ಕೌಟುಂಬಿಕ ಸಾಮರಸ್ಯ,ಇಚ್ಛಾಶಕ್ತಿ, ಆತ್ಮ ಶಕ್ತಿ, ಸತತ ಪ್ರಯತ್ನ, ಇವೇ ಯುವವಾಹಿನಿಯ ಸಾಧನೆಯ ಹಿಂದಿರುವ ಶಕ್ತಿ, ಕೇವಲ 9 ತಿಂಗಳಲ್ಲಿ ಮೌಲ್ಯಯುತ 24 ಕಾರ್ಯಕ್ರಮಗಳನ್ನು ನೀಡಿದ ಕೂಳೂರು ಯುವವಾಹಿನಿ ಘಟಕವು ಯುವ ಜನಾಂಗಕ್ಕೆ ಮಾದರಿಯಾಗಿದೆ, ಕ್ರಿಯಾಶೀಲ ಯೋಜನೆ ಯೋಚನೆಗಳಿಂದ ಕೂಡಿದ ಅಂತರಾಷ್ಟ್ರೀಯ ಸಂಸ್ಥೆ ಗೆ ಸರಿಸಮನಾಗಿರುವ ಪದಗ್ರಹಣ ಸಮಾರಂಭವು ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕರಾದ ಡಾ.ಗಣೇಶ್ ಅಮೀನ್ ಸಂಕಮಾರ್ ಅಭಿಪ್ರಾಯ ಪಟ್ಟರು.
ಅವರು ದಿನಾಂಕ 25.06.2017ನೇ ಆದಿತ್ಯವಾರ ಕೂಳೂರು ಚರ್ಚ್ ಹಾಲ್ ನಲ್ಲಿ ಜರುಗಿದ ಯುವವಾಹಿನಿ (ರಿ) ಕೂಳೂರು ಘಟಕದ 2017-18 ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಗೌರವಾಧ್ಯಕ್ಷರಾದ ರಾಘವೇಂದ್ರ ಕೂಳೂರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಬಿ.ಜೆ.ಪಿ.ಮಹಿಳಾ ಮೋರ್ಚಾದ ಕಾರ್ಯದರ್ಶಿ ಯಾದ ಶ್ರೀಮತಿ ಗೀತಾಂಜಲಿ ಸುವರ್ಣ ಅವರು ಶ್ರೀಮತಿ ರೇಣುಕಾ ಪ್ರಸಾದ್ ಸಂಪಾದಕೀಯದಲ್ಲಿ ಮೂಡಿ ಬಂದ ಯುವವಾಹಿನಿ ಕೂಳೂರು ಘಟಕದ ಸಾಧನೆಯನ್ನು ಒಳಗೊಂಡ ವಿಶೇಷ ಪುರವಣಿ ಮಾತೃ ಸ್ಪರ್ಶ -2017 ಬಿಡುಗಡೆಗೊಳಿಸಿದರು.
ಯುವವಾಹಿನಿ ಕೂಳೂರು ಘಟಕದ ಮಾತೃ ಸಂಸ್ಥೆ ಕೂಳೂರು ಬ್ರಹ್ಮ ಶ್ರೀ ನಾರಾಯಣಗುರು ಸೇವಾ ಮಂದಿರ ಪದಾಧಿಕಾರಿಗಳ ನಿರಂತರ ಸಹಕಾರ, ಸ್ಥಳಾವಕಾಶ, ಪ್ರೋತ್ಸಾಹ ಸ್ಮರಿಸಿ ರೂ.16,000/- ಬೆಲೆಯ ದ್ವನಿವರ್ದಕವನ್ನು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಅಧ್ಯಕ್ಷರಾದ ಜಯಾನಂದ ಅಮೀನ್ ಪುನ್ಕೆಮಾರ್ ಇವರಿಗೆ ಹಸ್ತಾಂತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ ಕೂಳೂರು ಘಟಕದ ಸ್ಥಾಪಕ ಅಧ್ಯಕ್ಷರಾದ ಸುಜಿತ್ ರಾಜ್ ಕಳೆದ ಒಂದು ವರ್ಷದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಸ್ಮರಣಿಕೆ ನೀಡಿ ಗೌರವಿಸಿದರು.ಯುವವಾಹಿನಿ ಕೂಳೂರು ಘಟಕದ 2017-18 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ ಪ್ರಮಾಣ ವಚನ ಬೋಧಿಸಿದರು. ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಪ್ರದಾನ ಕಾರ್ಯದರ್ಶಿ ಸದಾಶಿವ ಬಿ.ಸುವರ್ಣ,ಪಂಜಿಮೊಗರು ಉರುಂದಾಡಿ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ಗಿರಿಧರ ಸನಿಲ್,ಯುವವಾಹಿನಿ ಕೇಂದ್ರ ಸಮಿತಿಯ ಪ್ರಥಮ ಅಧ್ಯಕ್ಷರಾದ ಸಂಜೀವ ಪೂಜಾರಿ, ಯುವವಾಹಿನಿ ಮಂಗಳೂರು ತಾಲೂಕು ಸಂಘಟನಾ ಕಾರ್ಯದರ್ಶಿ ಹರೀಶ್ ಕೆ.ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭಗಳಲ್ಲಿ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಯುವವಾಹಿನಿ ಕೂಳೂರು ಘಟಕದ ಕಾರ್ಯದರ್ಶಿ ದೀಕ್ಷಿತ್ ಸಿ.ಎಸ್.ಪೂಜಾರಿ 2016-17 ನೇ ಸಾಲಿನ ವಾರ್ಷಿಕ
ವರದಿ ಮಂಡಿಸಿದರು.ಶ್ರೀಮತಿ ನಯನಾ ಹಾಗೂ ಶ್ರೀಮತಿ ಮಧುಶ್ರೀ ಪ್ರಾರ್ಥಿಸಿದರು.ನೂತನ ಕಾರ್ಯದರ್ಶಿ ವಿನೀತ್ ಪೂಜಾರಿ ಧನ್ಯವಾದ ನೀಡಿದರು. ಪವಿತ್ರಾ ಅಂಚನ್,ಪ್ರತೀಶ್,ಗೌರೀಶ್ ಕಾರ್ಯಕ್ರಮ ನಿರ್ವಹಿಸಿದರು
ವರದಿ : ವಿನೀತ್ ಪೂಜಾರಿ ,ಕಾರ್ಯದರ್ಶಿ ಯುವವಾಹಿನಿ (ರಿ ) ಕೂಳೂರು ಘಟಕ
Professional cum traditional dress code superb.
All the best for New team.
Good programme
…verigood arrangement