ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಮುಡಿಪಿನಡ್ಕ ಎಂಬಲ್ಲಿರುವ ದೇಯಿ ಬೈದೇತಿ ಔಷದಿ ವನದಲ್ಲಿ ಹಿಂದೂ ಸಮಾಜದ ವಿಶೇಷವಾಗಿ ಬಿಲ್ಲವ ಸಮಾಜದ ಆರಾಧ್ಯ ತಾಯಿ ದೇಯಿ ಬೈದೇತಿ ಮೂರ್ತಿಗೆ ಅಪಮಾನ ಮಾಡಿದ ಹೇಯ ಕೃತ್ಯದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯುವವಾಹಿನಿ ಪುತ್ತೂರು ಘಟಕ ಅಗ್ರಹಿಸಿದೆ. ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ ಪೋಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಯುವವಾಹಿನಿ ಪುತ್ತೂರು ಘಟಕವು ಅಭಿನಂದನೆ ಸಲ್ಲಿಸಿದೆ.
ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಈ ರೀತಿಯ ಧರ್ಮ ನಿಂದನೆ ಮತ್ತು ಸಮಾಜದ ಮಾತೃ ನಿಂದನೆ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಯುವವಾಹಿನಿ ಪುತ್ತೂರು ಘಟಕವು ಪುತ್ತೂರು DYSP ಯವರಿಗೆ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷರಾದ ಉದಯ ಕುಮಾರ್ ಕೋಲಾಡಿ , ಕಾರ್ಯದರ್ಶಿ ಸತ್ಯಜಿತ್ ಅಮ್ಮುಂಜ, ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಜಯಂತ ನಡುಬೈಲು, ನಿರ್ದೇಶಕರು, ಸಂಘಟನಾ ಕಾರ್ಯದರ್ಶಿಗಳು, ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು