ನಿರಂತರ ಸಂಪರ್ಕ ಹಾಗೂ ನಿರಂತರ ಸಭೆಗಳನ್ನು ನಡೆಸುವ ಮೂಲಕ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸಬಹುದು ಎಂದು ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ.ಬಂಟ್ವಾಳ್ ತಿಳಿಸಿದರು.ಅವರು ದಿನಾಂಕ 25.06.2017 ನೇ ಆದಿತ್ಯವಾರ ಪುತ್ತೂರು ಬಿಲ್ಲವ ಸಂಘದ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ(ರಿ) ಪುತ್ತೂರು ಘಟಕದ 2016-17 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷರಾದ ಜಯಂತ ಪೂಜಾರಿ ಕೆಂಗುಡೇಲು ಮಾತನಾಡಿ ಯುವವಾಹಿನಿ ಹಾಗೂ ಬಿಲ್ಲವ ಸಂಘದ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತಾನು ತೊಡಗಿಸಿಕೊಂಡಿದ್ದರಿಂದ ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಂತಾಯಿತು ಎಂದರು.
ಕಳೆದ ಒಂದು ವರ್ಷದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.ಕಾರ್ಯದರ್ಶಿ ಉದಯ ಕುಮಾರ್ ಕೊಲಾಡಿ 2016-17 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.ನಿಕಟ ಪೂರ್ವ ಅಧ್ಯಕ್ಷರಾದ ಶಶಿಧರ ಕಿನ್ನಿಮಜಲು 2017-18 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕಟಿಸಿದರು.
ಅಧ್ಯಕ್ಷರಾಗಿ ಉದಯ ಕುಮಾರ್ ಕೋಲಾಡಿ, ಕಾರ್ಯದರ್ಶಿಯಾಗಿ ವಿಶ್ವಜಿತ್ ಅಮ್ಮುಂಜೆ ಆಯ್ಕೆಯಾದರು.
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ತುಕರಾಮ್ ಎನ್, ಕೇಶವ ಪೂಜಾರಿ ಬೆದ್ರಾಳ, ಕೇಶವ ಮುರ,ಬಾಲಕೃಷ್ಣ ಪಲ್ಲತ್ತಾಯ,ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್ , ಅಶೋಕ್ ಕುಮಾರ್, ಹರೀಶ್ ಶಾಂತಿ, ಮತ್ತಿತರರು ಉಪಸ್ತಿತರಿದ್ದರು.
ಅಗಸ್ಟ್ 6 ರಂದು ಉಪ್ಪಿನಂಗಡಿಯಲ್ಲಿ ಜರಗುವ ಯುವವಾಹಿನಿಯ 30 ನೇ ವಾರ್ಷಿಕ ಸಮಾವೇಶಕ್ಕೆ ಸಹಕಾರ ನೀಡುವಂತೆ ಉಪ್ಪಿನಂಗಡಿ ಯುವವಾಹಿನಿ ಅಧ್ಯಕ್ಷರಾದ ಅಶೊಕ್ ಕುಮಾರ್ ಪಡ್ಪು ತಿಳಿಸಿದರು.ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷರಾಗಿ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಜಯಂತ ನಡಯಬೈಲು ಜುಲೈ ತಿಂಗಳಿನಲ್ಲಿ ಜರಗುವ ಪದಗ್ರಹಣ ಸಮಾರಂಭಕ್ಕೆ ಎಲ್ಲರನ್ನೂ ಆಹ್ವಾನಿಸಿದರು.ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಪಾಲ್ತಾಡಿ ನಿವಾಸಿ ಕುಸುಮಾ ಹಾಗೂ ಪ್ರತಿಭಾವಂತ ಬಡ ಪದವಿ ವಿದ್ಯಾರ್ಥಿನಿ ಆಶಿಕಾ ಇವರುಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಕಾರ್ಯದರ್ಶಿ ಉದಯ ಕುಮಾರ್ ಕೋಲಾಡಿ,ಧನ್ಯವಾದ ನೀಡಿದರು.