ಘಟಕದ ವಾರ್ಷಿಕ ಮಹಾಸಭೆಯು ದಿನಾಂಕ 14-08-2016ರಂದು ಘಟಕದ ಉಪಾಧ್ಯಕ್ಷ ಯೋಗೀಶ್ ಮಜಿಕುಡೇಲು ಇವರ ಅಧ್ಯಕ್ಷತೆಯಲ್ಲಿ ಸುವರ್ಣ ಆರ್ಕೆಡ್ ಸಂತೆಕಟ್ಟೆ ಇಲ್ಲಿ ಜರಗಿತು. ಸಭೆಯಲ್ಲಿ 2015-16ನೇ ಸಾಲಿನ ವಾರ್ಷಿಕ ವರದಿ ಮಂಡನೆ ಜಮಾ-ಖರ್ಚಿನ ವಿವರ ಮಂಡನೆ, 2016-17ನೇ ಸಾಲಿನ ಅಂದಾಜು ಆಯ-ವ್ಯಯ ಪಟ್ಟಿಯ ಪರಿಶೀಲನೆ, 2016-17ನೇ ಸಾಲಿನ ನಿರ್ದೇಶಕರ ಆಯ್ಕೆ ನಡೆಯಿತು. ಪ್ರಾರಂಭದಲ್ಲಿ ರಘುನಾಥ್ ಶಾಂತಿ ಪ್ರಾರ್ಥಿಸಿ, ಅಶ್ವತ್ ಕುಮಾರ್‌ರವರು ಸ್ವಾಗತಿಸಿ, ಸ್ಮಿತೇಶ್ ಎಸ್. ಬಾರ್ಯ ವಂದಿಸಿದರು.
ನಿರ್ದೇಶಕರ ಸಭೆ
ದಿನಾಂಕ 14-8-2016ರಂದು ಘಟಕದ ನೂತನ ನಿರ್ದೇಶಕರ ಪ್ರಥಮ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಸದಾನಂದ ಉಂಗಿಲಬೈಲು, ಉಪಾಧ್ಯಕ್ಷರಾಗಿ ಅಶ್ವತ್ ಕುಮಾರ್, ಕಾರ್ಯದರ್ಶಿಯಾಗಿ ಪ್ರಶಾಂತ್ ಮಚ್ಚಿನ, ಜೊತೆ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಬಿಕ್ಕಿರ, ಕೋಶಾಧಿಕಾರಿಯಾಗಿ ವನಿತಾ ಪಿ. ಜನಾರ್ಧನ, ನಾರಯಣ ಗುರು ತತ್ವ ಪ್ರಚಾರದ ನಿರ್ದೇಶಕರಾಗಿ ಗಣೇಶ್ ಶಾಂತಿ, ಉದ್ಯೊÃಗ ಮತ್ತು ಭವಿಷ್ಯ ನಿರ್ಮಾಣದ ನಿರ್ದೇಶಕರಾಗಿ ವಿಠಲ ಸಿ. ಪೂಜಾರಿ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ನಿತ್ಯಾನಂದ ನಾವರ, ಸಮಾಜಸೇವೆ ನಿರ್ದೇಶಕರಾಗಿ ಹರೀಶ್ ಕನ್ಯಾಡಿ, ಕಲೆ ಮತ್ತು ಸಾಂಸ್ಕೃತಿಕ ನಿರ್ದೇಶಕರಾಗಿ ಸ್ಮಿತೇಶ್ ಎಸ್. ಬಾರ್ಯ, ಕ್ರಿÃಡೆ ಮತ್ತು ಆರೋಗ್ಯ ನಿರ್ದೇಶಕರಾಗಿ ಉಮಾನಾಥ ಕೋಟ್ಯಾನ್, ವಿದ್ಯಾರ್ಥಿ ಸಂಘಟನೆಯ ನಿರ್ದೇಶಕರಾಗಿ ಸತೀಶ್ ಪೂಜಾರಿ, ಆಂತರಿಕ ಲೆಕ್ಕ ಪರಿಶೋಧಕ ನಿರ್ದೇಶಕರಾಗಿ ನವೀನ್ ಇಂದಬೆಟ್ಟು, ಮಹಿಳಾ ಪ್ರತಿನಿಧಿಯಾಗಿ ಕೇಶವತಿ ಎನ್. ಕೆ., ಗೌರವ ಸಲಹೆಗಾರರಾಗಿ ಕೆ. ಮಹೇಶ್ ಕುಮಾರ್ ನಡಕ್ಕರ ಮೊದಲಾದವರು ಆಯ್ಕೆಯಾದರು.