ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ 24ನೇ ನೂತನ ಘಟಕ ಯುವವಾಹಿನಿ(ರಿ) ಕೊಲ್ಯ ಘಟಕವು 26 ಫೆಬ್ರವರಿ 2017ನೇ ಆದಿತ್ಯವಾರ ಮಂಗಳೂರಿನ ಬ್ರಹ್ಮಶ್ರೀ ನಾರಾಯಣಗುರು ಮಂದಿರ ಕೊಲ್ಯ ಸೋಮೇಶ್ವರದಲ್ಲಿ ಉದ್ಘಾಟನೆಗೊಂಡಿತು.
ಕೊಲ್ಯ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾದ್ಯಕ್ಷ ಡಾ.ಪಿ ರಾಮಾನುಜಂ ದೀಪ ಬೆಳಗುವುದರ ಮೂಲಕ ಕೊಲ್ಯ ಘಟಕವನ್ನು ಉದ್ಗಾಟಿಸಿ ಶುಭ ಹಾರೈಸಿದರು.
ನಮ್ರತಾಭಾವ ಉನ್ನತಿಗೆ ಕಾರಣವಾಗುತ್ತದೆ. ಅಹಂಭಾವ ತೊರೆದು ಹಿರಿಯರಿಗೆ ಸಮಾಜಕ್ಕೆ ತಗ್ಗಿ ಬಗ್ಗಿ ನಡೆಯುವ ಸುಸಂಸ್ಕೃತ ಗುಣ ಹೊಂದಿರುವ ಸ್ವಾರ್ಥರಹಿತ ನಿಷ್ಪಕ್ಷಪಾತ ಶಿಸ್ತುಬದ್ದ ಯುವಕರ ಸಂಘಟನೆಯೇ ಯುವವಾಹಿನಿ.
ಯುವವಾಹಿನಿ ಒಂದು ಕೌಟುಂಬಿಕ ಸಂಸ್ಥೆ, ಯುವವಾಹಿನಿಗೆ ಯುವವಾಹಿನಿಯೇ ಸಾಟಿ. ಯುವಕರ ಬಗ್ಗೆ ಸ್ವಾಮೀ ವಿವೇಕನಂದರು ಹೇಳಿದ ಮಾತನ್ನು ಅಕ್ಷರಶಃ ಪಾಲಿಸಿದ ಸಂಸ್ಥೆ ಯುವವಾಹಿನಿ.
ಕ್ರೀಡೆ ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಬಿಲ್ಲವ ಸಮಾಜ ಮುಂಚೂಣಿಯಲ್ಲಿದೆ.ಆದರೆ ರಾಜಕೀಯ ಹಿನ್ನಡೆಯ ಬಗ್ಗೆ ನಾವು ಆತ್ಮಾವಲೋಕನ ಮಾಡುವುದು ಒಳಿತು ಎಂದು ಪ್ರಧಾನ ಭಾಷಣಕಾರರಾದ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಅಭಿಪ್ರಾಯಪಟ್ಟರು.
ಹಣದ ಬಲ ಭುಜದ ಬಲ ಜಗದ ಬಲ ಅಭಿಜಾತ ಬಲ ಇವೆಲ್ಲವೂ ಶಾಶ್ವತ ಅಲ್ಲ ಪ್ರಜ್ಞಾಬಲ ಮಾತ್ರ ಶಾಶ್ವತ ಜ್ಞಾನವು ನಮ್ಮಲ್ಲಿರುವ ಸೃಜನಶೀಲವಾದ ಶಕ್ತಿ ವಿಶೇಷಗಳನ್ನು ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ ಎಂದು ಮುಖ್ಯ ಅತಿಥಿಯಾಗಿ ಮಾತಾಡಿದ ಎಲ್ ಐ ಸಿ ಅಧಿಕಾರಿ ಚಂದ್ರಕಾತ್ ಕುಮಾರ್ ತಿಳಿಸಿದರು.
ಕೊಲ್ಯ ಬಿಲ್ಲವ ಸಮಾಜ ಸೇವಾ ಸಂಘದ ಅದ್ಯಕ್ಷರಾದ ಈಶ್ವರ ಸುವರ್ಣ ಕನೀರುತೋಟ ಹಾಗೂ ಮಲರಾಯ ದೂಮಾವತಿ ಬಂಟ ದೈವಗಳ ಚಾರಿಟಬಲ್ ಟ್ರಸ್ಟ್ ಅದ್ಯಕ್ಷರಾದ ಬಾಬು ಶಾಸ್ತ ಕೀನ್ಯ ಮುಖ್ಯ ಅತಿಥಗಳಾಗಿ ಭಾಗವಹಿಸಿ ಕೊಲ್ಯ ಯುವವಾಹಿನಿಯು ಬಲಿಷ್ಟವಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.
ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅದ್ಯಕ್ಷ ಪದ್ಮನಾಭ ಮರೋಳಿ ಸಭೆಯ ಅದ್ಯಕ್ಷತೆ ವಹಿಸಿದ್ದರು.
ಕೊಲ್ಯ ಯುವವಾಹಿನಿಯ ನೂತನ ಅದ್ಯಕ್ಷ ಸುರೇಶ್ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಚಿವರಾದ ಯು.ಟಿ.ಖಾದರ್, ಗೆಜ್ಜೆಗಿರಿ ನಂದನಬಿತ್ತಲ್ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಚಂದ್ರಶೇಖರ್ ಉಚ್ಚಿಲ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಹಾಗೂ ಯುವವಾಹಿನಿಯ ವಿವಿಧ ಘಟಕಗಳ ಸದಸ್ಯರು ನೂತನ ಘಟಕಕ್ಕೆ ಶುಭಹಾರೈಕೆ ಮಾಡಿದರು.ಸಭಾ ಕಾರ್ಯಕ್ರಮದ ಮುನ್ನ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಯುವವಾಹಿನಿ(ರಿ) ಕೇಂದ್ರ ಸಮಿತಿಯ ಮಾಜಿ ಅದ್ಯಕ್ಷ ತುಕರಾಮ್ ಎನ್ ಪ್ರಸ್ತಾವನೆಯ ಮೂಲಕ ಯುವವಾಹಿನಿಯ 29 ವರ್ಷಗಳ ಸಮಾಜಮುಖಿ ಕಾರ್ಯಕ್ರಮಗಳ ಬೆಳಕು ಚೆಲ್ಲಿದರು. ಯುವವಾಹಿನಿ ಮಂಗಳೂರು ಘಟಕದ ಅದ್ಯಕ್ಷ ಸುನಿಲ್ ಅಂಚನ್ ಸ್ವಾಗತಿಸಿದರು. ಯುವವಾಹಿನಿಯ ಮಂಗಳೂರು ತಾಲೂಕು ಸಂಘಟನಾ ಕಾರ್ಯದರ್ಶಿ ಹರೀಶ್ ಪೂಜಾರಿ ಪದಗ್ರಹಣ ಕಾರ್ಯಕ್ರಮ ನಡೆಸಿಕೊಟ್ಟರು. ಕೊಲ್ಯ ಯುವವಾಹಿನಿಯ ನೂತನ ಕಾರ್ಯದರ್ಶಿ ಲತೀಶ್ ಎಂ ಸಂಕೋಲಿಗೆ ಧನ್ಯವಾದ ನೀಡಿದರು.
Good job new kolya chapter…All the best…
Super like it
GOOD W K RAJESHANNA SU….RB
Good luck Kolya yuvavahini