ಆಧುನಿಕ ಜೀವನ ಶೈಲಿಯಿಂದ ನಾವು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ತೀರಾ ಅಗತ್ಯ, ಸ್ವಯಂಪ್ರೇರಿತ ರಕ್ತದಾನ ಮಾಡಿದ ಕಟಪಾಡಿ ಯುವವಾಹಿನಿ ಯುವಕರ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಕಟಪಾಡಿ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ
ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್ ತಿಳಿಸಿದರು.
ದಿನಾಂಕ 22.10.2017 ರಂದು ಯುವವಾಹಿನಿ(ರಿ) ಕಟಪಾಡಿ ಘಟಕದ ಆಶ್ರಯದಲ್ಲಿ ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ, ವೇದವ್ಯಾಸ ಭಜನಾ ಮಂದಿರ ಅಂಬಾಡಿ, ಬಿಲ್ಲವ ಒಕ್ಕೂಟ ಪಡುಏನಗುಡ್ಡೆ, ರಿಕ್ಷಾ ಚಾಲಕ ಮಾಲಕರ ಸಂಘ ಕಟಪಾಡಿ ಇದರ ಸಂಯುಕ್ತ ಸಹಯೋಗದೊಂದಿಗೆ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಜರುಗಿದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಡುಪಿ ಜಿಲ್ಲಾ ಅಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ.ವೀಣಾಕುಮಾರಿ ಅವರು ರಕ್ತದಾನದ ಮಹತ್ವ ಮತ್ತು ಅಗತ್ಯತೆಯ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಅಂಬಾಡಿ ವೇದವ್ಯಾಸ ಭಜನಾ ಮಂದಿರದ ಅದ್ಯಕ್ಷರಾದ ಸುನೀಲ್ ಸುವರ್ಣ, ರಿಕ್ಷಾ ಚಾಲಕ ಮಾಲಕರ ಸಂಘದ ಕಾರ್ಯದರ್ಶಿ ಹನೀಫ್,ಪಡುಏನಗುಡ್ಡೆ ಬಿಲ್ಲವ ಒಕ್ಕೂಟದ ಸಂಚಾಲಕರಾದ ಮಾಧವ ಮತ್ತಿತರರು ಉಪಸ್ಥಿತರಿದ್ದರು.
ಯುವವಾಹಿನಿ (ರಿ) ಕಟಪಾಡಿ ಘಟಕದ ಅಧ್ಯಕ್ಷರಾದ ಮಹೇಶ್ ಅಂಚನ್ ಸ್ವಾಗತಿಸಿದರು. ಕಾರ್ಯದರ್ಶಿ ನಿತಿನ್ ಅಂಬಾಡಿ ವಂದಿಸಿದರು. ಮಾಜಿ ಅಧ್ಯಕ್ಷರಾದ ಎನ್.ಜಿ.ಸುಕುಮಾರ್ ಕಾರ್ಯಕ್ರಮ ನಿರೂಪಿಸಿದರು.
Very good work all the best katapady chapter