ಸಮಯ ಬೆಳಗ್ಗಿನ ಹೊತ್ತು: ಸ್ಥಳ: ಮದರಾಸ್ ನ ಹೋಟೆಲ್ ಪಾಮ್ ಗ್ರೋನ ಸ್ವಾಗತ ಕಚೇರಿ. ವಿಶುಕುಮಾರ್ ಸೋಫಾದ ಮೇಲೆ ಕುಳಿತು ಪೇಪರು ಓದುತ್ತಿದ್ದರು. ಆಗ ತಾನೇ ಮೈಸೂರಿನಿಂದ ಬಂದ ಆಲನಹಳ್ಳಿ ಶ್ರೀಕೃಷ್ಣ ರೂಂ ಬುಕ್ ಮಾಡಲು ರಿಸೆಪ್ಷನ್ ಕೌಂಟರ್ ಕಡೆ ಹೋದರು.
ವಿಶುಕುಮಾರ್ ಪೇಪರ್ ನ ಎಡೆಯಲ್ಲೇ ಶ್ರೀಕೃಷ್ಣನನ್ನು ನೋಡಿದರು. ಮುಖದಲ್ಲಿ ಕುಶಿ ಕಂಡಿತು. ಕೃಷ್ಣ ಅವರು ರಿಜಿಸ್ಟರ್ ಬುಕ್ ನಲ್ಲಿ ಹೆಸರನ್ನು ನಮೂದಿಸಿ – ಕೀ ಹಿಡಿದುಕೊಂಡು ಒಂದು ಸುತ್ತು ಕಣ್ಣಾಡಿಸಿದರು. ವಿಶುಕುಮಾರ್ ಕುಳಿತಿರುವುದು ಅವರಿಗೆ ಕಾಣಿಸಿತು .
ಹಾಯ್ ವಿಶು ..ಇಲ್ಲಿ ನೀವು?
ವಿಶುಕುಮಾರ್ ಎದ್ದು ಶ್ರೀಕೃಷ್ಣ ಅವರನ್ನು ಸ್ವಾಗತಿಸಿದರು .
ಇದ್ದೇ ಇದೆಯಲ್ಲ ..ಸ್ಟುಡಿಯೋ ಕಡೆ ಹೋಗಬೇಕಾಗಿತ್ತು. ಕಾರ್ ಗಾಗಿ ಕಾಯುತ್ತಿದ್ದೆ. ನಿಮ್ಮನ್ನು ನೋಡಿ ಬಹಳ ಸಮಯವಾಯಿತು. ಬನ್ನಿ ಎರಡು ನಿಮಿಷ ಮಾತಾಡೋಣ ಎಂದರು.
ಈಗತಾನೇ ಬಂದೆ. ಸ್ನಾನ ಮಾಡಿ, ಪ್ರೆಶ್ ಆಗಬೇಕು ಎಂದು ಹೇಳುತ್ತಾ ವಿಶುಕುಮಾರ್ ಪಕ್ಕದಲ್ಲಿ ಕುಳಿತರು.
ಮತ್ತೆ ಏನಪ್ಪಾ ..ಸಮಾಚಾರ? ಎಂದು ವಿಶು ಪ್ರಶ್ನಿಸಿದರು.
ಒಂದು ಕಾದಂಬರಿ ಬರೀತಾ ಇದ್ದೀನಿ. ವಸ್ತು ಬಹಳ ಚೆನ್ನಾಗಿದೆ .ಸಿನಿಮಾಕ್ಕೆ ಒಳ್ಳೆ ಕಥೆ. ಈಗಾಗಲೇ ಕೆಲವರು ಕೇಳಿದ್ದಾರೆ ಎಂದು ಕೃಷ್ಣ ಮಾತಿಗೆ ಶುರು ಹಚ್ಚಿದರು.
ಆ ಮಾತು ಎಲ್ಲಿಗೆ ಹೋಯಿತ್ತೆಂದು ಗೊತ್ತಾಗಲ್ಲಿಲ್ಲ. ಸಾಹಿತ್ಯ, ಬಂಡಾಯ, ಕಡೆಗೆ ರಾಜಕಾರಣ ಹೀಗೆ ಬುಡವಿಲ್ಲದೆ ಹರಡಿತು. ಸಮಯ ಸುಮಾರು ಕಾಲು ಗಂಟೆ ದಾಟಿತು. “ ಹೋ ತಡವಾಯಿತು ” ಎಂದು ಶ್ರೀಕೃಷ್ಣ ಎದ್ದು, ವಿಶುಕುಮಾರ್ ಗೆ ವಿಶ್ ಮಾಡಿ ರೂಂ ಕಡೆ ಹೊರಟರು.
ವಿಶುಕುಮಾರ್ ನನ್ನನ್ನು ನೋಡುತ್ತ, ಮುಗುಳು ನಕ್ಕರು.
ಬಾ ರೂಂಗೆ ಹೋಗೋಣ ಎಂದು ನನ್ನನ್ನು ಕರೆದರು .ಎಂದಿನಂತೆ ನಾನು ಅವರನ್ನು ಹಿಂಬಾಲಿಸಿದೆ.
ಕೃಷ್ಣ ಏನು ಹೇಳಿದ- ಪಾಯಿಂಟ್ ಮಾಡಿ ಹೇಳು ಎಂದರು.
ನಾನು ಕಕ್ಕಾಬಿಕ್ಕಿ. ಸ್ವಲ್ಪ ತಡವರಿಸಿದೆ. ” ನೋಡಪ್ಪಾ …ಒಬ್ಬ ಪತ್ರಕರ್ತ ಇಂಥ ಸೂಕ್ಷ್ಮ ವನ್ನೆಲ್ಲಾ ಗಮನಿಸಬೇಕು. ಒಂದು ಒಳ್ಳೆ ಸ್ಟೋರಿ ಮಾಡಬಹುದು . ಅಂಥದೆಲ್ಲ ಮಾತಾಡಿದ್ದಾರೆ ಕೃಷ್ಣ “ ಎಂದು ಹೇಳಿ ಮುಗುಳು ನಕ್ಕರು . ಸುಮಾರು ಒಂದು ವಾರ ಕಳೆದಿರಬಹುದು. ನನ್ನ ಹೆಸರಿಗೆ ಆ ವಾರದ “ ಚಿತ್ರದೀಪ” ಪೋಸ್ಟಿನಲ್ಲಿ ಬಂತು. ಬಿಡಿಸಿ ನೋಡಿದೆ. ” ಆಲನಹಳ್ಳಿ ಶ್ರೀಕೃಷ್ಣ ಚಕ್ರ! ” ಎಂಬ ಶಿರೋನಾಮೆಯಲ್ಲಿ- ಆಲನಹಳ್ಳಿಯ ಫೋಟೊ ಹಾಕಿ , ಬ್ಯಾಕ್ ಗ್ರೌಂಡ್ ಹಿನ್ನಲೆಯಲ್ಲಿ ಸುರುಳಿ ವೃತ್ತಾಕಾರದ ಚಕ್ರ! ಬಿಡಿಸಿದ ಚಿತ್ರ! ಮಾರ್ಮಿಕವಾಗಿ ಬುರುಡೆ ಬಿಡುವಿನ ಸುದ್ದಿಯ ರೀತಿಯಲ್ಲಿ ಆ ಲೇಖನ ಪ್ರಕಟವಾಗಿತ್ತು.
ಅದನ್ನು ಓದಿ ನನಗೆ ನಗು ಬಂತು! ವಿಶುಕುಮಾರ್ ರ ಜ್ಞಾಪಕ ಶಕ್ತಿ, ನೆನಪಿನ ಶಕ್ತಿಗೆ ತಲೆಬಾಗಿಸಿದೆ. ಒಂದು ಸುದ್ದಿಯನ್ನು ಯಾವ ರೀತಿ ಬರೆಯಬಹುದೆಂದು ಪಾಠ ನನಗೆ ಕಲಿಸಿ ಕೊಟ್ಟಂತಾಗಿತ್ತು. ಒಂದು ವಾರ ಕಳೆದಿರಬಹುದು. ಪಾಮ್ ಗ್ರೋ ಹೋಟೆಲ್ ನ ಅದೇ ಸ್ಥಳ. ಸ್ವಾಗತ ಕಚೇರಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ ಮಾತಿಗೆ ಸಿಕ್ಕಿದರು. ಮೊದಲೇ ಪರಿಚಯ- ಮುಗುಳು ನಗು. ಹೀಗೆ ಮಾತಿಗೆ ಮಾತು- ಮಾತಾಡುತ್ತ, ” ಚಿತ್ರದೀಪ” ದಲ್ಲಿ ಪ್ರಕಟವಾದ ಅವರ ಲೇಖನದ ಬಗ್ಗೆ ಮಾತು ಬಂತು.
ಶ್ರೀಕೃಷ್ಣ ಆಲನಹಳ್ಳಿ ಕೆಂಡವಾದರು!
ಅವನಿಗೆ ತಲೆ ಸರಿ ಇದೆಯಾ? ನಾನು ಫ್ರೆಂಡ್ ಶಿಪ್ ” ನಲ್ಲಿ ಹೇಳಿದ್ದು – ಅದನ್ನೆಲ್ಲಾ ಬರೆಯಬೇಕೆ? ಅವನು ಸಿಗಲಿ – ಗ್ರಹಚಾರ ಬಿಡಿಸ್ತೀನಿ” ಎಂದು ಹಾರಾಡಿದರು. ನನಗೆ ಯಾಕೆ ಬೇಕಾಯಿತಪ್ಪ ಈ ಸುದ್ದಿ ಎಂದು ಪೇಚಾಡಿದೆ ನಾನು.
ಆ ನಂತರ ಸುಮಾರು ಒಂದು ಕಳೆದಿರಬಹುದು. ಪಾಮ್ ಗ್ರೋ ಹೋಟೆಲ್ ನಲ್ಲಿ ” ರಂಬಾ ” ಹೆಸರಿನ ಬಾರ್ ಇದೆ .ಅಲ್ಲಿಗೆ ಸಿನಿಮಾ ಜಗತ್ತಿನ, ರಾಜಕೀಯರಂಗದ ದೊಡ್ಡ ದೊಡ್ಡ ವ್ಯಕ್ತಿಗಳು ಬರುತ್ತಾರೆ. ರಾತ್ರಿ ೧-೨ ಗಂಟೆಯ ನಂತರವೇ ಮನೆಗೆ ಹೋಗುವುದು!
ಆ ಬಾರ್ ನಲ್ಲಿ ಒಂದು ರಾತ್ರಿ- ಮಂದ ಬೆಳಕಿನಲ್ಲಿ ಶ್ರೀಕೃಷ್ಣ ಆಲನಹಳ್ಳಿ ಮತ್ತು ವಿಶುಕುಮಾರ್ ಒಂದು ಟೇಬಲ್ ನಲ್ಲಿ ಪರಸ್ಪರ ಎದುರುಗಡೆ ಕುಳಿತು ಗ್ಲಾಸ್ ನೊಡನೆ ಆಟವಾಡುತ್ತಿದ್ದರು!
ಒಂದು ದಿನ ಬೆಳಗ್ಗೆ ನನಗೆ ಇದ್ದಕ್ಕಿದ್ದ ಹಾಗೇ ವಿಶುಕುಮಾರ್ ರಿಂದ ಫೋನು ಬಂತು. ” ನಾನು ಬಂದಿದ್ದೀನಿ. ರೂಂಗೆ ಬಾ- ಇವತ್ತು ಒಂದು ಒಳ್ಳೆ ಸಿನಿಮಾ ನೋಡೋಣ” ಎಂದು. ನಾನು ಇಲ್ಲಾಂತ ಹೇಳುವ ಹಾಗಿಲ್ಲ. ಅವರು ಹೆಚ್ಚಾಗಿ ಇಂಗ್ಲಿಷ್ ಸಿನಿಮಾ ನೋಡುವುದು. ನನಗೆ ಇಂಗ್ಲೀಷ್ ಅಷ್ಟೊಂದು ಅರ್ಥವಾಗುವುದಿಲ್ಲ. ಅವರ ದಾಕ್ಷಿಣಕ್ಕೆ ಒಪ್ಪಿಕೊಂಡೆ. ಮದರಾಸ್ ನ ಮೌಂಟ್ ರೋಡ್ ನಲ್ಲಿ ಸಫೈರ್ ಚಿತ್ರಮಂದಿರವಿದೆ. ಅಲ್ಲಿಗೆ ಹೋದೆವು. ಹೋಟೆಲ್ ಗೂ ಚಿತ್ರಮಂದಿರಕ್ಕೂ ಹತ್ತಿರವಿದೆ. ನಡೆದುಕೊಂಡು ಹೋಗಬಹುದಾದ ದಾರಿ. ನನಗೆ ಇದ್ದಕ್ಕಿದ್ದ ಹಾಗೇ- ಉದಯವಾಣಿ ದೀಪಾವಳಿ ಸಂಚಿಕೆಗೆ ವಿಶುಕುಮಾರ್ ಸಂಪಾದಕನಾಗಿದ್ದದು ನೆನಪಿಗೆ ಬಂತು. ಆ ಹಿನ್ನಲೆಯಲ್ಲಿ ಅವರಿಗೆ ಪ್ರಶ್ನೆ ಹಾಕಿದೆ – ಅದಕ್ಕೆ ಅವರ ಉತ್ತರ: