ದೇಶದ ಸುಭದ್ರ ಭವಿಷ್ಯ ಮತ್ತು ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಗೋಪಿನಾಥ್ ಪಡಂಗ ತಿಳಿಸಿದರು
ಅವರು ದಿನಾಂಕ 05.09.2017ರಂದು ಯುವವಾಹಿನಿ (ರಿ) ಮುಲ್ಕಿ ಘಟಕದ ಆಶ್ರಯದಲ್ಲಿ ಶ್ರೀ ನಾರಾಯಣಗುರು ಪದವಿಪೂರ್ವ ಕಾಲೇಜಿನ ಸಹಯೋಗದೊಂದಿಗೆ ಮುಲ್ಕಿ ರುಕ್ಕುರಾಮ್ ಸಭಾಗೃಹದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಹಿರಿಯ ಶಿಕ್ಷಕರಾದ ಗಂಗಾಧರ್ ಪೂಜಾರಿ ಹಾಗೂ ವೀಣಾ ಸಿ.ಶೆಟ್ಟಿಗಾರ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಗಂಗಾಧರ್ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಕಾಲಘಟ್ಟದಲ್ಲಿ ಗುರುವಂದನೆ ಮೂಲಕ ಸಂಸ್ಕಾರಯುತ ಕಾರ್ಯಕ್ರಮ ಆಯೋಜಿಸಿದ ಮುಲ್ಕಿ ಯುವವಾಹಿನಿ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ನಾರಾಯಣಗುರು ವಿದ್ಯಾಸಂಸ್ಥೆಗಳ ಒಟ್ಟು 60 ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಗೌರವಿಸಲಾಯಿತು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ, ನಾರಾಯಣಗುರು ವಿದ್ಯಾಸಂಸ್ಥೆಗಳ ಸಂಚಾಲಕರಾದ ಎಚ್.ವಿ.ಕೋಟ್ಯಾನ್, ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ,ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಬಾಲಚಂದ್ರ ಸನಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು
,ಮುಖ್ಯೋಪಾಧ್ಯಾಯಿನಿ ಯಶೋಧ ಎಲ್.ಸಾಲ್ಯಾನ್, ವಿದ್ಯಾರ್ಥಿ ಸಂಘದ ನಾಯಕರಾದ ಪ್ರಥಮ್ ಅಂಚನ್, ರಮಣೇಶ್ ಪೂಜಾರಿ, ಯುವವಾಹಿನಿ ಮುಲ್ಕಿ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವವಾಹಿನಿ (ರಿ) ಮುಲ್ಕಿ ಘಟಕದ ಅಧ್ಯಕ್ಷರಾದ ರಕ್ಷಿತಾ ಯೋಗೀಶ್ ಕೋಟ್ಯಾನ್ ಸ್ವಾಗತಿಸಿದರು,ಪ್ರಾಂಶುಪಾಲರಾದ ಯತೀಶ್ ಅಮೀನ್ ಧನ್ಯವಾದ ನೀಡಿದರು. ಪೂಜಾ ಕಾರ್ಯಕ್ರಮ ನಿರ್ವಹಿಸಿದರು.