ಮಳೆರಾಯಗೆ ಅಡ್ಡ ಹಿಡಿಯಬೇಕಿದ್ದ
ಬಣ್ಣಬಣ್ಣದ ಛತ್ರಿಯ ತುಂಬೆಲ್ಲಾ…
ಕುಂಟಲ ಹಣ್ಣುಗಳದ್ದೇ ಕಾರುಬಾರು…
ನಾ ನೆನದರೂ ಹಣ್ಣು
ನೆನೆಯಬಾರದೆಂಬ ಕಕ್ಕುಲತೆ…
ಅಮ್ಮ ಬೈಯುವಳೆಂದು ಹಸಿರೆಲೆಗಳ ತಿಂದು
ಕುಂಟಲ ಬಣ್ಣವ ಮಾಸಿಸಿ… ನಾಲಗೆ ಬಿಳಿ ಮಾಡಿದ
ನೆನೆದರೆ ಕನವರಿಸದೇ…ಬಾಲ್ಯ..ಇನ್ನೊಮ್ಮೆ…?
ಗೆಳತಿಯರೊಡನೆ ಓಡೋಡಿ
ಜೊತೆಗೂಡಿ ಗುಡ್ಡ ತೋಡು ದಾಟಿ
ಪ್ರೀತಿಯ ಶಾಲೆಗೆಂದು ಪ್ರೀತಿಯಿಂದ ಬರುತ್ತಿದ್ದ
ಅಂದಿನ ಮನಸ್ಸು ಇಂದಿನ ಮಕ್ಕಳಿಗಿಹುದೇ…!
ಶಾಲೆಗಿಹುದು ಕಲ್ಲು ಮುಳ್ಳ …ಗುಡ್ಡದ ಹಾದಿ…
ಆದರೆ… ಈ ದಿನಗಳಲ್ಲಿ… ಎಂದೂ ಅನ್ನಿಸಲಿಲ್ಲ…
ಕಲ್ಲು ಮುಳ್ಳೆಂದು….
ಅದರೀಗ ಮನೆಯ ಮೆಟ್ಟಲಿಳಿಯಬೇಕೆಂದರೆ
ಬೇಕು ಕಾಲಿಗೆರಡು ಜೋಡು…!
ದಾರಿಯುದ್ದಕ್ಕೂ ಪಕ್ಕದ ಮನೆಯಲ್ಲಿ
ಎಂದೋ ನೋಡಿದ ಗೆಳತಿಯ
ಸಿನಿಮಾ ಕತೆಗಳಿನ್ನೂ ಮನಸ್ಸಲ್ಲಿವೆ…
ಕಣ್ಣೆದುರು ಓಡುತ್ತಲ್ಲಿವೆ…
ಹಾದಿಯಲ್ಲಿ ಒಂದು ಗುಂಪಿನ
ಗೆಳತಿಯರು ಕಣ್ಮರೆಯಾದರೆ…
ಕೂಗುತ್ತಿದ್ದ ಕೂ…ಕೂ…
ಇನ್ನೂ… ಕಿವಿಯಲ್ಲಿ ಗುಂಯ್ ಗುಟ್ಟುತ್ತಿವೆ…
ಎರಡು ಜಡೆ ಹೆಣೆದು… ನೀಲಿ ಬಿಳಿ ಅಂಗಿಯ
ಶಾಲೆಗೋಡುತ್ತಿದ್ದ ಸೊಬಗ ಹೇಳತೀರದು…
ಆಗಿನ ಶಕ್ತಿಮಾನ್
ಈಗಿನ ಡೋರೆಮಾನ್‌ಗೆ
ಎಂದಾದರೂ ಸಮನಾದನೇ…?
ಅಂದಿನ ಕುಂಟ ಬಿಲ್ಲೆಗಳಿಂದು
ಕುಂಟಿಯೇ ಹೋಗಿವೆ…!
ಕಲ್ಲಾಟಕ್ಕಂತೂ ಕಲ್ಲುಗಳ ಹೆಕ್ಕುವವರಾರು…?
ಹುಡುಕುವವರಾರು…?
Nice poem, reminder of childhood.
Keep writing.All the best.
Super madam. Indy olleya kavana . Balya matthomme barali anisithu.
ಕುಂಟಲ, ಕುಂಟೆ ಬಿಲ್ಲೆಗಳ ಜೊತೆಗೆ ಕಳೆದು ಹೋದ ಅದೆಷ್ಟೋ ಬಾಲ್ಯದ ಕನಸುಗಳನ್ನು ಹುಡುಕಬೇಕಾಗಿದೆ…..ಹೆಕ್ಕಿ ಕೊಡುವವರು ಯಾರು….
ಕವಿತೆ ಚೆನ್ನಾಗಿ ಮೂಡಿ ಬಂದಿದೆ.
Awesome…keep going…
Super good luck
Kuntal da nenapanaga balyada aa savi nennepulu onjonje flashback du barodundu.
Eini bondolu,jambolu,thojank champakayi,pejakayi anchene yetho soppu phalokulu thuyerijji
Awesome … Reminded childhood memories.. keep writing ..
All the best madam
very nice..
Supper mem
ಮತ್ತೆ ಮತ್ತೆ ನೆನೆದರೆ ಮರಳಿ ಬಾರದ ಆ ದಿನಗಳನ್ನು
ಮಣ್ಣು ಸೇರುವ ತನಕ ಮರೆಯಲು ಸಾಧ್ಯವಿಲ್ಲ
ಬಾಲ್ಯದ ಆ ಭಾವನೆಗಳನ್ನು ಕಲ್ಪಿಸುವ ಕ್ಷಣಗಳು
ನೆನೆಸಿಕೊಂಡರೆ ಬರುವ ಆ ನಗು ತುಂಬಾ ಚೆನ್ನ