ಯುವವಾಹಿನಿ (ರಿ) ಪುತ್ತೂರು ಘಟಕದ ಆಶ್ರಯದಲ್ಲಿ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಬಡ ಕುಟುಂಬದ ಶ್ರೀಮತಿ ಸುಂದರಿ ಇವರಿಗೆ ಸುಮಾರು ನಾಲ್ಕುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡುವ ಸಮಾಜಮುಖಿ ಯೋಜನೆಗೆ ದಿನಾಂಕ 03.09.2017 ರಂದು ಶುಭ ಮುಹೂರ್ತ ನಡೆಸಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಪುತ್ತೂರು ಘಟಕದ ಅಧ್ಯಕ್ಷರಾದ ಉದಯ ಕೊಲಾಡಿ, ಯುವವಾಹಿನಿ (ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಜಯಂತ ನಡುಬೈಲು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ, ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾದ ಸೋಮಶೇಖರ್, ವಾಸ್ತು ತಜ್ಞರಾದ ಶ್ರೀಧರ್ ಮರಕ್ಕೂರು,ಹಾಗೂ ಉಮೇಶ್ ಮೇಗಿನ ಪಂಜ ಮತ್ತಿತರರು ಉಪಸ್ಥಿತರಿದ್ದರು.ಯುವವಾಹಿನಿ (ರಿ) ಪುತ್ತೂರು ಘಟಕವು ಮೂರು ತಿಂಗಳ ಒಳಗಡೆ ಮನೆ ನಿರ್ಮಾಣ ಕಾರ್ಯ ಪೂರ್ತಿಗೊಳಿಸಿ ಹಸ್ತಾಂತರ ಮಾಡುವ ಯೋಜನೆ ರೂಪಿಸಿದೆ.
Shubhavagali