ವಿಶುಕುಮಾರ್ ಎಂಬ ಬರಹಗಾರನ ಕಥೆ-13 : ರವಿರಾಜ್ ಅಜ್ರಿ

ಕಲ್ಪನಾ- ವಿಶುಕುಮಾರ್ ಜಗಳ

ಕ್ಯಾಮೆರಾದಲ್ಲಿ ‘ ಷಾಟ್ ‘ ಪರೀಕ್ಷಿಸುತ್ತಿರುವ ವಿಶುಕುಮಾರ್.

ಸುಮಾರು 450 ವರ್ಷಗಳ ಹಿಂದೆ ನಡೆದ ಐತಿಹಾಸಿಕ ‘ ಕೋಟಿ- ಚೆನ್ನಯ‘ ಅವಳಿ ವೀರ ಪುರುಷರ ಸ್ವಾಭಿಮಾನದ ಬದುಕಿನ ನೈಜ ಕಥೆ- ವಿಶುಕುಮಾರ್ ಅವರಿಗೆ ಆ ವೀರ ಪುರುಷರು ತುಂಬಾ ಪ್ರಭಾವ ಬೀರಿದ್ದರು. ಅವರ ವ್ಯಕ್ತಿತ್ವ, ನಡೆ-ನುಡಿ ,ಅವರು ಅನ್ಯಾಯದ ವಿರುದ್ಧ ಹೋರಾಡುವುದು ಇತ್ಯಾದಿ. ಇದನ್ನು ವಿಶುಕುಮಾರ್ ಅವರು ತಮ್ಮ ಜೀವನುದ್ದಕ್ಕೂ ಪಾಲಿಸಿಕೊಂಡು ಬಂದಿದ್ದರು. ಆ ವೀರಪುರುಷರನ್ನು ‘ ಮಾದರಿ’ಯಾಗಿಟ್ಟುಕೊಂಡರು.ಆ ಕಥೆ ಹಿಡಿಸಿದ್ದರಿಂದಲೇ ಮೊದಲು ಅವರು ನಾಟಕ ಬರೆದು, ನಿರ್ದೇಶನ ಮಾಡಿದರು. ಅದರಲ್ಲಿ ಯಶಸ್ವಿ ಕೂಡ ಪಡೆದರು. ಇದನ್ನೇ ಮತ್ತೆ ‘ ಸಿನಿಮಾ’ ಯಾಕೆ ಮಾಡಬಾರದೆಂದೂ, ತಲೆಗೆ ಯೋಚನೆ ಬಂದ ನಂತರ ‘ ಚಿತ್ರಕಥೆ’ ಬರೆದರು. ವಿಶುಕುಮಾರ್ ಅವರಿಗೆ ಒಂದು ವಿಷಯ ತಲೆಗೆ ಯೋಚನೆ ಅಂಟಿದ ನಂತರ, ಅದನ್ನು ಶತಾಯಗತಾಯವಾಗಿ ಕಾರ್ಯಗತ ಮಾಡದೆ ಬಿಡುವುದಿಲ್ಲ. ಹಾಗಾಗಿ ‘ ಕೋಟಿ- ಚೆನ್ನಯ‘ ಚಿತ್ರನಿರ್ಮಾಣದ ಯೋಜನೆಗೆ ಕೈ ಹಾಕಿದರು. ಆಗಿನ ಕಾಲದ ಬಿಲ್ಲವ ಸಮಾಜದ ಕೆಲವು ಶ್ರೀಮಂತ ವ್ಯಕ್ತಿಗಳನ್ನು ವಿಶುಕುಮಾರ್ ಭೇಟಿ ಮಾಡಿದರು. ಆ ವ್ಯಕ್ತಿಗಳಿಗೆ ಸಿನಿಮಾದ ಬಗ್ಗೆ ಅಭಿರುಚಿ ಇರಬೇಕು ತಾನೇ? ಆಗ ಪರಿಚಯವಾದುದೇ ಟಿ. ಎ. ಶ್ರೀನಿವಾಸ ಅವರು.

ನೃತ್ಯ ನಿರ್ದೇಶಕಿ ದೇವಿ, ನಟಿ ಕಲ್ಪನಾ, ನೃತ್ಯ ನಿರ್ದೇಶಕ ಉಡುಪಿ ಜಯರಾಮ, ಹಾಗೂ ವಿಶುಕುಮಾರ್.

ಅವರು ಮಂಗಳೂರಿನಲ್ಲಿ ‘ ಚಿತ್ರಭಾರತಿ’ ವಿತರಣಾ ಸಂಸ್ಥೆಯನ್ನು ಹುಟ್ಟುಹಾಕಿಕೊಂಡು, ಚಿತ್ರಮಂದಿರಗಳಿಗೆ ಚಿತ್ರಗಳ ವಿತರಣೆ ಮಾಡುತ್ತಿದ್ದರು. ‘ ಸಿನಿಮಾ’ ಆಸಕ್ತಿಯುಳ್ಳ ಮನುಷ್ಯ. ವಿಶುಕುಮಾರ್ ಅವರನ್ನು ಭೇಟಿ ಮಾಡಿದರು. ತನ್ನ ಯೋಜನೆಯನ್ನು ಅವರ ಮುಂದಿಟ್ಟರು. ಆಗ ‘ ಪ್ರಜಾ ಫಿಲಂಸ್ ‘ ಲಾಂಛನದಡಿ ಶ್ರೀನಿವಾಸ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ ಕೋಟಿ- ಚೆನ್ನಯ’ ಚಿತ್ರದ ಹೆಸರನ್ನು ನೋಂದಾಯಿಸಿಕೊಂಡರು. ಸಿನಿಮಾ’ ಮಾಡುವುದು ಅಷ್ಟು ಸುಲಭದ ವಿಷಯವಲ್ಲ- ಲಾಭ-ನಷ್ಟಗಳ ಮಾತು. ಕೆಲಸಗಳ ಒತ್ತಡಗಳಿಂದ ಶ್ರೀನಿವಾಸ್ ಅವರಿಗೆ ‘ ಕೋಟಿ- ಚೆನ್ನಯ’ ನಿರ್ಮಾಣ ಹಿಂದೆ ಬೀಳುತ್ತಿತ್ತು. ವಿಶುಕುಮಾರ್ ಬಿಡಬೇಕೇ? ಆಗ ಕಟಪಾಡಿ ಮುದ್ದು ಸುವರ್ಣ ಅವರನ್ನು ಭೇಟಿ ಮಾಡಿದರು. ಸುವರ್ಣರು ‘ ಬಿಲ್ಲವ’ ಸಮಾಜದ ಗಣ್ಯ ವ್ಯಕ್ತಿ. ಹೋಟೆಲ್ ಉದ್ಯಮಿ, ‘ ಸುವರ್ಣ ಮೋಟಾರ್ಸ್, ‘ ಶ್ರೀ ಸತ್ಯನಾಥ ‘ ಬಸ್ಸುಗಳ ಮಾಲೀಕರು. ಜತೆಗೆ ಲಿಕ್ಕರ್ ಗುತ್ತಿಗೆದಾರರು. ಅವರು ‘ ಕೋಟಿ- ಚೆನ್ನಯ’ ಚಿತ್ರದ ನಿರ್ಮಾಪಕರಾಗಲು ಒಪ್ಪಿಕೊಂಡರು. ಈ ಬಗ್ಗೆ ಕೋಟಿ- ಚೆನ್ನಯರ ಮೂಲ ಸ್ಥಾನವಾದ ಎಣ್ಮೂರಿನ ಗರಡಿಯಲ್ಲಿ ಪ್ರಸಾದ ಕೂಡ ಉತ್ತಮ ರೀತಿಯಲ್ಲಿ ಬಂದಿತು. ಟಿ.ಎ. ಶ್ರೀನಿವಾಸ ಅವರು ‘ ಪ್ರಜಾಫಿಲಂಸ್ ‘ ಲಾಂಛನದಡಿ ನೋಂದಾಯಿಸಿದ ‘ ಕೋಟಿ- ಚೆನ್ನಯ’ ಹೆಸರನ್ನು ಕೆ. ಮುದ್ದು ಸುವರ್ಣ ಅವರ ಹೆಸರಿಗೆ ಬದಲಾಯಿಸಲಾಯಿತು.

ವಿಶುಕುಮಾರ್ ಮತ್ತು ಛಾಯಾಗ್ರಾಹಕ ಎನ್. ಜಿ. ರಾವ್.

ವಿಶುಕುಮಾರ್ ಅವರು ಉತ್ತಮ ನಾಟಕ ನಿರ್ದೇಶಕ, ಕಥೆಗಾರ- ಲೇಖಕ. ಚಿತ್ರಕಥೆ , ಸಂಭಾಷಣೆ ಬರೆಯ ಬಲ್ಲರು. ಆದರೆ ಚಿತ್ರದ ನಿರ್ದೇಶನದ ತಾಂತ್ರಿಕತೆ ಅಷ್ಟೊಂದು ಗೊತ್ತಿಲ್ಲ. ಚಿತ್ರನಿರ್ದೇಶನ ಮಾಡಬೇಕೆಂಬ ಛಲ. ಇವರಿಗೆ ಬೆಂಬಲವಾಗಿ ನಿಂತವರು ಫೈಟರ್ ಶೆಟ್ಟಿ . ಇವರ ಮೂಲ ಹೆಸರು ಶ್ಯಾಮಸುಂದರ ಶೆಟ್ಟಿ. ಇವರು ಮೂಲತ : ದಕ್ಷಿಣ ಕನ್ನಡದವರು. ಇವರಿಗೆ ಬಾಂಬೆ ( ಹಿಂದಿ) ಚಿತ್ರರಂಗದಲ್ಲಿ ಒಳ್ಳೆ ಹೆಸರಿದೆ. ಹಿಂದಿಯ ಖ್ಯಾತ ನಿರ್ದೇಶಕ ವಿ. ಶಾಂತರಾಂ, ಅಮಿತಾಬಚ್ಚನ್ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ‘ ಕೋಟಿ- ಚೆನ್ನಯ’ ಚಿತ್ರದ ಸಾಹಸ ನಿರ್ದೇಶನ ಇವರದೇ ಆಗಿದೆ. ಹಾಗೂ ಚಿತ್ರದ ನಿರ್ಮಾಣಕ್ಕೂ ಸಹಕಾರ ನೀಡಿದರು.
ಚಿತ್ರದ ತಾರಾಗಣಕ್ಕೆ ಆಯ್ಕೆ ನಡೆಯಿತು. ಆಗಿನ ಕರಾವಳಿಯ ಜನಪ್ರಿಯ ಪತ್ರಿಕೆಗಳಾಗಿದ್ದ ‘ ಉದಯವಾಣಿ’, ‘ ನವಭಾರತ’ ಪತ್ರಿಕೆಗಳಲ್ಲಿ ಇದು ದೊಡ್ಡ ಸುದ್ದಿಯಾಯಿತು. ಕನ್ನಡ ಚಿತ್ರರಂಗದ ಶ್ರೇಷ್ಠ ನಟಿ ಕಲ್ಪನಾ ದ್ವಿಪಾತ್ರಕ್ಕೆ ಆಯ್ಕೆಯಾದರು. ದೇಯಿಬೈದೆದಿ ಹಾಗೂ ಕಿನ್ನಿದಾರುವಿನ ಪಾತ್ರ.

ಕೋಟಿ- ಚೆನ್ನಯ ಅವಳಿ ವೀರರ ಪಾತ್ರವನ್ನು ಸುಭಾಷ್ ಚಂದ್ರ ಪಡಿವಾಳ( ಕೋಟಿ) ಹಾಗೂ ವಾಮನ್ ರಾಜ್ ( ಚೆನ್ನಯ) ಪಾತ್ರಗಳಿಗೆ ಆಯ್ಕೆಯಾದರು. ಪೆರ್ಮಾಳ್ ಬಲ್ಲಾಳ್ ಪಾತ್ರದಲ್ಲಿ ಆನಂದ ಗಾಣಿಗ. ಈ ಕಲಾವಿದರೆಲ್ಲ ನಾಟಕರಂಗದಲ್ಲಿ ಹೆಸರು ಮಾಡಿದವರು. ಉಳಿದ ತಾರಾಗಣದಲ್ಲಿ ಭೋಜರಾಜ್, ಚೆನ್ನಪ್ಪ ಸುವರ್ಣ, ಮಂಜುನಾಥ ಇದ್ದಾರೆ. ಚಿತ್ರದ ಛಾಯಾಗ್ರಹಣ ಎನ್. ಜಿ. ರಾವ್, ಸಂಗೀತ : ವಿಜಯಭಾಸ್ಕರ್, ಸಂಕಲನ: ಭಕ್ತವತ್ಸಲ, ಹಿನ್ನಲೆ ಗಾಯಕರಾಗಿ ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ, ಹಾಗೂ ಎಚ್. ಎಂ. ಮಹೇಶ್, ಹಾಡಿನ ರಚನೆ : ಅಮೃತ ಸೋಮೇಶ್ವರ, ವಿವೇಕ ರೈ ಅವರದು ಆಗಿದೆ. ಇವೆಲ್ಲವೂ ೧೯೭೨ ರಲ್ಲಿ ನಡೆದಿರುವುದು. ಚಿತ್ರದ ಚಿತ್ರೀಕರಣ ಮೂಡಬಿದ್ರೆಯ ಅರಮನೆ, ಸಾವಿರ ಕಂಬದ ಬಸದಿ, ಎರ್ಮಾಳು ಬೀಡು, ಪಡುಬಿದ್ರಿ ಬೀಡು, ಶಿರ್ವದ ಪಿನಾರ ಕಾಡು, ಮಂಚಕಲ್, ಬೆಳ್ಮಣ್, ಹಿರಿಯಡ್ಕ, ಪೆರ್ಡೂರು, ಬೈಲೂರು, ಕಾರ್ಕಳ- ಮೊದಲಾದ ಕಡೆ ಚಿತ್ರೀಕರಣ ಮಾಡಲಾಗಿದೆ . ಒಂದು ದಿನ ಇದ್ದಕಿದ್ದ ಹಾಗೇ ಕರಾವಳಿ ಪತ್ರಿಕೆಗಳಲ್ಲಿ ಕಲ್ಪನಾ ಮತ್ತು ವಿಶುಕುಮಾರ್ ನಡುವಿನ ಜಗಳದ ಸುದ್ದಿ ಪ್ರಕಟವಾಯಿತು. ಚಿತ್ರ ಅರ್ಧದಲ್ಲಿ ನಿಲ್ಲುವ ಪರಿಸ್ಥಿತಿ ಬಂತು.   ನಟಿ ಕಲ್ಪನಾ ಭಾವೋದ್ವೇಗದ ವ್ಯಕ್ತಿ. ಚಿತ್ರದ ಸನ್ನಿವೇಶ ಚಿತ್ರಕಥೆಯಂತೆ ಬರಬೇಕೆಂದು ವಿಶುಕುಮಾರ್ ಅವರ ಅಭಿಪ್ರಾಯ- ಅಭಿನಯಕ್ಕೆ ಅದು ಸರಿ ಹೊಂದದಿರುವುದು ಆಕೆಯ ಅನಿಸಿಕೆ. ಇದು ಜಗಳಕ್ಕೆ ಮೂಲವಾಯಿತು. ಕಥೆಗಾರ ಮುದ್ದು ಮೂಡು ಬೆಳ್ಳೆ ಅವರು ಆಗಿನ ದಿನಗಳಲ್ಲಿ ೧೬ -೧೭ರ ತರುಣ. ನಿರ್ಮಾಪಕ ಮುದ್ದು ಸುವರ್ಣರ ಆಪ್ತ ಕಾರ್ಯದರ್ಶಿಯಾಗಿ ದುಡಿಯುತ್ತಿದ್ದರು. ವಿಶುಕುಮಾರ್ – ಕಲ್ಪನಾ ಜಗಳವನ್ನು ಬಲ್ಲವರು. ಅಂದರೆ ರಾತ್ರಿ ಫೋನ್ ನಲ್ಲಿ ಕಲ್ಪನಾ ಅವರು ನಿರ್ಮಾಪಕ ಮುದ್ದು ಸುವರ್ಣ ಅವರಿಗೆ ವಿಶುಕುಮಾರ್ ಬಗ್ಗೆ ಆಪಾದನೆ ಮಾಡಿರುವುದನ್ನು ಕೇಳಿದವರು. ” ಆಕೆ ಭಾವುಕ ನಟಿ. ಫೋನ್ ನಲ್ಲಿ ಮಾತುಗಳ ನಡುವೆ ಕಲ್ಪನಾರ ಅಳುವ ಧ್ವನಿ ಕೇಳುತ್ತಿತ್ತು. ಮುದ್ದು ಸುವರ್ಣರು ಅವರಿಗೆ ಸಮಾಧಾನ ಹೇಳುತ್ತಿದ್ದರು. ಸುವರ್ಣರ ಮಾತುಗಳು ನಮಗೆ ಕೇಳುತ್ತಿತ್ತು” ಎಂದು ಮುದ್ದು ಮೂಡುಬೆಳ್ಳೆ ಅವರು ಕಟಪಾಡಿಯ ‘ ಸುವರ್ಣ ಮಹಲ್’ ನಲ್ಲಿ ನಡೆದ ಘಟನೆ ಬಗ್ಗೆ ಸಂಕ್ಷಿಪ್ತವಾಗಿ ನಮ್ಮೊಡನೆ ಹೇಳಿದರು.
ಇಲ್ಲಿ ಕಲ್ಪನಾ ಅವರು ಜಗಳ ಮಾಡಿರುವುದು ತಪ್ಪಿಲ್ಲ ಅನ್ನಿಸಿದರೂ, ವಿಶುಕುಮಾರ್ ಅವರ ಬಗ್ಗೆಯೂ ಯೋಚಿಸಬೇಕಾಗಿದೆ. ಚಿತ್ರನಿರ್ದೇಶನದಲ್ಲಿ ನಿರ್ದೇಶಕನದೇ ಅಂತಿಮ ತೀರ್ಮಾನ ಹೇಳುತ್ತಾರೆ. ಅದು ನಿಜವೂ ಹೌದು. ಆದರೆ ವಿಶುಕುಮಾರ್ ವಿಷಯದಲ್ಲಿ ಹಾಗೇ ಹೇಳುವುದಕ್ಕೆ ಆಗುವುದಿಲ್ಲ. ಒಬ್ಬ ನಿರ್ದೇಶಕನ ಪಟ್ಟ ಏರಬೇಕಾದರೆ, ಆತ ಕೆಲವು ವರ್ಷ ಪಳಗಿದ ನಿರ್ದೇಶಕನ ಕೈಕೆಳಗೆ ದುಡಿದ ಅನುಭವವಿರಬೇಕು. ಆ ಅನುಭವ ವಿಶುಕುಮಾರ್ ಅವರಿಗೆ ಇರಲಿಲ್ಲ. ಅವರು ಒಬ್ಬ ಸಾಹಿತಿ, ನಾಟಕಗಾರ ಅಷ್ಟೇ – ಆ ರಂಗದಲ್ಲಿ ಹೆಸರು ಮಾಡಿದವರು. ನಿರ್ದೇಶನದ ಬಗ್ಗೆ ವಿಶುಕುಮಾರ್ ಗೆ ಥಿಯೇರಿ ಮಾತ್ರ ಗೊತ್ತು. ಪ್ರ್ಯಾಕ್ಟಿಲ್ ಇಲ್ಲ. ಕಲ್ಪನಾ ಹಾಗಲ್ಲ- ಕನ್ನಡ ಚಿತ್ರರಂಗದ ಮೇರು ನಟಿ. ಹಲವು ಚಿತ್ರಗಳಲ್ಲಿ ನಾಯಾಕಿ ನಟಿಯಾಗಿ ಅಭಿನಯಿಸಿದ್ದಾರೆ. ಅನುಭವದಿಂದ ನಿರ್ದೇಶನದ ಬಗ್ಗೆ ಅರಿವೂ ಕೂಡ ಇದೆ. ಹಾಗಾಗಿ ನಿರ್ಮಾಪಕ ಮುದ್ದು ಸುವರ್ಣ ಅವರು ಕಲ್ಪನಾ ಅಭಿಪ್ರಾಯ ಒಪ್ಪಬೇಕಾಯಿತು.

ವಿಶುಕುಮಾರ್, ಕೋಟಿ( ಸುಭಾಷ್ ಚಂದ್ರ ಪಡಿವಾಳ್) , ವಿಶುಕುಮಾರ್ ತಂದೆ ದೋಗ್ರ ಪೂಜಾರಿ, ಚೆನ್ನಯ( ವಾಮನ್) .

ಓದುಗರಿಗೆ ಇಲ್ಲೊಂದು ವಿಷಯ ಹೇಳಬೇಕಾಗಿದೆ. ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ‘ ನಾಗರ ಹಾವು ‘ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಆ ಚಿತ್ರದ ಮೂಲಕಥೆ ತರಾಸು ರಚಿತ ಕಾದಂಬರಿ ಆಧಾರಿತ ‘ ನಾಗರ ಹಾವು’. ಚಿತ್ರವನ್ನು ವೀಕ್ಷಿಸಿದ ತರಾಸು ಅವರು, ” ನಾಗರ ಹಾವು ಚಿತ್ರ ಕೇರೆ ಹಾವು ” ಎಂದು ಟೀಕೆ ಮಾಡಿದ್ದರು. ಲೇಖಕ ಬರೆದ ಕಾದಂಬರಿಯನ್ನು ಯಥವತ್ತಾಗಿ ಚಿತ್ರಮಾಧ್ಯಮಕ್ಕೆ ಅಳವಡಿಸಲು ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ಪುಟ್ಟಣ್ಣರವರೇ ಟೀಕೆಗೆ ಒಳಪಡಬೇಕಾಯಿತು.
ಕಲ್ಪನಾ ತುಳು ಭಾಷೆ ಬಲ್ಲವರು. ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ 1943 ರಲ್ಲಿ ಕೃಷ್ಣಮೂರ್ತಿ – ಜಾನಕಮ್ಮ ದಂಪತಿಗೆ ಹುಟ್ಟಿದವರು. ವಿಶುಕುಮಾರ್ ಮತ್ತು ಕಲ್ಪನಾ ಅವರಿಗೆ ಒಬ್ಬರೇ ನಾಟ್ಯಗುರುವಾಗಿದ್ದರು. ಅವರೇ ವಿಠಲ್ ಮಾಸ್ಟರ್. ‘ ಮಿನುಗುತಾರೆ’ ಕಲ್ಪನಾ ಅಭಿನಯರಂಗದಲ್ಲಿದ್ದುದು ಕೇವಲ 15 ವರ್ಷ. ಪಂಚಭಾಷಾ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ .ಸುಮಾರು 78 ಚಿತ್ರಗಳಲ್ಲಿ ನಟಿಸಿರುವ ಕಲ್ಪನಾ ಕಿರುವಯಸ್ಸಿನಲ್ಲಿ ತನ್ನ 36 ರ ಹರೆಯದಲ್ಲಿ ನಿಧನ ಹೊಂದಿದ್ದು ಮಾತ್ರ ದುರಂತ.

ತಾಂತ್ರಿಕ ಸಲಹೆಗಾರ ಬಿ.ನಾಗೇಶ ಬಾಬ ( ಎಡದಿಂದ ಮೊದಲನೆಯವರು) ಮತ್ತು ವಿಶುಕುಮಾರ್

ಕಲ್ಪನಾ- ವಿಶುಕುಮಾರ್ ಜಗಳ ಬಿಸಿ ತುಪ್ಪವಾಗಿ ಪರಿಣಮಿಸಿದ್ದು ಚಿತ್ರನಿರ್ಮಾಪಕ ಮುದ್ದು ಸುವರ್ಣ ಅವರಿಗೆ- ಚಿತ್ರ ನಿರ್ಮಾಣದ ಬಂಡವಾಳ ಅವರದು ತಾನೇ? 1965 ರಲ್ಲಿ ಬಿಡುಗಡೆಯಾದ ಕಲ್ಪನಾ ಮತ್ತು ರಾಜ್ ಕುಮಾರ್ ಅಭಿನಯದ ‘ ಉಯ್ಯಾಲೆ ‘ ಚಿತ್ರದ ನಿರ್ದೇಶಕರಾದ ಎನ್. ಲಕ್ಷ್ಮೀನಾರಾಯಣ್ ಅವರನ್ನು ಮುದ್ದು ಸುವರ್ಣ ಅವರು ಭೇಟಿ ಮಾಡಿದರು. ‘ ಕೋಟಿ- ಚೆನ್ನಯ ‘ ಚಿತ್ರನಿರ್ದೇಶನವನ್ನು ನೀವು ಮುಂದುವರಿಸಬೇಕೆಂದು ಕೇಳಿಕೊಂಡರು. ಆಗ ಅವರು ಒಪ್ಪಲಿಲ್ಲ. ” ನನಗೆ ತುಳು ಭಾಷೆ ಬಾರದು. ಅಲ್ಲಿನ ಸಂಸ್ಕೃತಿ, ಸಂಪ್ರದಾಯ ತಿಳಿಯದು. ವಿಶುಕುಮಾರ್ ಅವರೇ ಮುಂದುವರಿಯಲಿ. ಅವರಿಗೆ ತಾಂತ್ರಿಕ ಸಲಹೆಗಾರನಾಗಿ ನಾನು ಒಬ್ಬರನ್ನು ಕೊಡುತ್ತೇನೆ. ಬಿ. ನಾಗೇಶ ಬಾಬ ಅವರು ಉತ್ತಮ ನಿರ್ದೇಶಕರು. ‘ ಅನೀರಿಕ್ಷಿತ’ ಚಿತ್ರ ನಿರ್ದೇಶನ ಮಾಡಿದ್ದಾರೆ ” ಎಂದರು.
ಅದರಂತೆ ಬಿ.ನಾಗೇಶ ಬಾಬ ಅವರು ಎನ್. ಲಕ್ಷ್ಮೀನಾರಾಯಣ್ ಅವರ ಸಲಹೆಯಂತೆ ‘ ಕೋಟಿ- ಚೆನ್ನಯ’ ಕ್ಕೆ ತಾಂತ್ರಿಕ ಸಲಹೆಗಾರರಂತೆ ನೇಮಕಗೊಂಡರು. ಈ ಮಾತುಗಳನ್ನು ವಿಶುಕುಮಾರ್ ಅವರು ಪತ್ರಿಕೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ :
” ನಾನು ಚಿತ್ರಮಾಧ್ಯಮಕ್ಕೆ ಹೊಸಬನಾಗಿದ್ದರೂ ನನ್ನ ಮೇಲೆ ‘ರಿಸ್ಕ್ ‘ ತೆಗೆದುಕೊಂಡ ಮುದ್ದು ಸುವರ್ಣರ ಧೈರ್ಯ ಮತ್ತು ಅಭಿಮಾನವನ್ನು ಎಂದೆಂದಿಗೂ ಸ್ಮರಿಸಬೇಕು – ಹಾಗೆಯೇ ತನಗೆ ನಿರ್ದೇಶನದ ಅವಕಾಶ ಬಂದಿದ್ದರೂ ಯಾವ ಸ್ವಾರ್ಥವೂ ಇಲ್ಲದೆ ನಿರ್ದೇಶನದ ಮುಕುಟವನ್ನು ನನ್ನ ತಲೆ ಮೇಲೆ ಕೂರಿಸಿದ ಲಕ್ಷ್ಮೀನಾರಾಯಣರ ದೊಡ್ಡತನವನ್ನು ಸ್ಮರಿಸಬೇಕು” ಎಂದು ಹೇಳಿದ್ದಾರೆ. ಈ ಚಿತ್ರಕ್ಕೆ ಮುದ್ದು ಸುವರ್ಣರು ಸುಮಾರು ೪ ಲಕ್ಷ ರೂ. ಖರ್ಚು ಮಾಡಿದ್ದರು. ೧೯೭೩ ರ ಜೂನ್ ೪ ರಂದು ಸೆನ್ಸಾರ್ ಅನುಮತಿ ಪಡೆಯಿತು. ಜೂನ್ ೧೫ ರಂದು ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಬಿಡುಗಡೆ ಗೊಂಡಿತು. ೧೨೫ ದಿನಗಳ ಯಶ್ವಸ್ವಿ ಪ್ರದರ್ಶನ ಕಂಡು, ಅಪಾರ ಜನಮೆಚ್ಚುಗೆ ಪಡೆಯಿತು. ೧೯೭೩-೭೪ ನೇ ಕರ್ನಾಟಕ ರಾಜ್ಯದ ನಾಲ್ಕನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಈ ಚಿತ್ರಕ್ಕೆ ಸರಕಾರದ ೫೦ ಸಾವಿರ ರೂ. ಸಹಾಯಧನ ಲಭಿಸಿದೆ.

ಕೋಟಿ- ಚೆನ್ನಯ ಚಿತ್ರದ ‘ ಎಕ್ಕ ಸಕ, ಎಕ್ಕ ಸಕ – ಎಕ್ಕ ಸಕಲಾ ..ಬಿ. ಎ. ವಿವೇಕ ರೈ ಅವರ ರಚನೆಯ ಹಾಡು, ಜೋಡು ನಂದಾದೀಪ ಬೆಳಗುಂಡು …ಅಮೃತ ಸೋಮೇಶ್ವರರ ರಚನೆ ಹಾಗೂ ಸ್ವತ : ವಿಶುಕುಮಾರ್ ರಚನೆಯ ‘ ಮೊಕುಲು ವೀರೆರ್, ಮೊಕುಲು ಶೂರೆರ್, ನ್ಯಾಯ ಧರ್ಮೋಗು …- ಈ ಹಾಡುಗಳು ತುಂಬಾ ಜನಪ್ರಿಯವಾದವು.

‘ ಕೋಟಿ- ಚೆನ್ನಯ ‘ ಚಿತ್ರದ ನಿರ್ಮಾಣದಲ್ಲಿ ಓದುಗರು ಮುಖ್ಯವಾಗಿ ಗಮನಿಸಬೇಕಾದ ವಿಷಯ ಏನೆಂದರೆ: ವಿಶುಕುಮಾರ್ ರ ಧೈರ್ಯ. ಇದನ್ನು ನೀವು ಭಂಡ ಧೈರ್ಯ ಎಂದರೂ ಅನ್ನಬಹುದು. ಏನೂ ಗೊತ್ತಿಲ್ಲದ ವಿಷಯದ ಬಗ್ಗೆ ತಿಳಿದಿದ್ದರೂ, ಚಿತ್ರ ನಿರ್ದೇಶನದ ‘ ಪ್ರಾಕ್ಟಿಲ್ ‘ ಅನುಭವ ಇಲ್ಲದಿದ್ದರೂ, ಅದನ್ನು ಕಲಿತು ಮಾಡಿಯೇ ತೋರಿಸುತ್ತೇನೆಂಬ ಛಲ, ಹಠ ವಿಶುಕುಮಾರ್ ಅವರದು ದೊಡ್ಡದು. ಅದನ್ನು ಅವರು ‘ ಕೋಟಿ- ಚೆನ್ನಯ ‘ ಚಿತ್ರದ ನಿರ್ದೇಶನದಲ್ಲಿ ಮಾಡಿ ತೋರಿಸಿದ್ದಾರೆ. ಇದರಿಂದ ನಾವು ಕಲಿಯುವಂತಹದು ಬೇಕಾದಷ್ಟು ಇದೆ.

ಸ್ಥಿರ ಚಿತ್ರಗಳು: ಅಶ್ವತ್ ನಾರಾಯಣ.

 – ರವಿರಾಜ ಅಜ್ರಿ
31.09.2016
ರವಿರಾಜ ಅಜ್ರಿ

 

 

One thought on “ಕಲ್ಪನಾ- ವಿಶುಕುಮಾರ್ ಜಗಳ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 26-10-2024
ಸ್ಥಳ : ಸಮಾಜ ಮಂದಿರ, ಮೂಡುಬಿದಿರೆ

ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ

ದಿನಾಂಕ : 10-11-2024
ಸ್ಥಳ : ಅಮೃತ ಸೋಮೇಶ್ವರ ಸಭಾಭವನ ಊರ್ವಸ್ಟೋರ್

ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು

ದಿನಾಂಕ : 27-10-2024
ಸ್ಥಳ : ಎಸ್.ವಿ.ಎಸ್. ಶಾಲಾ ಮೈದಾನ ಬಂಟ್ವಾಳ

ಬೈದ್ಯಶ್ರೀ ಟ್ರೋಫಿ - 2024

ದಿನಾಂಕ : 07-09-2024
ಸ್ಥಳ : ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ

ನವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮ

ದಿನಾಂಕ :
ಸ್ಥಳ :

ಯುವ ಸ್ಟಾರ್ ಕಿಡ್ - 2024

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!