ಶ್ರೀ ವಿಜಯ ಕುಮಾರ್ ಬಂಗೇರಾ ಮತ್ತು ಪದ್ಮಾವತಿ ದಂಪತಿಗಳ ಸುಪುತ್ರರರಾಗಿರುವ ಶ್ರೀ ಪ್ರಜ್ವಲ್ ವಿ. ಕುಮಾರ್ ಅವರು ನಮ್ಮ ದೇಶಕಂಡ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು.
ನಿಟ್ಟೆಯ ಎನ್.ಎಮ್.ಎ.ಎಮ್.ಐ.ಟಿ ವಿದ್ಯಾ ಸಂಸ್ಥೆಯಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಬಿ.ಇ ಪದವಿಯನ್ನು ಪಡೆದಿರುವ ಶ್ರೀ ಪ್ರಜ್ವಲ್ ವಿ. ಕುಮಾರ್ ಅವರು Pಐಅ ಟಚಿಜಜeಡಿ ಟogiಛಿ ಚಿಟಿಜ iಟಿಜusಣಡಿiಚಿಟ ಚಿuಣomಚಿಣioಟಿ ಛಿeಡಿಣiಜಿiಛಿಚಿಣioಟಿ ಬಗ್ಗೆ ISಂ ಠಿuಟಿe, ಇಲ್ಲಿ ಮತ್ತು ಔಓಉಅ ಒಖPಐ ಇಲ್ಲಿ ಒಂದು ತಿಂಗಳ ಕಾಲ Iಟಿsಣಡಿumeಟಿಣಚಿಣioಟಿ ಚಿಟoಟಿg ತಿiಣh ಆಅS & ಜಿieಟಜ iಟಿsಣಡಿumeಟಿಣs ವಿಭಾಗದಲ್ಲಿ ವಿಶೇಷ ತರಬೇತಿಯನ್ನು ಪಡೆದು ಬಳಿಕ ಇಟಿಣಡಿeಠಿಡಿeಟಿeuಡಿshiಠಿ ಬಗ್ಗೆ SP ರಿಚಿiಟಿ iಟಿsಣiಣuಣe oಜಿ mಚಿಟಿಚಿgemeಟಿಣ ಚಿಟಿಜ ಡಿeseಚಿಡಿಛಿh, ಂಟಿಜheಡಿi-ಒumbಚಿi,ಇಲ್ಲಿ ತರಬೇತಿಯನ್ನು ಪಡೆದಿದ್ದಾರೆ. ಔದ್ಯೋಗಿಕ ರಂಗದಲ್ಲಿ ಅಪರೂಪದ ಅವಕಾಶಗಳು ಇವಾಗಿದ್ದು, ಪ್ರತಿಭಾನ್ವಿತರಾದ ಕೆಲವೇ ಕೆಲವು ಮಂದಿ ಮಾತ್ರ ಇಂತಹ ಅವಕಾಶಗಳಿಗೆ ಭಾಜನಾರುತ್ತಾರೆ ಅಂತಹ ವ್ಯಕ್ತಿಗಳಲ್ಲಿ ಶ್ರೀ ಪ್ರಜ್ವಲ್ ಕುಮಾರ್ ಅವರು ಒಬ್ಬರು. ಅವಕಾಶಗಳು ಕೆಲವೊಮ್ಮೆ ತನ್ನಿಂತಾನೇ ಸೃಷ್ಠಿಯಾಗಿರುತ್ತದೆ ಮತ್ತು ನಮ್ಮನ್ನು ಕೈ ಬೀಸಿ ಕರೆಯುತ್ತಿರುತ್ತದೆ ಅಂತಹ ಸುಸಂದರ್ಭಗಳನ್ನು ಬಳಸಿಕೊಳ್ಳುವ ಜಾಣ್ಮೆ ನಮ್ಮಲ್ಲಿ ಸಕಾಲದಲ್ಲಿ ಮೂಡಿದಾಗ ನಾವು ಯಶಸ್ವಿ ವ್ಯಕ್ತಿಗಳ ಸಾಲಿನಲ್ಲಿ ಮೂಡಿ ಬರಲು ಸಾಧ್ಯ ಎನ್ನುವ ಮಾತಿಗೆ ಪ್ರಜ್ವಲ್ ಅವರು ಒಂದು ಅತ್ಯುತ್ತಮ ನಿದರ್ಶನ, ಕಲಿಕೆಯ ಬಳಿಕ ಒಂದಷ್ಟು ತರಬೇತಿ, ಒಂದಷ್ಟು ಪ್ರಾಯೋಗಿಕ ಪ್ರಯತ್ನಗಳು ಇದರ ನಡುವೆ ಕಂಪೆನಿಗಳಲ್ಲಿನ ಕೆಲಸ ಈ ಎಲ್ಲಾ ಅನುಭವ ಧಾರೆಗಳನ್ನು ತನ್ನದೇ ಆದ ಎರಕದಲ್ಲಿ ಹೊಯ್ದು ಪ್ರಜ್ವಲ್ ರೂಪಿಸಿರುವ ಕಂಪನಿ ಒ/s ಒಚಿಟಿgಚಿಟoಡಿe ಖoboಣಡಿoಟಿiಛಿs ಖಿeಛಿhಟಿoಟogies. ನಂತರ ಇದು ಒಚಿಟಿgಚಿಟoಡಿe ಖobಚಿuಣoಟಿiಛಿs Pvಣ ಐಣಜ ಎಂಬುದಾಗಿ ಬದಲಾಗಿದ್ದು ಮಂಗಳೂರಿನ ಕೂಳೂರಿನಲ್ಲಿ ತಯಾರಿಕ ಘಟಕ ಸ್ಥಾಪನೆಗೊಂಡಿದ್ದು ಇಂದು ಯಶಸ್ವಿ ಉದ್ದಿಮೆ ಯಾಗಿ ಬೆಳೆದಿದೆ. ಸಾಕಷ್ಟು ಜನರಿಗೆ ಉದ್ಯೋಗವಾಕಾಶವನ್ನು ನೀಡಿ ಹೊಸ ಹೊಸ ಆವಿಷ್ಕಾರಗಳ ಮೂಲಕ ಆಧುನಿಕತೆಗೆ ಹೊಸ ಕೊಡುಗೆ ನೀಡುವ ಪ್ರಯತ್ನಗಳು ಪ್ರಜ್ವಲ್ ಅವರ ಮೂಲಕ ಆಗುತ್ತಿದೆ ಎನ್ನುವುದೇ ಸಂತೋಷಕರ ವಿಚಾರ. ರಕ್ಷಣಾ ಇಲಾಖೆಗಾಗಿ ಚಾಲಕ ರಹಿತ ವಾಹನ, ದೂರನಿಯಂತ್ರಿತ ಪವರ್ ಟಿಲ್ಲರ್, ಅಡಿಕೆ ಮರ, ತಾಳೆ ಮರ, ತೆಂಗಿನ ಮರ ಹತ್ತಿ ಪಸಲು ಕೊಯ್ಯುವ ಯಂತ್ರ, ದೂರನಿಯಂತ್ರಿತ ನೀರಾವರಿ ಪಂಪ್‍ಸೆಟ್, ಭತ್ತದ ಗದ್ದೆಯ ಕಳೆನಿವಾರಣಾ ಯಂತ್ರ ಮತ್ತು ಪೆಸ್ಟೋ ಕ್ರಾಫ್ಟ್ ಮೊದಲಾದುವು ಇವರ ಕ್ರಿಯಾಶೀಲತೆಯ ದ್ಯೋತಕಗಳು. ಎಂ.ಬಿ.ಎ ಪದವೀಧರೆಯಾಗಿರುವ ಪತ್ನಿ ಛಾಯಾ ಅವರ ಸಹಕಾರವೂ ಪ್ರಜ್ವಲ್ ಯಶಸ್ಸಿನ ಹಿಂದೆ ಇದೆ ಎನ್ನುವುದು ಸತ್ಯ. ಎರಡು ಕೈಯ ಚಪ್ಪಾಳೆ, ಇಂಪು ಮತ್ತು ಸೊಗಸು ಎನ್ನುವ ಹಾಗೇ ಪತಿ ಪತ್ನಿಯ ನಡುವಿನ ಹೊಂದಾಣಿಕೆ, ಜಾಣ್ಮೆ ಮತ್ತು ಪ್ರಯತ್ನ ಗಳು ಇಂದು ಯಶಸ್ವಿ ಉದ್ಯಮಕ್ಕೆ ನಾಂದಿ ಹಾಡಿದೆ. ಸಮು ದಾಯಕ್ಕೆ ಕೀರ್ತಿಯನ್ನು ತಂದಂತಹ ಕಾರ್ಯ ನಿರ್ವಹಿಸಿದ ಶ್ರೀ ಪ್ರಜ್ವಲ್ ಕುಮಾರ್ ಅವರನ್ನು ಯುವವಾಹಿನಿಯು ತನ್ನ 27ನೇ ವಾರ್ಷಿಕ ಸಮಾವೇಶದಂದು ಯುವ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲು ಸಂತೋಷ ಪಡುತ್ತಿದೆ.