ಸೀಳು ತುಟಿ ಸಮಸ್ಯೆಯವರ ಆಶಾಕಿರಣ
ಡಾ. ಅಶಿತ್ ಎಂ.ವಿ.
ಉಪ್ಪಿನಂಗಡಿಯ ರಾಜ್‍ಮಹಲ್ ಎಂ. ವರದ ರಾಜ್ ಮತ್ತು ವಿಮಲಾ ವರದರಾಜ್ ಇವರ ಪುತ್ರರಾಗಿರುವ ಡಾ. ಅಶಿತ್ ಎಂ.ವಿ. ಇವರು ಶಿಕ್ಷಣ ರಂಗದ ಅದ್ವಿತೀಯ ಸಾಧಕ, ತನ್ನ ಪ್ರಾಥಮಿಕ ಹಂತದ ಶಿಕ್ಷಣದ ಸಮಯದಲ್ಲೇ ಸಾಧನೆಯನ್ನು ತೋರಿರುವ ಶ್ರೀಯುತರು ಪ್ರಸ್ತುತ ದಂತ ವೈದ್ಯಕೀಯ ವಿಭಾಗದಲ್ಲಿ ಎಂಡಿಎಸ್ ಪದವಿಯನ್ನು ಪಡೆದಿದ್ದಾರೆ, ವೈದ್ಯಕೀಯ ರಂಗದಲ್ಲಿ ಹೊಸತನಗಳ ಪ್ರಯೋಗಕ್ಕೆ ಸದಾ ತುಡಿಯುತ್ತಾ ಈ ಮೂಲಕದ ಪ್ರಯತ್ನವನ್ನೂ ನಡೆಸುತ್ತಿರುವ ಅಶಿತ್ ಅವರು ಸೀಳು ತುಟಿ ಸಮಸ್ಯೆಯಿಂದ ಬಲಳುತ್ತಿರುವವರ ಆಶಾಕಿರಣ ಎಂದರೂ ತಪ್ಪಾಗಲಾರದು. . International Claft Federation ನವರು ನಡೆಸುವ ಸೀಳು ತುಟಿಯ ಬಗ್ಗೆ ವೈದ್ಯ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಜಗತ್ತಿನ 40 ಮಂದಿಯಲ್ಲಿ ಇವರು ಒಬ್ಬರು. ಇದು ಇದೇ ಸಪ್ಟೆಂಬರ್ ತಿಂಗಳಲ್ಲಿ ಮಂಗೊಲಿಯದಲ್ಲಿ ನಡೆಯಲಿದೆ. ಮಾತ್ರವಲ್ಲದೆ ಕ್ಲೆಫ್ಟ್ ಮತ್ತು ಕ್ರೇನಿಯೋ ಫೇಸಿಯಲ್ ಆರ್ಥೋಡೊಂಟಿಕ್ಸ್ ಅಂಡರ್ ಸ್ಮೈಲ್ ಟ್ರೈನ್ ಐಎನ್‍ಸಿ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿರುವ ದೇಶದ ಕೇವಲ ಆರು ಭಾರತೀಯರಲ್ಲಿ ಒಬ್ಬರಾಗಿರುವ ಡಾ. ಅಶಿತ್ ಎಂ.ವಿ. ಅವರು ನಮ್ಮವರು ಎನ್ನುವುದೇ ಸಂತೋಷದ ವಿಚಾರ. ಇವರ ಹಲವಾರು ಸಂಶೋಧನೆಗಳು ವೈದ್ಯಕೀಯ ರಂಗದಲ್ಲಿ ಯಶಸ್ಸನ್ನು ಸಾಧಿಸಿದೆ ಎನ್ನುವುದು ವಿಶೇಷ.ಪ್ರಸ್ತುತ ಮಂಗಳೂರಿನ ಯೆನೋಪೊಯ ಮಹಾವಿದ್ಯಾಲಯದ ಆರ್ಥೋ ಡೊಂಟಿಕ್ಸ್ ಮತ್ತು ಡೆಂಟೋ ಫೇಸಿಯಲ್ ಆರ್ಥೋ ಪೆಡಿಕ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ದುಡಿಯುತ್ತಿದ್ದಾರೆ. ಕ್ರಾನಿಯೋ ಫೇಸಿಯಲ್ ಎನಾಮಲೀಸ್‍ನ ಆರ್ಥೋ ಡೊಂಟಿಸ್ಟ್‍ನ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿರುವರಲ್ಲದೆ ಕರ್ನಾಟಕ, ಕೇರಳ ಮತ್ತು ಗೋವಾ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಆರ್ಥೋಡೊಂಟಿಕ್ಸ್ ಸಲಹೆಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಜಿಲ್ಲೆಯ ಹಲವಾರು ಕಡೆ ಉಚಿತ ದಂತ ವೈದ್ಯಕೀಯ ಶಿಬಿರವನ್ನು ನಡೆಸಿ ಬಡವರಿಗೆ ಉಚಿತ ಸೇವೆ ನೀಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಇವರ ಪತ್ನಿ ಡಾ. ಸ್ವೇತ, ದಂತ ವೈದ್ಯೆ ಹಾಗೂ ಓರ್ವ ಮಗ ಅನ್‍ಸೂಲ್. ಇವರ ಶೈಕ್ಷಣಿಕ ಮತ್ತು ಸಂಶೋಧನಾ ಸಾಧನೆಯನ್ನು ಗುರುತಿಸಿದ ಯುವ ವಾಹಿನಿಯು ತನ್ನ 27ನೇ ವಾರ್ಷಿಕ ಸಮಾವೇಶದಲ್ಲಿ 2014ನೇ ಸಾಲಿನ ಯುವವಾಹಿನಿ ಯುವ ಸಾಧನ ಪ್ರಶಸ್ತಿಯನ್ನು ನೀಡಿ ಗೌರವಿಸಲು ಸಂತೋಷ ಪಡುತ್ತಿದೆ.
Good job dear Ashith sir we’ll done……
Thank u