ಮಕ್ಕಳಲ್ಲಿ ಕಲಿಕೆಯ ಜೊತೆಗೆ ಆವರಲ್ಲಿನ ಆಂತರಿಕ ಪ್ರತಿಭೆಗಳು ಅನಾವರಣಗೊಂಡಾಗ ಅವರು ಸಹ ಭವಿಷ್ಯದಲ್ಲಿ ಕಲಾವಿದರಾಗಿ ಅಥವ ಅಸಾಧಾರಣ ಪ್ರತಿಭೆಗಳಾಗಿ ಬೆಳಗಲು ಸಾಧ್ಯವಿದೆ. ಮಕ್ಕಳಲ್ಲಿ ಎಂದಿಗೂ ಅನಾಥ ಪ್ರಜ್ಞೆಯನ್ನು ಮೂಡಿಸಬೇಡಿ, ಅವರನ್ನು ಸಮಾಜದ ಆಸ್ತಿಯನ್ನಾಗಿ ಅವರನ್ನು ರೂಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿ, ಮೂಲ್ಕಿ ಯುವವಾಹಿನಿ ಘಟಕದ ಪ್ರತಿಯೊಂದು ಕಾರ್ಯಕ್ರಮವೂ ಸಹ ಮಾದರಿ ಕಾರ್ಯಕ್ರಮವಾಗಿರುತ್ತದೆ ಎಂದು ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ಹೇಳಿದರು.
ಮೂಲ್ಕಿ ಯುವವಾಹಿನಿ ಘಟಕದಿಂದ ಮೂಲ್ಕಿ ಸಿಎಸ್‌ಐ ಬಾಲಿಕಾಶ್ರಮದಲ್ಲಿ ದಿನಾಂಕ 01.11.2017 ರಂದು ನಡೆದ ಮಕ್ಕಳ ದಿನಾಚರಣೆಯ ವಿಶೇಷ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಮೂಲ್ಕಿ ಯುವವಾಹಿನಿ ಘಟಕದ ಆಧ್ಯಕ್ಷೆ ರಕ್ಷಿತಾ ಯೋಗೀಶ್ ಕೋಟ್ಯಾನ್ ಚಿತ್ರಾಪು ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಮೂಲ್ಕಿ ಘಟಕದ ಸಲಹೆಗಾರರಾದ ಪರಮೇಶ್ವರ ಪೂಜಾರಿ ಮಾತನಾಡಿ, ಸುಪ್ತ ಪ್ರತಿಭೆಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಸಂಘ ಸಂಸ್ಥೆಗಳು ಅವರಲ್ಲಿರುವ ಕಲಾ ಕೌಶಲ್ಯವನ್ನು ಅರಿತು ಮುನ್ನಡೆಸಬೇಕು, ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರುರವರ ದೂರದೃಷ್ಟಿತ್ವದ ಚಿಂತನೆಯಿಂದ ಮಕ್ಕಳ ಬಗ್ಗೆ ಕಾಳಜಿ ನಮ್ಮಲ್ಲಿ ಹೆಚ್ಚಾಗಿದೆ ಎಂದರು. ಬಾಲಿಕಾಶ್ರಮದ ವಾರ್ಡನ್ ರೆ.ಶಶಿಕಲ ಅಂಚನ್ ಶುಭ ಹಾರೈಸಿದರು.
ವೇದಿಕೆಯಲ್ಲಿ ಮೂಲ್ಕಿ ಘಟಕದ ಸಹ ಕಾರ್ಯದರ್ಶಿ ದಿವಾಕರ ಕೋಟ್ಯಾನ್, ಕಾರ್ಯಕ್ರಮದ ನಿರ್ದೇಶಕರಾದ ವಾಣಿ ಮಧುಕರ್ ಸುವರ್ಣ, ರಾಹುಲ್ ಜಿ. ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ವಂದಿಸಿದರು, ಮಾಜಿ ಅಧ್ಯಕ್ಷ ನರೇಂದ್ರ ಕೆರೆಕಾಡು ನಿರೂಪಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಘಟಕದ ಮಾಜಿ ಅಧ್ಯಕ್ಷರಾದ ಜಯಕುಮಾರ್ ಕುಬೆವೂರು ಅವರ ನೇತೃತ್ವದಲ್ಲಿ ಮಾಜಿ ಅಧ್ಯಕ್ಷರುಗಳಾದ ಚಂದ್ರಶೇಖರ ಸುವರ್ಣ, ಯೋಗೀಶ್ ಕೋಟ್ಯಾನ್, ರಾಮಚಂದ್ರ ಟಿ. ಕೋಟ್ಯಾನ್, ಪ್ರಕಾಶ್ ಸುವಣ€, ಚೇತನ್‌ಕುಮಾರ್, ಹಿರಿಯ ಸದಸ್ಯರಾದ ಮಧುಕರ ಸುವರ್ಣ, ಭಾಸ್ಕರ್, ರಮಾನಾಥ್, ಪ್ರವೀದ್ ಮತ್ತಿತರರ ಸಹಕಾರದಲ್ಲಿ ಮಕ್ಕಳಿಗೆ ವಿವಿಧ ಮನರಂಜನಾತ್ಮಕ ಕ್ರೀಡೆಗಳನ್ನು ಸಂಯೋಜಿಸಿ ಬಹುಮನವನ್ನು ವಿತರಿಸಲಾಯಿತು.