Yuvavahini

AUG 06, 2017 4.23 PM IST

ಸಿಂಚನ ವಿಶೇಷಾಂಕ : 2017

ಹೆಜ್ಜೆ ಇಡುತ್ತಾ ಬನ್ನಿ ಗೆಜ್ಜೆಗಿರಿಗೆ

ಐನೂರು ವರ್ಷಗಳ ಹಿಂದೆ ತುಳುನಾಡಿನಲ್ಲಿ ಅನೀತಿ ತಾಂಡವವಾಡುತ್ತಿದ್ದಾಗ. ಸತ್ಯಧರ್ಮರಕ್ಷಣೆಗಾಗಿ ಬ್ರಹ್ಮ ಸಂಕಲ್ಪದಂತೆ ಬಿಲ್ಲವ ಕುಲದಲ್ಲಿ ಅವತಾರ ಪಡೆದವರು ಕೋಟಿ ಚೆನ್ನಯರು. ಆಗಿನ ಕಾಲದ ಪಾಳೇಗಾರರಾಗಿದ್ದ ಬಂಟ ಬಲ್ಲಾಳರ ದರ್ಪ ದೌರ್ಜನ್ಯದ ಅಧರ್ಮದ ಆಡಳಿತ ನೀತಿಗೆ ವಿರುದ್ಧವಾಗಿ ಹೋರಾಡಿ ವೀರ ಮರಣವನ್ನಪ್ಪಿದ ದೈವತ್ವಕ್ಕೇರಿ ಬ್ರಹ್ಮದೇವರ ಎಡಬಲಗಳಲ್ಲಿ ನಿಂತು ಬ್ರಹ್ಮಬೈದ್ಯರಾಗಿ ತುಳುನಾಡಿನ ಭಕ್ತ ಜನಕೋಟಿಗಳಿಂದ ಇಂದು ಆರಾಧಿಸಲ್ಪಡುತ್ತಿ ದ್ದಾರೆ. ಸುಮಾರು ಇನ್ನೂರೈವತ್ತಕ್ಕಿಂತಲೂ ಅಧಿಕ ಸ್ಥಳಗಳಲ್ಲಿ ತಮ್ಮ ಕಲೆಕಾರ್ಣಿಕಗಳನ್ನು ತೋರಿಸಿ ಆರಾಧನೆ ಪಡಕೊಂಡ ಕೋಟಿ ಚೆನ್ನಯರಿಗೆ ಅವರು ತಮ್ಮ ಜೀವಿತಾವಧಿಯ ಮುಕ್ಕಾಲಂಶ ಬಾಳಿಬೆಳಗಿದ ಮನೆ ಗೆಜ್ಜೆಗಿರಿಯಲ್ಲಿ ಈವರೆಗೆ ಆರಾಧನೆ ಇರಲಿಲ್ಲ. ಆದರೆ ಇದೀಗ ಅವರ ತಾಯಿ ದೇಯಿ ಬೈದ್ಯತಿಗೆ ಪುನರ್ಜನ್ಮ ಸಿಕ್ಕಮನೆ ಮಾವ ಸಾಯನ ಬೈದ್ಯರ ಕರ್ಮ ಭೂಮಿಯಾದ ಗೆಜ್ಜೆಗಿರಿಯಲ್ಲಿ ಮೂಲಸ್ಥಾನ ಗರಡಿ ಹಾಗೂ ಗುರುಸಾಯನ ಬೈದ್ಯರು ಮತ್ತು ಮಾತೆ ದೇಯಿಬೈದ್ಯತಿಗೆ ಧರ್ಮಚಾವಡಿ ನಿರ್ಮಾಣದ ಸುವರ್ಣ ಕ್ಷಣ ನಮ್ಮ ನಿಮ್ಮೆಲ್ಲರ ಸಮಕಾಲೀನವಾಗಿ ನಡೆಯುತ್ತಿರುವುದು ಮಹಾಭಾಗ್ಯವೇ ಹೌದು.

ಕೋಟಿ ಚೆನ್ನಯರ ವೀರಗಾಥೆಗೆ ಸಂಬಂಧಿಸಿದ ಸ್ಥಳಗಳನ್ನು ಸ್ಮಾರಕವಾಗಿ ರಕ್ಷಿಸಬೇಕೆಂಬ ಆಶಯ ಈ ಹಿಂದೆಯೇ ಜನಮಾನಸದಲ್ಲಿದ್ದಿದ್ದರೂ ಅದು ಸಾಧ್ಯವಾಗಿರಲಿಲ್ಲ. ಆದರೆ ಶಾಸಕ ಶ್ರೀ ವಿನಯಕುಮಾರ್‍ರವರ ಪ್ರಯತ್ನದ ಫಲವಾಗಿ ನಾಲ್ಕು ವರ್ಷಗಳ ಹಿಂದೆ ಅವರು ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈಗಿನ ಕರ್ನಾಟಕ ಸರಕಾರವು ಕೋಟಿ ಚೆನ್ನಯರ ಐತಿಹ್ಯಕ್ಕೆ ಸಂಬಂಧಿಸಿದ ಸ್ಥಳಗಳನ್ನು ಸ್ಮಾರಕವಾಗಿ ರಕ್ಷಿಸುವ ಸಲುವಾಗಿ ಸುಮಾರು ಐದು ಕೋಟಿ ರೂಪಾಯಿಯನ್ನು ಕಾಯ್ದಿರಿಸಿತು. ಈ ಯೋಜನೆ ಬಂದದ್ದೇ ತಡ ಎಲ್ಲರ ಚಿತ್ತ ಅತ್ತ ನೆಟ್ಟಿತು. ಅದಕ್ಕೆಂದೇ ಸಮಿತಿ ರೂಪೀಕರಣವಾಯಿತು. ಯಾರ್ಯಾರೋ ಸಮಿತಿಯಲ್ಲಿ ಸೇರಿಕೊಂಡರು. ಸ್ಮಾರಕ ಸ್ಥಳಗಳಿಗೆ ಇಷ್ಟಿಷ್ಟು ಎಂದು ಹಂಚಿಕೆಯ ಯೋಜನೆಯನ್ನು ರೂಪೀಕರಿಸಿದರು. ಆದರೆ ಅದರಲ್ಲಿ ಕೋಟಿ ಚೆನ್ನಯರು ಬಾಳಿಬೆಳಗಿದ ಮನೆ ಗೆಜ್ಜೆ ಗಿರಿಯನ್ನು ಸಂಪೂರ್ಣ ನಿರ್ಲಕ್ಷಿಸಲಾಯಿತು. ಉದಾಹರಣೆಗೆ ಪಡುಮಲೆ ಬೀಡಿಗೆ ನಲ್ವತ್ತು ಲಕ್ಷ, ಬುದ್ಧಿವಂತನ ಮನೆಗೆ ಇಪ್ಪತ್ತೈದು ಲಕ್ಷ ಇಟ್ಟರೆ ಗೆಜ್ಜೆಗಿರಿಗೆ ಬರೇ ಎರಡೂವರೆ ಲಕ್ಷವನ್ನು ಮಾತ್ರ ಆ ಯೋಜನೆಯಲ್ಲಿ ಇಡಲಾಯ್ತು. ಮಾತ್ರವಲ್ಲ ಯಾವಾಗ ಭಾಷೆಗೆ ತಪ್ಪದ ಬಲ್ಲಾಳರಿಗೆ ರೋಸಿ ಹೋಗಿ ಇನ್ನೆಂದೂ ಇಲ್ಲಿಗೆ ಬರಲಾರೆವು ಎಂದು ಬೀಡಿಗೆ ಗಡಿ ಇಟ್ಟು ಭಾಷೆ ಹಾಕಿ ಕೋಟಿಚೆನ್ನಯರು ಹೋದರೋ ಅದೇ ಬೀಡಿನ ಸನಿಹದಲ್ಲೇ ಗರಡಿ ನಿರ್ಮಾಣದ ಯೋಜನೆಯನ್ನು ಅವೈಜ್ಞಾನಿಕವಾಗಿ ಹಮ್ಮಿಕೊಳ್ಳಲಾಯ್ತು. ಇದರ ಪರಿಣಾಮವಾಗಿ ಕೋಟಿಚೆನ್ನಯರ ಸಮಸ್ತ ನೈಜ ಭಕ್ತರು ಜಾಗೃತರಾದರು. ಅಷ್ಟಮಂಗಲ ಪ್ರಶ್ನೆಯ ಚಿಂತನ ನಡೆಸಿ ಶ್ರೀಕ್ಷೇತ್ರ ನಿರ್ಮಾಣಕ್ಕೆ ಕಂಕಣ ಬದ್ಧರಾದರು.

ಎಲ್ಲ ತಾಣಗಳಿಗೂ ಮೂಲ
2013ರಿಂದ ಪಡುಮಲೆ ಕೂವೆ ಶ್ರೀ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಲದಲ್ಲಿ ಗೆಜ್ಜೆಗಿರಿಯ ಮಹತ್ವ, ಮಹಿಮೆ, ಹಿನ್ನಲೆ ಅನಾವರಣಗೊಂಡಿತು. ಗೆಜ್ಜೆಗಿರಿಯಲ್ಲಿ ಮಾತೆ ದೇಯಿ ಬೈದ್ಯತಿಯ ಸಮಾಧಿ ಇರುವ ಅಂಶ ಈ ಪ್ರಶ್ನೆಯಲ್ಲಿ 2015ರ ಆಗಸ್ಟ್ 1ರಂದು ಗೋಚರಿಸಿತು. ಮಾತೆಯ ಸಮಾಧಿ ಪಡುಮಲೆ ಬೀಡಿನ ಪರಿಸರದಲ್ಲಿ ಇರಬಹುದೇ, ಗಂಡನ ಮನೆಯ ಪರಿಸರದಲ್ಲಿ ಇರಬಹುದೇ, ತಾಯಿ ಮನೆಯ ಪರಿಸರದಲ್ಲಿ ಇರಬಹುದೇ ಎಂಬ ಪ್ರಶ್ನೆಯನ್ನು ಇಟ್ಟುಕೊಂಡೇ ಅಂದು ರಾಶಿ ಇಟ್ಟು ಚಿಂತಿಸಲಾಗಿತ್ತು. ನಿರ್ವಿವಾದವಾಗಿಯೂ ಮಾತೆಯ ಸಮಾಧಿ ತಾಯಿ ಮನೆಯಾದ ಗೆಜ್ಜೆಗಿರಿಯಲ್ಲಿದೆ ಎಂಬುದು ಗೋಚರಿಸಿತು. ದೈವಜ್ಞರಾದ ಶಶಿಧರನ್ ಮಾಂಗಾಡ್ ದೇವಸ್ಥಾನದಲ್ಲಿ ಕುಳಿತ ಜಾಗದಿಂದಲೇ ಸಮಾಧಿಯ ಕುರುಹುಗಳನ್ನು ಪ್ರಶ್ನೆ ಮೂಲಕ ತಿಳಿಸಿದರು. ಅದರಂತೆ ಗೆಜ್ಜೆಗಿರಿಯಲ್ಲಿ ಬಂದು ಶೋಧಿಸಿದಾಗ ಅವೆಲ್ಲವೂ ಪತ್ತೆಯಾಯಿತು. ಇದಾದ ಬಳಿಕ ಬಳಿಕ ಗೆಜ್ಜೆಗಿರಿಯಲ್ಲಿ 2016ರ ಜನವರಿ 17,18,19 ಮತ್ತು ಮಾರ್ಚ್ 6 ಮತ್ತು 7ರಂದು ಒಟ್ಟು ಐದು ದಿನ ಅಷ್ಟಮಂಗಲ ಚಿಂತನೆಯನ್ನು ಪಯ್ಯನೂರಿನ ಸದನಂ ನಾರಾಯಣ ಪೊದುವಾಳ್, ಮಂಗಳೂರಿನ ಶಶಿಕುಮಾರ್ ಪಂಡಿತ್ ಅವರ ನೇತೃತ್ವದಲ್ಲಿ ಹಾಗೂ ಮಂಗಳೂರಿನ ಉಮೇಶ್ ಶರ್ಮಾ ಅವರ ಉಪಸ್ಥಿತಿಯಲ್ಲಿ ನಡೆಸಲಾಯ್ತು. ಮೂಲಸ್ಥಾನ ಕ್ಷೇತ್ರ ನಿರ್ಮಾಣವಾಗಬೇಕಾದ ಅಗತ್ಯತೆ ಇಲ್ಲಿ ಎದ್ದು ಕಂಡಿತು. ಈ ನಡುವೆ 500 ವರ್ಷಗಳ ಹಿಂದೆ ದೇಯಿ ಮಾತೆ ಬಳಸುತ್ತಿದ್ದ ಅಮೃತ ಸಂಜೀವಿನಿ ಪಾತ್ರೆ 2014ರಲ್ಲಿ ಪವಾಡ ರೀತಿಯಲ್ಲಿ ಮತ್ತೆ ತನ್ನ ಮೂಲ ಮಣ್ಣು ಗೆಜ್ಜೆಗಿರಿಯನ್ನು ಸೇರಿತು. ಮುಂದಿನ ದಿನಗಳಲ್ಲಿ ಈ ಕ್ಷೇತ್ರವು ಎಲ್ಲ ಗರಡಿ ಕ್ಷೇತ್ರಗಳಿಗೂ ಮೂಲವಾಗಲಿದೆ ಮತ್ತು ಮಾತೆ ದೇಯಿ ಬೈದ್ಯತಿಯ ತಾಣವು ಭಕ್ತ ಸಮುದಾಯದ ಪಾಲಿನ ಮೂಲಸ್ಥಾನವಾಗಲಿದೆ ಎಂಬ ಮಹತ್ವದ ಅಂಶ ಮೇಲಿನ ಎರಡೂ ಪ್ರಶ್ನೆಗಳಲ್ಲಿ ಗೋಚರಿಸಿದೆ.
ಆ ಪ್ರಕಾರ ಪುರಾತನ ಕಾಲದ ತೀರ್ಥಬಾವಿಯನ್ನು ಮತ್ತೆ ತೆರೆಯಲಾಗಿದೆ. 2016ರ ಎಪ್ರಿಲ್ 29ರಂದು ಕ್ಷೇತ್ರದ ತಂತ್ರಿವರ್ಯರಾದ ಶ್ರೀ ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿ ಧರ್ಮಚಾವಡಿ ಮತ್ತು ಮೂಲಸ್ಥಾನ ಗರಡಿ ನಿರ್ಮಾಣಕ್ಕೆ ಶಿಲಾ ಪರಿಗ್ರಹ ಮತ್ತು ಶಿಲಾಪೂಜೆ ನಡೆಸಲಾಯಿತು. 2016ರ ನವೆಂಬರ್ 13ರಂದು ಧೂಮಾವತಿ ನೇಮೋತ್ಸವ ಹಾಗೂ ಯಜಮಾನ ಪಟ್ಟಾಭಿಷೇಕ ನಡೆದಿದ್ದು, 2017ರ ಜನವರಿ 1ರಂದು ಬಾಲಾಲಯ ಪ್ರತಿಷ್ಠೆ ಸಂಪನ್ನಗೊಂಡಿತು. 2017ರ ಫೆಬ್ರವರಿ 19ರಂದು ಶ್ರೀಕ್ಷೇತ್ರಕ್ಕೆ ವಾಸ್ತುಶಿಲ್ಪ ತಜ್ಞರಾದ ಕಾಸರಗೋಡಿನ ಬೆದ್ರಡ್ಕ ಶ್ರೀ ರಮೇಶ್ ಕಾರಂತರ ಮಾರ್ಗದರ್ಶನದಲ್ಲಿ ವಿಜೃಂಭಣೆಯ ಶಿಲಾನ್ಯಾಸ ನೆರವೇರಿತು. ಅಂದು ಸುಮಾರು 25 ಸಾವಿರ ಭಕ್ತರನ್ನು ನಿರೀಕ್ಷಿಸಿದ್ದರೂ ಸುಮಾರು 40 ಸಾವಿರಕ್ಕಿಂತಲೂ ಅಧಿಕ ಭಕ್ತರ ಸೇರುವಿಕೆಯಿಂದ ದಾಖಲೆಯಾಗಿ ಕೋಟಿ ಚೆನ್ನಯರ ಕಾರಣಿಕಕ್ಕೆ ಸಾಕ್ಷಿಯಾಯಿತು.
ಪುನರುತ್ಥಾನಗೊಳ್ಳುವ ಸಾನಿಧ್ಯಗಳು
1. ಕ್ಷೇತ್ರದ ಆದಿದೈವ ಧೂಮಾವತಿ ಸಾನಿಧ್ಯ
2. ಕುಪ್ಪೆ ಪಂಜುರ್ಲಿ ದೈವಸ್ಥಾನ
3. ಬೆರ್ಮೆರ್ ಗುಂಡ
4. ಗುರುಸಾಯನ ಬೈದ್ಯರು ಮಾತೆ ದೇಯಿ ಬೈದ್ಯತಿ ಧರ್ಮಚಾವಡಿ
5. ಕೋಟಿ ಚೆನ್ನಯ ಮೂಲಸ್ಥಾನ ಗರಡಿ
6. ಮಾತೆ ದೇಯಿ ಬೈದ್ಯತಿಯ ಮಹಾ ಸಮಾಧಿ
7. ಚಾರಿತ್ರಿಕ ಸರೋಳಿ ಸೈಮಂಜಕಟ್ಟೆ
8. ಕಲ್ಲಾಲ್ದಾಯ ಸಾನಿಧ್ಯ
9. ಕೊರತಿ ಸಾನಿಧ್ಯ
ಗೆಜ್ಜೆಗಿರಿ ನಂದನ ಬಿತ್ತಿಲ್‍ನ ಮೂಲಮನೆ ಇದ್ದ ಸ್ಥಳದಲ್ಲಿ ಗುರುಸಾಯನ ಬೈದ್ಯರು-ಮಾತೆದೇಯಿ ಬೈದ್ಯತಿ ಧರ್ಮಚಾವಡಿ ಹಾಗೂ ಮೇಲೆ ಉಲ್ಲೇಖಿಸಿದ ಎಲ್ಲಾ ಸಾನಿಧ್ಯಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಾ ಇದೆ. ಈ ಸ್ಥಳದ ಈಶಾನ್ಯ ಭಾಗದ ಎತ್ತರ ಗುಡ್ಡ (ಶಿಖರ)ದಲ್ಲಿ ಬೆರ್ಮೆರ್ ಗುಂಡ ಹಾಗೂ ಕೋಟಿ ಚೆನ್ನಯರ ಗರಡಿ ನಿರ್ಮಾಣವಾಗಲಿದೆ. ಅಷ್ಟಮಂಗಲದಲ್ಲಿ ಕಂಡು ಬಂದ ಪ್ರಕಾರ ದುಷ್ಟಮಂತ್ರಿ ಬುದ್ಧಿವಂತನನ್ನು ವಧಿಸಿದ ಮೇಲೆ ಕೋಟಿ-ಚೆನ್ನಯರು ಇದೇ ಸ್ಥಳದಲ್ಲಿ ಕುಳಿತು ತಮ್ಮ ಕೋಪ ತಾಪಗಳನ್ನು ಕಳೆದು ಸಮಾಧಾನ ಪಟ್ಟುಕೊಂಡರಂತೆ. ಈ ಶಿಖರಾಗ್ರದಲ್ಲಿ ನಿರ್ಮಾಣವಾಗಲಿರುವ ಗರಡಿಯಿಂದ ಕೆಳಗೆ ಗೆಜ್ಜೆಗಿರಿ ಧರ್ಮಚಾವಡಿಗೆ ಮೆಟ್ಟಿಲುಗಳು ನಿರ್ಮಾಣವಾಗಲಿದ್ದು ಇದರ ಮೂಲಕ ಕೋಟಿಚೆನ್ನಯರು ಗರಡಿ ಇಳಿದು ಧರ್ಮಚಾವಡಿಯಲ್ಲಿ ಮಾತೆ ದೇಯಿಬೈದ್ಯತಿಯನ್ನು ಭೇಟಿಯಾಗಲಿದ್ದಾರೆ. ಇದೀಗ ಶ್ರೀಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ಶ್ರೀಮತಿ ಲೀಲಾವತಿ ಮಕ್ಕಳು ಹಾಗೂ ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿಯವರ ಮೇಲುಸ್ತುವಾರಿಯಲ್ಲಿ, ಶ್ರೀ ಚಿತ್ತರಂಜನ್, ಕಂಕನಾಡಿ ಗರಡಿ ಇವರ ಅಧ್ಯಕ್ಷತೆ ಶ್ರೀ ಪೀತಾಂಬರ ಹೆರಾಜೆ, ಶ್ರೀ ಜಯಂತ ನಡುಬೈಲ್ ಇವರುಗಳ ಕಾರ್ಯಾಧ್ಯಕ್ಷತೆ ಹಾಗೂ ನಿರ್ದೇಶನದಲ್ಲಿ, ಶ್ರೀ ರವಿ ಪೂಜಾರಿ ಚಿಲಿಂಬಿ, ದೀಪಕ್ ಕೋಟ್ಯಾನ್ ಗುರುಪುರ, ಶ್ರೀ ಸುಧಾಕರ ಸುವರ್ಣ ಹಾಗೂ ಉಲ್ಲಾಸ್ ಕೋಟ್ಯಾನ್ ಪುತ್ತೂರು ಇವರುಗಳ ಮುಂದಾಳತ್ವದಲ್ಲಿ ದೇಶ ವಿದೇಶದ ಕೋಟಿಚೆನ್ನಯರ ಭಕ್ತ ಬಂಧುಗಳ ಸಹಕಾರದಲ್ಲಿ ದೇಯಿಬೈದ್ಯತಿ-ಕೋಟಿ ಚೆನ್ನಯ ಮೂಲಸ್ಥಾನ ‘ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್’ನ ಪುನರುತ್ಥಾನ ಕಾರ್ಯಗಳು ಭರದಿಂದ ಸಾಗುತ್ತಾ ಇದೆ. ಭಕ್ತಿಯ ಹೆಜ್ಜೆ ಇಡುತ್ತಾ ಬನ್ನಿ ಭಕ್ತರೇ ಗೆಜ್ಜೆಗಿರಿಗೆ ಮೂಲಸ್ಥಾನ ಕ್ಷೇತ್ರದ ಪುನರುತ್ಥಾನಕ್ಕೆ ಕೈ ಜೋಡಿಸೋಣ. ಈ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಿ ಜೀವನದಲ್ಲಿ ಭಾಗ್ಯಶಾಲಿಗಳಾಗೋಣ.
ಲವಾನಂದ ಪೂಜಾರಿ ಎಲಿಯಾಣ
ಚಾರ್ಲ, ಮಂಜೇಶ್ವರ. ಮೊ.: 9745437971

 ಲವಾನಂದ ಪೂಜಾರಿ ಎಲಿಯಾಣ

One thought on “ಹೆಜ್ಜೆ ಇಡುತ್ತಾ ಬನ್ನಿ ಗೆಜ್ಜೆಗಿರಿಗೆ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!