ಯುವವಾಹಿನಿ (ರಿ) ಕೇಂದ್ರ ಸಮಿತಿ ,ಮಂಗಳೂರು

ಉಪ್ಪಿನಂಗಡಿಯಲ್ಲಿ ಯುವವಾಹಿನಿಯ 30ನೇ ವಾರ್ಷಿಕ ಸಮಾವೇಶ ಸಂಪನ್ನ

ಐಎಫ್‍ಎಸ್ ಅಧಿಕಾರಿ ದಾಮೋದರ ಎ.ಟಿ. ಯುವವಾಹಿನಿಯ ವಾರ್ಷಿಕ ಸಮಾವೇಶ ಉದ್ಘಾಟಿಸಿದರು

ಶೈಕ್ಷಣಿಕವಾಗಿ ಮತ್ತು ಸಂಘಟನಾತ್ಮಕವಾಗಿ ಸಮುದಾಯ ಎದ್ದುನಿಂತಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಬ್ರಹ್ಮಶ್ರೀ ನಾರಾಯಣ ಗುರುಗಳು ಹೇಳಿದ್ದಾರೆ. ಅದೇ ರೀತಿ ಮುಂದುವರಿದ ಬಿಲ್ಲವ ಸಮುದಾಯ ಈಗ ಬಲಿಷ್ಠಗೊಳ್ಳುತ್ತಿದೆ. ಆದರೆ ಕೆಲವರು ನಮ್ಮನ್ನು ತಮ್ಮ ಕೆಲಸಗಳಿಗಾಗಿ ಸೈನಿಕರನ್ನಾಗಿ ಬಳಸಿಕೊಳ್ಳುತ್ತಿದ್ದು, ಇದರಿಂದ ಕೋಮುಗಲಭೆಯಲ್ಲಿ ಶೇ. 70 ರಿಂದ 80ರಷ್ಟು ಬಿಲ್ಲವರು ಭಾಗಿಗಳಾಗುವಂತಾಗಿದೆ. ಇದರ ವಿರುದ್ಧ ಪ್ರತಿಯೋರ್ವರು ಎಚ್ಚೆತ್ತುಕೊಂಡು ಸಮುದಾಯದ ಯುವಕರು ಹಳಿ ತಪ್ಪದ್ದಂತೆ ಜಾಗೃತೆ ವಹಿಸಿಕೊಳ್ಳಬೇಕಿದೆ ಎಂದು ಐಎಫ್‍ಎಸ್ ಅಧಿಕಾರಿ ದಾಮೋದರ ಎ.ಟಿ. ತಿಳಿಸಿದರು.
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ವತಿಯಿಂದ ಯುವವಾಹಿನಿ ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನ ಮುಗ್ಗಗುತ್ತು ಜಗನ್ನಾಥ ಸಭಾಂಗಣದ ಮುಗ್ಗಗುತ್ತು ಸೂರಪ್ಪ ಪೂಜಾರಿ ಮೋನಮ್ಮ ವೇದಿಕೆಯಲ್ಲಿ ಭಾನುವಾರ ನಡೆದ ಯುವವಾಹಿನಿಯ 30ನೇ ವಾರ್ಷಿಕ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಒಂದು ಕಾಲದಲ್ಲಿ ಸಮಾಜದಲ್ಲಿ ತುಳಿತಕ್ಕೊಳಗಾಗಿದ್ದ ಬಿಲ್ಲವ ಸಮುದಾಯ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಇದೀಗ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದೆ. ಆದರೆ ಕೆಲ ಮೇಲ್ವರ್ಗದವರು ನಮ್ಮ ಕೆಲ ಯುವಕರನ್ನು ಮೆಟ್ಟಿಲುಗಳನ್ನಾಗಿ ಬಳಸಿಕೊಂಡು ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸ ಮಾಡಿಸುತ್ತಿದ್ದು, ಇದರ ವಿರುದ್ಧ ನಾವೆಲ್ಲಾ ಎಚ್ಚೆತ್ತುಕೊಂಡು ನಮ್ಮ ಯುವಕರನ್ನು ರಕ್ಷಿಸಬೇಕಿದೆ ಎಂದ ಅವರು, ಬಿಲ್ಲವ ಸಂಘಟನೆಗಳು ಜಿಲ್ಲಾ ಮಟ್ಟಕ್ಕೆ ಸೀಮಿತವಾಗದೇ ಸಮುದಾಯದ ಎಲ್ಲಾ ಪಂಗಡಗಳನ್ನು ಒಟ್ಟು ಸೇರಿಸಿ ಐಕ್ಯತೆ ಮೊಳಗಿಸುವ ಮೂಲಕ ಇನ್ನಷ್ಟು ಬಲಿಷ್ಠವಾಗಬೇಕಿದೆ ಎಂದರೆ, ಸಮುದಾಯದ ಯುವಕರು ದೊಡ್ಡ ಗುರಿ ಹಾಗೂ ಕನಸನ್ನಿಟ್ಟುಕೊಂಡು ಮುಂದುವರಿಯಬೇಕಿದ್ದು, ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯುವತ್ತಲೂ ಗಮನಕೊಡಬೇಕಿದೆ ಎಂದರು

 

ಶಾಸಕ, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಸಿಂಚನ ವಿಶೇಷಾಂಕ ಬಿಡುಗಡೆಗೊಳಿಸಿದರು

ಸಿಂಚನ ವಿಶೇಷಾಂಕ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಮಾತನಾಡಿ, ಸಮುದಾಯದ ಎಲ್ಲರೂ ಶಿಕ್ಷಿತರಾದಾಗ ಸಮುದಾಯದ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಬಿಲ್ಲವ ಸಮಾಜ ಜಿಲ್ಲೆಯಲ್ಲಿ ದೊಡ್ಡ ಸಮುದಾಯವಾಗಿದ್ದು, ರಾಜಕೀಯದಲ್ಲಿ ಇದು ಇನ್ನಷ್ಟು ಬಲಿಷ್ಠವಾಗಬೇಕಿದೆ. ಸಮುದಾಯದ ಯುವಕರು ದಾರಿತಪ್ಪದಂತೆ ನಾವೆಲ್ಲಾ ಎಚ್ಚರವಹಿಸಬೇಕಿದೆ ಎಂದರಲ್ಲದೆ, ಯುವಕರನ್ನು ಒಗ್ಗೂಡಿಸಿ ಸಮುದಾಯ ಬೆಳಗಲು ಯುವವಾಹಿನಿಯು ಬಹಳಷ್ಟು ಶ್ರಮಪಟ್ಟಿದ್ದು, ಜಿಲ್ಲೆಯಲ್ಲಿ ಅತ್ಯುತ್ತಮ ಸಂಘಟನೆಯಾಗಿ ಮೂಡಿಬಂದಿದೆ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಕಾಸರಗೋಡು ಸರಕಾರಿ ಕಾಲೇಜಿನ ಸಹಪ್ರಾಧ್ಯಾಪಕ ಡಾ. ರಾಜೇಶ್ ಬೆಜ್ಜಂಗಳ, ಆಧುನಿಕ ಜಗತ್ತಿನಲ್ಲಿ ಹೆಚ್ಚಿನ ಯುವಕರಿಂದು ಫ್ಯಾಶನ್ ಸಂಸ್ಕøತಿಗೆ ಮಾರುಹೋಗಿದ್ದು, ಬೇಗನೇ ಹಣಗಳಿಸುವುದರ ಹಿಂದೆ ಬಿದ್ದು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಇನ್ನೊಂದೆಡೆ ಹಿರಿಯರ ಆದರ್ಶಗಳನ್ನು ಮೂಲೆಗುಂಪಾಗಿಸಿ, ಫೇಸ್‍ಬುಕ್, ವಾಟ್ಸಫ್‍ನಂತಹ ಸಾಮಾಜಿಕ ಜಾಲತಾಣದಲ್ಲಿ ಲೈಕ್, ಫಾರ್ವಡ್‍ಗಳನ್ನು ಮಾಡಲಷ್ಟೇ ಸೀಮಿತಗೊಂಡಿದ್ದಾರೆ. ಅವಕಾಶವಾದಿಗಳಿಗೆ ಅವಕಾಶ ಕೊಡುವ ಮೊದಲು ಯಾವುದು ತಪ್ಪು, ಯಾವುದು ಸರಿ ಎನ್ನುವುದನ್ನು ಪರಾಂಬರಿಸಿ ನೋಡುವ ಕೆಲಸ ನಡೆಯಬೇಕು. ಆದರೆ ಅದೆಲ್ಲಾ ಆಗದಿರುವುದೇ ಯುವಕರು ದಾರಿತಪ್ಪುವಂತಹ ಸಮಸ್ಯೆ ಬರಲು ಕಾರಣವಾಗಿದೆ. ಬದುಕೆಂಬುದು ಪ್ರೀತಿಯಿಂದ ಬೆಳಗಬೇಕೇ ಹೊರತು ದ್ವೇಷದಿಂದಲ್ಲ. ಆದ್ದರಿಂದ ಪ್ರತಿಯೋರ್ವರು ನಮ್ಮ ಹೆತ್ತವರನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯಬೇಕು. ಸಮುದಾಯದ ಹಿರಿಯರಿಂದ ಯುವಕರನ್ನು ಸಮಾಜದಲ್ಲಿ ನಾಯಕರನ್ನಾಗಿ ಬೆಳೆಸುವ ಕೆಲಸ ನಡೆಯಬೇಕು. ನಾವೆಲ್ಲರೂ ಒಗ್ಗೂಡಿ ಪ್ರೀತಿ, ಸಂಬಂಧ, ಶಾಂತಿಯಿಂದ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ಶಯನಾ ಜಯಾನಂದ್ ಮಾತನಾಡಿ, ಆಧುನಿಕ ಜಗತ್ತು ನಮ್ಮದಾಗಿದ್ದು, ಮೊಬೈಲ್ ಸೇರಿದಂತೆ ಹೊಸ ಹೊಸ ತಂತ್ರಜ್ಞಾನಗಳು ಇಲ್ಲಿ ಆವಿಷ್ಕಾರಗೊಳ್ಳುತ್ತಿವೆ. ಇವುಗಳಲ್ಲಿ ಉಪಕಾರವೂ ಇದ್ದು, ಮಾರಕವೂ ಇದೆ. ಆದ್ದರಿಂದ ಇವುಗಳನ್ನು ಉತ್ತಮ ಕೆಲಸಗಳಿಗಾಗಿ ಮಾತ್ರ ಉಪಯೋಗಿಸಿಕೊಳ್ಳಬೇಕು. ಹಿರಿಯರಿಗೆ ಗೌರವ ನೀಡುವುದು ಸೇರಿದಂತೆ ಭಾರತೀಯ ಸಂಸ್ಕøತಿಯನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ಮೊದಲು ನಮ್ಮ ಭವಿಷ್ಯತ್ತನ್ನು ಉತ್ತಮವಾಗಿ ರೂಪಿಸುವ ಕೆಲಸ ಆಗಬೇಕಿದೆ. ಆಗ ನಮ್ಮೊಂದಿಗೆ ಈ ಸಮಾಜದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದರು.
ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನಾತ್ಮಕವಾಗಿ ಮುಂದುವರಿದಾಗ ಮಾತ್ರ ಸಮುದಾಯದ ಅಭಿವೃದ್ಧಿಯೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಸಮುದಾಯದ ಪ್ರತಿಯೋರ್ವರು ಒಂದೇ ವೇದಿಕೆಯಡಿ ಸಂಘಟಿತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ಗಾಂಧಿನಗರದ ಶ್ರೀ ವೆಂಕಟೇಶ ಶಿವಭಕ್ತಿ ಯೋಗಸಂಘಕ್ಕೆ ಯುವವಾಹಿನಿ `ಸಾಧನಾ ಶ್ರೇಷ್ಠ’ ಪ್ರಶಸ್ತಿ ಹಾಗೂ ಕೈಗಾರಿಕೋದ್ಯಮಿ ಚಂದಯ್ಯ ಬಿ. ಕರ್ಕೇರ ಅವರಿಗೆ ಯುವವಾಹಿನಿ `ಸಾಧನಾ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷಕಲಾವಿದ ರವಿಚಂದ್ರ ಕನ್ನಡಿ ಕಟ್ಟೆ ಹಾಗೂ ಧರಣೇಂದ್ರ ಕುಮಾರ್ ಅವರಿಗೆ ಯುವ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೇ, ಕ್ರೀಡೆ, ಶೈಕ್ಷಣಿಕ, ವೈದ್ಯಕೀಯ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವ ಅಭಿನಂದನೆ ಹಾಗೂ ಸಮುದಾಯದ ಸಾಧಕ ವಿದ್ಯಾರ್ಥಿಗಳಿಗೆ ಅಕ್ಷರ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಯುವವಾಹಿನಿ ಕೇಂದ್ರ ಸಮಿತಿಯ ನೂತನ ಉಪಾಧ್ಯಕ್ಷ ಹಾಗೂ ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. .

  • ಪ್ರಶಸ್ತಿ, ಪುರಸ್ಕಾರ
    ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘ(ರಿ) ಗಾಂಧಿನಗರ
    ಮಂಗಳೂರು ಹಾಗೂ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ ಶ್ರೀ ಚಂದಯ್ಯ ಬಿ.ಕರ್ಕೇರಾ ಇವರಿಗೆ ಪ್ರಧಾನ ಮಾಡಲಾಯಿತು.
    ಯಕ್ಷಲೋಕದ ಗಾನ ಸುರಭಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಹಾಗೂ ಸಾಮಾಜಿಕ ಕ್ಷೇತ್ರದ ಸಾಧಕ ಶ್ರೀ ಧರಣೇಂದ್ರ ಕುಮಾರ್ ಇವರುಗಳಿಗೆ ಯುವವಾಹಿನಿ ಯುವಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು.
    ಡಾ.ಸದಾನಂದ ಪೂಜಾರಿ, ಡಾ.ಮನೋಜ್ ಕುಮಾರ್, ಡಾ.ರಶ್ಮಿ ಕೆ.ಎಸ್, ಡಾ.ಅಚ್ಯುತ ಪೂಜಾರಿ, ಡಾ.ರಾಕೇಶ್ ಪೂಜಾರಿ ಕೈರೋಡಿ, ಡಾ.ನಿಖಿತಾ ಸುಕೇಶ್, ಇವರ ಸಾಧನೆಯನ್ನು ಗುರುತಿಸಿ ಯುವವಾಹಿನಿ ಗೌರವ ಅಭಿನಂದನೆ ಮಾಡಲಾಯಿತು.
    ವಾಲಿಬಾಲ್ ಕ್ರೀಡೆಯ ಮಿಂಚು ಪ್ರತೀಕ್ಷಾ ಕೆ, ಮಿಂಚಿನ ಓಟಗಾರ ಸ್ವಸ್ತಿಕ್ ಕೆ. , ಯುವ ರಂಗ ನಿರ್ದೇಶಕ ಸ್ಮಿತೇಶ್ ಎಸ್.ಬಾರ್ಯ,ಬಹುಮುಖ ಪ್ರತಿಭೆ ವಿಭಾ ಬಿ ಇವರಿಗೆ ಯುವವಾಹಿನಿ ಪ್ರತಿಭಾ ಪುರಸ್ಕಾರ ನೀಡಲಾಯಿತು.
    ಜಯಾನಿ ರೋಹಿನಾಥ್, ನಿಗಮ್ ಆರ್ ಪೂಜಾರಿ, ಆಕಾಂಕ್ಷ ವಿ.ಕೆ, ವಿಮರ್ಷಾ, ಶಿವರಾಮ, ಜೇಷ್ಠಾ, ರಿತಿಕಾ ಎಚ್ ಪೂಜಾರಿ, ದರ್ಶನ್ ಪಿ, ಸೌಂದರ್ಯ ವಿ.ಕುಮಾರ್, ಶ್ರೀಜನಿ ವಿ.ಕೆ, ಗಗನ್ ಡಿ.ಕರ್ಕೇರಾ ಇವರ ಶೈಕ್ಷಣಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಯುವವಾಹಿನಿ ಅಕ್ಷರ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
  • ಘಟಕಗಳ ಅಧ್ಯಕ್ಷರುಗಳ ಉಪಸ್ಥಿತಿ
    ರವೀಶ್ ಕುಮಾರ್ ಮಂಗಳೂರು, ರವೀಂದ್ರ ಎಸ್ ಕೋಟ್ಯಾನ್ ಸುರತ್ಕಲ್, ಲೋಕೇಶ್ ಸುವರ್ಣ ಅಲೆತ್ತೂರು ಬಂಟ್ವಾಳ, ಉದಯ ಕುಮಾರ್ ಕೋಲಾಡಿ ಪುತ್ತೂರು, ಉದಯ ಆರ್ ಪಣಂಬೂರು, ಶರತ್ ಕುಮಾರ್ ಹಳೆಯಂಗಡಿ, ಮಹೇಂದ್ರ ಸಾಲ್ಯಾನ್ ಹೆಜಮಾಡಿ, ಸಂತೋಷ್ ಕುಮಾರ್ ಪಡುಬಿದ್ರೆ, ಪ್ರದೀಪ್ ಎಸ್ ಆರ್ ಸಸಿಹಿತ್ಲು, , ಮಹೇಶ್ ಎನ್ ಅಂಚನ್ ಕಟಪಾಡಿ, ಅಶೋಕ್ ಕುಮಾರ್ ಎನ್ ಉಪ್ಪಿನಂಗಡಿ, ಸುಪ್ರೀತಾ ಪೂಜಾರಿ ಮಂಗಳೂರು ಮಹಿಳಾ, ರಮೇಶ್ ಕುಮಾರ್ ಉಡುಪಿ, ರಕ್ಷಿತಾ ವೈ ಕೋಟ್ಯಾನ್ ಮುಲ್ಕಿ, ಶಂಕರ ಪೂಜಾರಿ ಯಡ್ತಾಡಿ, ಭಾಸ್ಕರ್ ಕೆ.ಸಾಲ್ಯಾನ್ ಅಡ್ವೆ, ಚಂದ್ರಶೇಖರ್ ಸಿ.ಪೂಜಾರಿ ಬಜ್ಪೆ, ಸದಾನಂದ ಪೂಜಾರಿ ಬೆಳ್ತಂಗಡಿ, ಪ್ರದೀಪ್ ಸುವರ್ಣ ಬೆಳುವಾಯಿ, ಗೋಪಾಲ ಪೂಜಾರಿ ಕಂಕನಾಡಿ, ಪುಷ್ಪರಾಜ್ ಕೂಳೂರು, ಸುರೇಶ್ ಕುಮಾರ್ ಕೊಲ್ಯ, ಶಿವಪ್ರಸಾದ್ ಕೆ.ವಿ. ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು
    ಕೇಂದ್ರ ಸಮಿತಿಯ ಸಮಾವೇಶದ ನಿರ್ದೇಶಕ ಡಾ. ಸದಾನಂದ ಕುಂದರ್ ಸ್ವಾಗತಿಸಿದರು. ಸಮಾವೇಶದ ಯುವವಾಹಿನಿ ಉಪ್ಪಿನಂಗಡಿ ಘಟಕದ ಸಂಚಾಲಕ ಅಶೋಕ್ ಕುಮಾರ್ ಪಡ್ಪು ವಂದಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತೇಶ್ ಜೆ. ಕರ್ಕೇರ ವಾರ್ಷಿಕ ವರದಿ ಮಂಡಿಸಿದರು. ನ್ಯಾಯವಾದಿ ಮನೋಹರ್ ಕುಮಾರ್, ಉಪನ್ಯಾಸಕ ಲೊಕೇಶ್ ಬೆತ್ತೋಡಿ,ಪತ್ರಕರ್ತ ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು. . ಬಳಿಕ ಕಿರಣ್ ಕುಮಾರ್ ಗಾನಸಿರಿ ನಿರ್ದೇಶನದಲ್ಲಿ `ಹಾಡು- ಕುಣಿದಾಡು’ ಗಾನ, ನೃತ್ಯಗಳ ಸಂಗಮ ನಡೆಯಿತು.

4 thoughts on “ಉಪ್ಪಿನಂಗಡಿಯಲ್ಲಿ ಯುವವಾಹಿನಿಯ 30ನೇ ವಾರ್ಷಿಕ ಸಮಾವೇಶ ಸಂಪನ್ನ

  1. ಅಚ್ಛುಕಟ್ತಾದ ಕಾರ್ಯಕ್ರಮ ಸೊಗಸಾದ ಮಾತುಗಳು..ಪ್ರೆರಕ ಪುರಸ್ಕಾರಗಳು..ಅಭಿನಂದನೀಯಾ ಪ್ರಸಸ್ತಿಗಳು….ಸಂಘಟನಾತ್ಮಕ ತಂಡದ ಪ್ರಮಾಣವಚಣ…….ಅತಿಸುಂದರ ಕಾರ್ಯಕ್ರಮ..

Leave a Reply

Your email address will not be published. Required fields are marked *

ಸಂಪರ್ಕಿಸಿ : +91 99644 75220
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ :
ಸ್ಥಳ :

ಯುವವಾಹಿನಿ(ರಿ.) ಕುಪ್ಪೆಪದವು ಘಟಕ

ದಿನಾಂಕ : 18-08-2024
ಸ್ಥಳ : ಕುದ್ರೋಳಿ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
ಯುವವಾಹಿನಿ ಸಂಸ್ಥೆಯ ಮೂವತೈದು ವರುಷಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಗೌರವ

ಯುವವಾಹಿನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

  ಮಂಗಳೂರು : ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನವೆಂಬರ್ ಒಂದರಂದು ನಡೆಯುವ...

Sunday, 30-10-2022
error: Content is protected !!