ವಿದ್ಯೆಯು ಚೋರರಿಂದ ಅಪಹರಿಸಲ್ಪಡುವಂತದ್ದಲ್ಲ ,ರಾಜರಿಂದ ಗೆದ್ದುಕೊಳ್ಳಲು ಸಾಧ್ಯವಾಗುವಂತಹದ್ದಲ್ಲ, ಸೋದರರಿಂದ ಭಾಗಮಾಡಿಕೊಳ್ಳುವಂತದ್ದಲ್ಲ, ಹಂಚಿದಷ್ಟು ವೃದ್ದಿಯಾಗುವುದೇ ವಿದ್ಯೆ. ಆದ್ದರಿಂದ ಸಕಲ ದಾನಕ್ಕಿಂತಲೂ ವಿದ್ಯಾದಾನವೇ ಶ್ರೇಷ್ಠವಾದುದು. ಶಿಕ್ಷಣಕ್ಕೆ ಬಡತನ, ಆರ್ಥಿಕತೆ, ಇತರ ಬದುಕಿನ ಜಂಜಾಟಗಳು ಯಾವುದೂ ಅಡ್ಡಿ ಬರಬಾರದು ಎಂಬ ನೆಲೆಯಲ್ಲಿ ಕಲಿಯಲು ಹಂಬಲಿಸುವ ಯುವ ಮನಸ್ಸು ಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಮಾಜದ ಅಂಚಿಗೆ ತಳ್ಳಲ್ಪಟ್ಟ ಶೋಷಿತರ ,ಧಮನಿರತರ, ನೋವಿಗೆ ಸ್ಪಂದನೆ ನೀಡುವ ಕೆಲಸ ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಮಾಡುತ್ತಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಕಾರ್ಯದರ್ಶಿ ಪ್ರೇಮನಾಥ್ ಕೆ.ಬಂಟ್ವಾಳ್ ತಿಳಿಸಿದರು.
ಅವರು ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಯುವವಾಹಿನಿ ಸಂಚಲನಾ ಸಮಿತಿ ವೇಣೂರು ಮತ್ತು ಕರಿಮಣೇಲು ಇದರ ಸಹಯೋಗದೊಂದಿಗೆ ದಿನಾಂಕ 16.06.2017 ರಂದು ಕರಿಮಣೇಲು ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಂದೇ ಜಾತಿ,ಒಂದೇ ಮತ,ಒಂದೇ ದೇವರು ಎಂಬ ನಾರಾಯಣಗುರು ತತ್ವ ಸಂದೇಶದಂತೆ ಕೆಲಸ ಮಾಡುತ್ತಿರುವ ಯುವವಾಹಿನಿ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಯುವವಾಹಿನಿ ಬೆಳ್ತಂಗಡಿ ಯ ಸ್ಥಾಪಕ ಅಧ್ಯಕ್ಷ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕರಾದ ರಾಕೇಶ್ ಕುಮಾರ್ ಮೂಡುಕೋಡಿ ಅಭಿಪ್ರಾಯ ಪಟ್ಟರು.
ವೇಣೂರು ನಾರಾಯಣಗುರು ಸ್ವಾಮೀ ಸಂಘದ ಅಧ್ಯಕ್ಷರಾದ ಪೂವಪ್ಪ ಪೂಜಾರಿ,ಯುವವಾಹಿನಿ ತಾಲೂಕು ಸಲಹೆಗಾರರಾದ ಲವಶಾಂತಿ,ಯುವವಾಹಿನಿ ಮೂಡುಕೋಡಿ ಸಂಚಲನಾ ಸಮಿತಿಯ ಅಧ್ಯಕ್ಷರಾದ ಸತೀಶ್ ಕಾಂತಿಬೆಟ್ಟು,ಕಾರ್ಯದರ್ಶಿ ಹರೀಶ್,ಕೋಶಾಧಿಕಾರಿ ಕೃಷ್ಣಪ್ಪ ಪೂಜಾರಿ,ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುನಂದಾ ಸ್ವಾಗತಿಸಿದರು. ಯುವವಾಹಿನಿ ಬೆಳ್ತಂಗಡಿ ಘಟಕದ ನಿರ್ದೇಶಕರಾದ ಸತೀಶ್ ಪೂಜಾರಿ ಉಜಿರ್ ದಡ್ಡ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಸುನಿತಾ ವಂದಿಸಿದರು.
Vidyadanamahadana