷ ಸತೀಶ್ ಕೆ ಕಾಶಿ ಪಟ್ಣ, ಬೆಳ್ತಂಗಡಿ ಸುವರ್ಣ ಸಾಂಸ್ಕ್ರತಿಕ ಪ್ರತಿಷ್ಟಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ವೇಣೂರು ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪೂವಪ್ಪ ಪೂಜಾರಿ ಪರನೀರು, ಬೆಳ್ತಂಗಡಿ ಗುರುದೇವ ಬ್ಯಾಂಕಿನ ನಿರ್ದೇಶಕ ಜಗದೀಶ್ಚಂದ್ರ ಡಿ ಕೆ, ಮಂಗಳೂರು, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಮಾನಂದ ಸಾಲ್ಯಾನ್ ಮುಂಡೂರು, ಉಪಾಧ್ಯಕ್ಷ ನರೇಶ್‌ಕುಮಾರ್ ಸಸಿಹಿತ್ಲು, ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು,ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್, ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ನಿಯೋಜಿತ ಅಧ್ಯಕ್ಷ ಪ್ರಶಾಂತ್ ಮಚ್ಚಿನ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಸಂತೋಷ್ ಕುಮಾರುಪಾರು,ವೇಣೂರು ಟಾಪ್ ಎಂಟರ್‌ಟ್ರೈನರ್‌ನ ಸಂಯೋಜಕ ಕ್ರಷ್ಣಕುಮಾರ್ ಚಿತ್ರನಟ ಡಾ ರಾಜ್ ಶೇಖರ್ ಕೋಟ್ಯಾನ್ ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ನಿತೀಶ್ ಎಚ್ ಕಾರ್ಯದರ್ಶಿ ಸತೀಶ್ ಪಿ ಎನ್, ವೇಣೂರು ಘಟಕದ ನಿಯೋಜಿತ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮಾನ
ಕೋಟಿ ಚೆನ್ನಯ ದರ್ಶನ ಪಾತ್ರಿ ಶತಾಯುಷಿ ಪೆರಾಡಿಯ ಬಾಬು ಪೂಜಾರಿ ನಾಟಿ ವೈದ್ಯ ಮಾನ್ಯಪ್ಪ ಪೂಜಾರಿ ಮಜಲಡ್ಕ ಹಾಗೂ ಪ್ರತಿಭಾನ್ವಿತ ಚಿತ್ರ ಕಲಾವಿದ ಅಂಕಿತ್ ಬಂಗೇರ ದಡ್ಡಾಲ್‌ಪಲ್ಕೆ ಅವರನ್ನು ಸನ್ಮಾನಿಸಲಾಯಿತು.
ಸಾಂಸ್ಕ್ರತಿಕ ಕಾರ್ಯಕ್ರಮ:
ಇದಕ್ಕೂ ಮೊದಲು ಟಾಪ್ ಎಂಟರ್‌ಟ್ರೈನರ್ ವೇಣೂರು ಇವರಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ರಾಕೇಶ್ ಮೂಡುಕೋಡಿ ಸ್ವಾಗತಿಸಿ ಯುವವಾಹಿನಿ ವೇಣೂರು ಘಟಕದ ಕಾರ್ಯದರ್ಶಿ ಸತೀಶ್ ಬಿ.ಎನ್ ವಂದಿಸಿ ಉದಯಕುಮಾರ್ ಹಾಗೂ ಯುವವಾಹಿನಿ ವೇಣೂರು ಘಟಕದ ಉಪಾಧ್ಯಕ್ಷ ಅರುಣ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.