ಜೂನ್ 2 ರಂದು ಬೆಳ್ತಂಗಡಿ ಸಂತೆಕಟ್ಟೆ ಸಮೀಪದ ತಿಮ್ಮಪ್ಪ ಪೂಜಾರಿಯನ್ನು ಸ್ಥಳೀಯ ನಿವಾಸಿ ಕಾಲೇಜು ವಿದ್ಯಾರ್ಥಿ ಚಂದ್ರಶೇಖರ ಬೀಕರವಾಗಿ ಕೊಲೆಗೈದಿದ್ದಾನೆ.
ಯುವಜನರು ಗಾಂಜ ಸೇರಿದಂತೆ ಮಾದಕ ವ್ಯಸನಗಳಿಗೆ ಬಲಿಯಾಗಿ ಅಡ್ಡ ದಾರಿ ಹಿಡಿಯುತ್ತಿದ್ದಾರೆ. ಕೊಲೆ ಅತ್ಯಾಚಾರದಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಸಣ್ಣ ಪುಟ್ಟ ವಿಚಾರಗಳಿಗೂ ಕೊಲೆ ಮಾಡುತ್ತಿರುವುದು ಅತ್ಯಂತ ಆತಂಕಕಾರಿ.
ಕೊಲೆಯಾದ ತಿಮ್ಮಪ್ಪ ಪೂಜಾರಿಯವರ ಪತ್ನಿ ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕು.ಪತ್ನಿಗೆ ಸರಕಾರಿ ಉದ್ಯೋಗದ ಜತೆಗೆ ಮಕ್ಜಳ ಶಿಕ್ಷಣಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಬೆಳ್ತಂಗಡಿ ಯುವವಾಹಿನಿ ಒತ್ತಾಯಿಸಿದೆ
ಮನವಿ ನೀಡಿದ ನಿಯೋಗದಲ್ಲಿ
ಬೆಳ್ತಂಗಡಿ ಯುವವಾಹಿನಿ ಅಧ್ಯಕ್ಷರಾದ ಸದಾನಂದ ಉಂಗಿಲಬೈಲು, ಕಾರ್ಯದರ್ಶಿ ಪ್ರಶಾಂತ್ ಮಚ್ಚಿನ, ಸ್ಥಾಪಕ ಅಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ, ಸಲಹೆಗಾರರಾದ ರಮಾನಂದ ಸಾಲ್ಯಾನ್,ಜಯರಾಜ್ ನಡಕ್ಕರ,ಗೋಪಾಲಕೃಷ್ಣ ರತ್ನಗಿರಿ, ಕರುಣಾಕರ ಸುವರ್ಣ ಮರೋಡಿ,ಅಶ್ವಥ್ ಕುಮಾರ್, ಯಶೋಧರ ಪೂಜಾರಿ,ರಘುನಾಥ್ ಶಾಂತಿ,ಶುಭಕರ ಪೂಜಾರಿ,ಉಮೇಶ್ ಸುವರ್ಣ, ಗುರುಪ್ರಸಾದ್ ಉಜಿರೆ,ಹರೀಶ್ ಚಂದ್ರಮ, ಕೃಷ್ಣಪ್ಪ ಪೂಜಾರಿ,ವಿಜಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Nondavarige santhvana