ಬಿಲ್ಲವರು ತಮ್ಮದೇ ಆದ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸಿಕೊಂಡು ಈ ತುಳುನಾಡಿನ ಮೂಲ ಜನಾಂಗಗಳಲ್ಲಿ ಒಬ್ಬರಾಗಿ ಸಂಪ್ರದಾಯಗಳನ್ನು ಉಳಿಸಿಕೊಂಡು ಬರುತ್ತಿದ್ದಾರೆ”. ಈ ಸಂಸ್ಕೃತಿಯನ್ನು ಉಳಿಸುವಲ್ಲಿ ಯುವವಾಹಿನಿಯೂ ಸಹ ಅವಿರತವಾಗಿ 30 ವರ್ಷಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದು ಶೈಲು ಬಿರ್ವ ಅಗತ್ತಾಡಿ ತಿಳಿಸಿದರು.
ಅವರು ದಿನಾಂಕ 11.06.2017 ರಂದು ಅಡ್ವೆ ಆನಂದಿ ಸಭಾ ಭವನದಲ್ಲಿ ಜರುಗಿದ ಯುವವಾಹಿನಿ ಅಡ್ವೆ ಘಟಕದ ಪದಗ್ರಹಣದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆ ಯನ್ನು ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿಪಾಲ್ ನೆರವೇರಿಸಿ ಅಡ್ವೆ ಘಟಕದಿಂದ ಊರಿನಲ್ಲಿ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಮುಂದೆಯೂ ಉತ್ತಮ ರೀತಿಯಲ್ಲಿ ಘಟಕವು ಬೆಳೆಯಲಿ ಎಂದು ಆಶಿಸಿದರು. ವೇದಿಕೆಯಲ್ಲಿ ಪದ್ಮನಾಭ ಮರೋಳಿ, ಸದಾಶಿವ ಡಿ.ಕೋಟ್ಯಾನ್, ನವೀನ್ ಚಂದ್ರ ಸುವರ್ಣ, ದಿನೇಶ್ ಕೋಟ್ಯಾನ್, ಪ್ರಮೋದ್ ಅಡ್ವೆ ಗರಡಿಮನೆ ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಶಶಿಧರ್.ಟಿ.ಪೂಜಾರಿಯವರು 2016-17 ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಗೆ ನೀಡಿದರು.
ಪರಿಸರದ ಹಾಗೂ ಸುತ್ತಮುತ್ತಲಿನ 7ನೇ ತರಗತಿ, ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಳೆದ ಒಂದು ವರ್ಷದಲ್ಲಿ ವಿದ್ಯಾನಿಧಿಯಿಂದ ಸಂಗ್ರಹವಾದ ಮೊತ್ತವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ವೆ, ಇದರ ಮುಖ್ಯೋಪಾದ್ಯಾಯರಿಗೆ ಹಸ್ತಾಂತರಿಸಲಾಯಿತು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಪದ್ಮನಾಭ ಮರೋಳಿಯವರು ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿ ಶುಭ ಹಾರೈಸಿದರು.
ನೂತನ ಅಧ್ಯಕ್ಷರಾದ ಭಾಸ್ಕರ್ ಸಾಲಿಯಾನ್ ಎಲ್ಲರ ಸಹಕಾರ ಯಾಚಿಸಿ, ಘಟಕವನ್ನು ಮುಂದಿನ ಒಂದು ವರ್ಷದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸುವುದಾಗಿ ಭರವಸೆ ನೀಡಿದರು. ನಿರ್ಗಮನ ಅಧ್ಯಕ್ಷ ಪ್ರವೀಣ್ ಕುಮಾರ್‌ರವರು ಮಾತನಾಡಿ ಒಂದು ವರ್ಷದ ಅವಧಿಯಲ್ಲಿ ಘಟಕವನ್ನು ಮುನ್ನೆಡುಸುವಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು ಹಾಗೂ ಮುಂದೆಯು ಯುವವಾಹಿನಿಯ ಅಭಿವೃದ್ದಿಯಲ್ಲಿ ತನ್ನ ಪರಿಪೂರ್ಣ ಸಹಕಾರ ಇರುವುದಾಗಿ ತಿಳಿಸಿದರು.
ನವೀನ್ ಚಂದ್ರ ಸುವರ್ಣ ಪ್ರಾಸ್ತಾವಿತ ನುಡಿಗಳನ್ನಾಡಿದರು, ನೂತನ ಕಾರ್ಯದರ್ಶಿ ಶ್ರೀಧರ್ .ಟಿ.ಪೂಜಾರಿ ವಂದಿಸಿದರು. ಸುಜಿತ್ ಕುಮಾರ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ವರದಿ : ನಿತೇಶ್ ಕರ್ಕೇರಾ