ಬಂಟ್ವಾಳ ತಾಲೂಕು ಕಳ್ಳಿಗೆÀ ಗ್ರಾಮದ ಮುಂಡಾಜೆ ನಿವಾಸಿಯಾಗಿರುವ ಚೇತನ್ ಮುಂಡಾಜೆ ಇವರು ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಉದಯೋನ್ಮಖ ಸಾಹಿತಿಯೂ ಹೌದು, ಕಲಿಕೆ, ಅಧ್ಯಯನ, ಭಾಗವಹಿಸುವಿಕೆ ಇವು ಇವರ ಆಸಕ್ತಿಯ ಕ್ಷೇತ್ರವೂ ಹೌದು. 2009ರಲ್ಲಿ ‘ಪಿಂಗಾರ’ ಎಂಬ ಕವನ ಸಂಕಲನವನ್ನು ಪ್ರಕಟಿಸಿರುವ ಶ್ರೀಯುತರು 2008-09ರಲ್ಲಿ ‘ಮಂಗಳಗಂಗೆ’ ಎಂಬ ಸಂಪಾದಿತ ಕೃತಿಯನ್ನು ಅನಾವರಣಗೊಳಿಸಿದ್ದಾರೆ. ಆಧುನಿಕ ಕನ್ನಡ ಕಾವ್ಯದಲ್ಲಿ ಬೆಂದ್ರೆಯವರ ಅನನ್ಯತೆ, ಮಂಗಳೂರ ಕ್ರಾಂತಿ ಕೆಲವು ಟಿಪ್ಪಣಿಗಳು, ಬೂತಾರಾಧನೆಯಲ್ಲಿ ನುಡಿಗಟ್ಟು, ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಸೀರೆಯಂಗಡಿಯಲ್ಲಿ ಮಾದರಿಗೆ ಪ್ರತಿಮೆ ಕವನ ವಿಶ್ಲೇಷಣೆ, ಮುಂತಾದ ಸಂಶೋಧನಾ ಲೇಖನ ಪ್ರಕಟಿಸಿದ್ದಾರೆ. ತುಳುನಾಡಿನ ಶಾಸನಗಳು, ಇತಿಹಾಸದ ನಿರ್ವಚನ, ದೇಸಿ ಅಸ್ತಿತ್ವದ ಸ್ವರೂಪ, ಕೋಮುವಾದ ಮತ್ತು ಭಯೋತ್ಪಾದನೆ ಮುಂತಾದ ಪ್ರಬಂಧಗಳನ್ನೂ ಮಂಡನೆ ಮಾಡಿದ್ದಾರೆ.
ಕಥೆ, ಕವನ, ಭಾಷಣ ಮತ್ತು ಪ್ರಬಂಧಕ್ಕೆ ಸಂಬಂಧಿಸಿ ಇಪ್ಪತ್ತೈದಕ್ಕೂ ಅಧಿಕ ಬಹುಮಾನ ಪಡೆದಿರುವ ಚೇತನ್ ತನ್ನ ಶಾಲಾ ದಿನದಲ್ಲೇ ಸಾಹಿತ್ಯದತ್ತ ಒಲವು ತೋರಿದವರು. ಜಿಲ್ಲೆಯ ಮಾತ್ರವಲ್ಲದೆ ರಾಜ್ಯ ದ ಬೇರೆ ಬೇರೆ ಭಾಗದಲ್ಲಿ ನಡೆದಿರುವ ಕವಿಗೋಷ್ಠಿಯಲ್ಲಿ ಭಾಗವಹಿಸಿ ಹೆಸರು ಪಡೆದಿರುವ ಶ್ರೀಯುತರು ಪ್ರಸ್ತುತ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಶಿಕ್ಷಕ ಮತ್ತು ಸಾಹಿತ್ಯದ ನೆಲೆಯಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣ ಮತ್ತು ಸಮ್ಮೇಳನದಲ್ಲೂ ಭಾಗವಹಿಸಿದ ಕೀರ್ತಿ ಚೇತನ್ ಅವರದ್ದು. ನಾಟಕ ರಂಗದಲ್ಲೂ ಆಸಕ್ತಿಯನ್ನು ಹೊಂದಿರುವ ಚೇತನ್ ನಾಟಕ ಕಮ್ಮಟಗಳಲ್ಲೂ ಭಾಗವಹಿಸಿದ್ದಾರೆ. ಮಾತ್ರವಲ್ಲದೆ ಮಂಗಳೂರು ಆಕಾಶವಾಣಿಯಲ್ಲೂ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ್ದಾರೆ. ಇವರ ಈ ಸಾಹಿತ್ಯ ಪ್ರತಿಭೆಯನ್ನು ಗುರುತಿಸಿ ಯುವವಾಹಿನಿಯು ‘ಪ್ರಭಾಕರ ನೀರುಮಾರ್ಗ ಯುವವಾಹಿನಿ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲು ಸಂತೋಷ ಪಡುತ್ತಿದೆ.
- ಅಧ್ಯಕ್ಷತೆ :
ಡಾ| ಸತ್ಯನಾರಾಯಣ ಮಲ್ಲಿಪಟ್ಣ
ಪ್ರಾಂಶುಪಾಲರು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು
ಪ್ರಶಸ್ತಿ ಪ್ರದಾನ :
ಶ್ರೀ ಮಲಾರ್ ಜಯರಾಮ್ ರೈ
ಪತ್ರಕರ್ತರು ಹಾಗೂ ಸಾಹಿತಿ
ಮುಖ್ಯ ಅತಿಥಿಗಳು :
ಶ್ರೀಮತಿ ಜಾನಕಿ ಬ್ರಹ್ಮಾವರ
ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
ಶ್ರೀ ಬಿ.ಎ. ಮೊಹಮ್ಮದ್ ಹನೀಫ್
ಮಾಜಿ ಅಧ್ಯಕ್ಷರು, ಬ್ಯಾರಿ ಸಾಹಿತ್ಯ ಅಕಾಡೆಮಿ
`ವಿಶುಕುಮಾರ್ ಪ್ರಶಸ್ತಿ’ ಪುರಸ್ಕøತರು :
ಶ್ರೀ ಮುದ್ದು ಮೂಡುಬೆಳ್ಳೆ
ಬಹುಭಾಷಾ ಸಾಹಿತಿ, ಸಂಶೋಧಕರು
ಯುವವಾಹಿನಿ ಯುವ ಸಾಹಿತ್ಯಪ್ರಶಸ್ತಿ – ಪುರಸ್ಕ್ರತರು
ಶ್ರೀ ಚೇತನ್ ಮುಂಡಾಜೆ
ಸಾಹಿತ್ಯ ಪ್ರತಿಭೆ