Yuvavahini

JUL 10, 2014 11.12 AM IST

ಯುವವಾಹಿನಿ(ರಿ) ಕೇಂದ್ರ ಸಮಿತಿ,ಮಂಗಳೂರು

ಶ್ರೀಮತಿ ಎಂ. ಜಾನಕಿ ಬ್ರಹ್ಮಾವರ ಇವರಿಗೆ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ -2014

ಶ್ರೀಮತಿ ಎಂ. ಜಾನಕಿ ಬ್ರಹ್ಮಾವರ
ಕನ್ನಡ ಮತ್ತು ತುಳು ಭಾಷೆಯಲ್ಲಿ ತಮ್ಮ ಚಾತುರ್ಯವನ್ನು ಮೆರೆಸಿದ ಮೇರು ಸಾಹಿತಿಗಳಲ್ಲಿ ಶ್ರೀಮತಿ ಜಾನಕಿ ಬ್ರಹ್ಮಾವರ ಅವರೂ ಒಬ್ಬರು. ಭಾಷೆ, ಬರಹ ಮತ್ತು ಕಥಾ ಅಭಿವಕ್ತಿಯಲ್ಲಿ ಆಳಕ್ಕೆ ಇಳಿದು ಓದುಗನ ಮನಸ್ಸನ್ನು ಮುಟ್ಟುವಂತೆ, ತಟ್ಟುವಂತೆ ಮಾಡಿ ತನ್ನ ಬರಹದ ಮೂಲಕವೇ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿರುವ ಶ್ರೀಮತಿ ಎಂ. ಜಾನಕಿ ಬ್ರಹ್ಮಾವರ ಅವರು ಈ ನಾಡುಕಂಡ ಅಪೂರ್ವ ಸಾಹಿತಿಗಳಲ್ಲಿ ಅಗ್ರ ಪಂಕ್ತಿಯಲ್ಲಿ ಬರುವವರು.
ಎಂ.ಎ., ಬಿ.ಎಡ್. ಪದವೀಧರರಾಗಿದ್ದು ಬ್ರಹ್ಮಾವರದ ಎಸ್.ಎಮ್.ಎಸ್. ಪದವಿಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾ ಪಕರಾಗಿದ್ದು ಇದೀಗ ನಿವೃತ್ತರಾಗಿರುವ ಜಾನಕಿಯವರು ಕನ್ನಡ ಮತ್ತು ತುಳು ಭಾಷೆಗಳಲ್ಲೆರಡರಲ್ಲೂ ಕೃಷಿ ಮಾಡಿದ್ದು ಕಂಬಳ, ತಿರುಗಾಟದ ತಿರುಳು, ಯುಗಾಂತರದಲ್ಲಿ, ಪ್ರಾರ್ಥನಾ ಗೀತೆಗಳು, ಸಮಾಜಮುಖಿ, ಸಂಶೋಧಕಿ ಡಾ| ಸುಶೀಲ ಉಪಾಧ್ಯಾಯ, ಸಮಾಜಮುಖಿ ಸಾಧಕಿ ಸರಳಾ ಬಿ.ಕಾಂಚನ್, ಹೀಗೆ ಕನ್ನಡದಲ್ಲಿ ಹತ್ತಾರು ಸಾಹಿತ್ಯ ಪ್ರಕಾರಗಳನ್ನು ರಚಿಸಿರುವರು. ಅಲ್ಲದೆ ಅವರು ಆಕಾಶವಾಣಿಗಾಗಿ, ಎರಡು ರೂಪಕವನ್ನು ರಚಿಸಿದ್ದಾರೆ. ‘ಕನ್ನಡದ ಓಜ ಪಂಜೆ ಮಂಗೇಶರಾಯರು’ ಮತ್ತು ‘ಬಾರೆಲೆ ಹಕ್ಕಿ ಬಣ್ಣದ ಹಕ್ಕಿ’ ಈ ಎರಡು ರೂಪಕ ಆಕಾಶವಾಣಿಯಲ್ಲಿ ಪ್ರಸಾರಗೊಂಡಿದೆ.ಕುದುರುದ ಕೇದಗೆ, ಕಪ್ಪುಗಿಡಿ, ಯುಗಮಗ್‍ರ್ನಗ, ರುಕ್ಕು ಇದು ಬ್ರಹ್ಮಾವರ ಅವರ ತುಳು ಕೃತಿಗಳು, ತಿರ್ಗಾಟದ ತಿರ್ಲ್ ಇವರ ತುಳು ವಿನ ಮೊದಲ ಪ್ರವಾಸ ಕಥನವಾಗಿದೆ. ಇವರ ಕುದು ರುದ ಕೇದಗೆ ಕೃತಿ ಇಂಗ್ಲೀಷ್‍ಗೂ ಭಾಷಾಂತರಗೊಂಡಿದೆ.
ಕೋರ್ಟ್ ಮಾರ್ಷಲ್, ಏಕಲವ್ಯ, ರಕ್ತಾಕ್ಷಿ, ಮಾಯಾಮೃಗ ಮೊದಲಾದ ನಾಟಕ ಕೃತಿಗಳನ್ನು ಇವರು ತುಳುವಿಗೆ ಭಾಷಾಂತರಗೊಳಿಸಿದ್ದಾರೆ. ಅದಲ್ಲದೆ ‘ಅಮರ್ ಬೈದೆರ್ಲ್’, ‘ತುಳುನಾಡ್‍ದ ಬೊಳ್ಳಿಲು’ ‘ಶ್ಮಶಾನ ಕುರುಕ್ಷೇತ್ರ’, ‘ಶೂದ್ರ ತಪಸ್ವಿ’ ಎನ್ನುವ ನಾಟಕಗಳನ್ನೂ ಇವರು ರಚಿಸಿದ್ದಾರೆ.


ಶ್ರೀಮತಿ ಜಾನಕಿ ಬ್ರಹ್ಮಾವರ ಇವರು ಪಣಿಯಾಡಿ ತುಳು ಕಾದಂಬರಿ 2 ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ, ಅವಿಭಜಿತ ದಕ್ಷಿಣ ಕನ್ನಡ ಮಕ್ಕಳ ಸಾಹಿತ್ಯ ಸಂಗಮ ಪುರಸ್ಕಾರ ಪಡೆದವರು. ಇಷ್ಟು ಮಾತ್ರ ಅಲ್ಲದೆ ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಮಂಗಳೂರಿನ ಸಂದೇಶ ಸಾಹಿತ್ಯ ಪ್ರತಿಷ್ಠಾನವು ಇವರಿಗೆ ‘ಸಂದೇಶ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ. ಕರ್ನಾಟಕ ಸರಕಾರ ಕೊಡಮಾಡುವ ‘ರಾಣಿ ಅಬ್ಬಕ್ಕ’ ಸಾಹಿತ್ಯ ಪ್ರಶಸ್ತಿ, ‘ರಾಣಿ ಚೆನ್ನಮ್ಮ’ ಸಾಹಿತ್ಯ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ. ‘ದೇಶ ಸುತ್ತು, ಕೋಶ ಓದು’ ಎಂಬಂತೆ ತಿರುಗಾಟದ ಹವ್ಯಾಸವನ್ನು ಹೊಂದಿದ ಇವರು 15 ದೇಶಗಳನ್ನು ಈಗಾಗಲೇ ಸುತ್ತಿ ಅದರ ಅನುಭವಗಳನ್ನು ತಿರ್ಗಾಟದ ತಿರ್ಲ್, ತಿರ್ಗಾಟದ ಮರ್ಲ್, ತಿರ್ಗಾಟದ ಪೊರ್ಲು, ತಿರುಗಾಟದ ಸೊಗಸು ಮುಂತಾದ ಕೃತಿಗಳಲ್ಲಿ ದಾಖಲಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರ ಸಾಧನೆಯನ್ನು ಗುರುತಿಸಿರುವ ಕರ್ನಾಟಕ ಸರಕಾರ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನವನ್ನೂ ನೀಡಿ ಗೌರವಿಸಿದೆ. ಅಧಿಕಾರವನ್ನು ಎಂದಿಗೂ ಬಯಸದೆ ಅಧಿಕಾರದ ಹಿಂದೆ ಬೀಳದೆ, ಸಾಹಿತ್ಯ ಅಕಾಡೆಮಿಯ ಪ್ರಸ್ತುತ ಅಧ್ಯಕ್ಷರಾಗಿರುವ ಅವರು ಅಧ್ಯಕ್ಷರಾದ ಅಲ್ಪ ಅವಧಿಯಲ್ಲೇ ತುಳು ಸಾಹಿತ್ಯಕ್ಕೆ ಸಂಬಂಧಿಸಿ ಹತ್ತಾರು ಉತ್ತಮ ಕೆಲಸ ಮಾಡಿದ್ದಾರೆ.
ಇನ್ನಷ್ಟು ಸಾಹಿತ್ಯ ಸೇವೆ ನಡೆಸಬೇಕು ಎನ್ನುವ ತುಡಿತದಲ್ಲಿರುವ ಜಾನಕಿ ಬ್ರಹ್ಮಾವರ ಅವರು ಈಗಾಗಲೇ ಮತ್ತೊಂದಷ್ಟು ಸಾಹಿತ್ಯ ಕೃತಿಗಳನ್ನು ಕೈಗೆತ್ತಿ ಕೊಂಡಿದ್ದಾರೆ. ಇವರ ಸಾಹಿತ್ಯ ಸೇವೆ ಹೀಗೆ ನಿರಂತರವಾಗಿರಲಿ ಎನ್ನುವ ಆಶಯದೊಂದಿಗೆ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸನ್ಮಾನಿಸಲು ಯುವವಾಹಿನಿಯು ಸಂತೋಷ ಪಡುತ್ತಿದೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!