ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ವಕೀಲರ ಸಂಘ ಬೆಳ್ತಂಗಡಿ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಬೆಳ್ತಂಗಡಿ,ಯುವವಾಹಿನಿ ಸಂಚಾಲನ ಸಮಿತಿ ವೇಣೂರು ಇದರ ಸಹಯೋಗದೊಂದಿಗೆ ದಿನಾಂಕ 30.08.2017 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಕೊಕ್ರಾಡಿಯಲ್ಲಿ ನಡೆದ ಕಾನೂನು ಮಾಹಿತಿ ಶಿಬಿರವನ್ನು ಬೆಳ್ತಂಗಡಿ JMFC ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಸತೀಶ್ ಉದ್ಘಾಟಿಸಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಗುರುನಾರಾಯಣ ಸ್ವಾಮೀ ಸೇವಾ ಸಂಘದ ಮಾಜಿ ನಿರ್ದೇಶಕ, ಕೊಕ್ರಾಡಿ SDMC ಅಧ್ಯಕ್ಷ ಸೂರ್ಯನಾರಾಯಣ ಡಿ.ಕೆ.ವಹಿಸಿ ಸತತ ಮೂರು ವರ್ಷಗಳಿಂದ ಕಾನೂನು ಮಾಹಿತಿ ಮತ್ತು ವೈದ್ಯಕೀಯ ಶಿಬಿರವನ್ನು ಆಯೋಜಿಸುತ್ತಿರುವ ಬೆಳ್ತಂಗಡಿ ಯುವವಾಹಿನಿಗೆ ಸಂಸ್ಥೆಯ ವತಿಯಿಂದ ಅಭಿನಂದನೆಯನ್ನು ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿ JMFC ನ್ಯಾಯಾಲಯದ ಹೆಚ್ಚುವರಿ ಸಿವಿಲ್ ಜಡ್ಜ್ ಕೆ.ಎಮ್.ಆನಂದ , ಉಪನ್ಯಾಸವನ್ನು ನೀಡಿದರು
ಬೆಳ್ತಂಗಡಿ ಯುವವಾಹಿನಿ ಘಟಕದ ಸಲಹೆಗಾರರಾದ ವಕೀಲ ಮನೋಹರ ಕುಮಾರ್ ಭಾರತದ ಪೌರರ ಮೂಲಭೂತ ಕರ್ತವ್ಯ ಎಂಬ ವಿಷಯದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ಸ್ಥಳೀಯ ಸಾವ್ಯ ಯುವವಾಹಿನಿ ಸಂಚಾಲನ ಸಮಿತಿ ಅಧ್ಯಕ್ಷ, ಬೆಳ್ತಂಗಡಿ PLD ಬ್ಯಾಂಕ್ ನಿರ್ದೇಶಕ ಶುಭಕರ ಪೂಜಾರಿ ಸಾವ್ಯ, ಕೊಕ್ರಾಡಿ ಬಿಲ್ಲವ ಸಂಘದ ಅಧ್ಯಕ್ಷ ಮಂಜಪ್ಪ ಪೂಜಾರಿಯವರು, ನ್ಯಾಯವಾದಿ ಶ್ರೀಮತಿ ಮಮ್ತಾಜ್ ಬೇಗಂ ಶುಭ ಹಾರೈಸಿದರು. ಉಪನ್ಯಾಸಕಿ ಕು.ಶ್ರುತಿ ಪ್ರಾರ್ಥಿಸಿ ,ಶ್ರೀಕೃಷ್ಣ ಸ್ವಾಗತಿಸಿದರು,ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಜಯಶ್ರಿ ಪ್ರಾಸ್ತಾವಿಕ ಮಾತನಾಡಿದರು ಶ್ರೀಮತಿ ಸೌಜನ್ಯ ನಿರೂಪಿಸಿ ,ಕಾರ್ಯಕ್ರಮ ಆಯೋಜಕ ರಾಕೇಶ್ ಕುಮಾರ್ ಮೂಡುಕೋಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವೇಣೂರು ಯುವವಾಹಿನಿ ಸಂಚಾಲನ ಸಮಿತಿಯ ಪದಾಧಿಕಾರಿಗಳು ಭಾಗವಸಿದ್ದರು.