ಘಟಕದ ವತಿಯಿಂದ ತಾ. 16-7-2016 ರಂದು ಕೋಡಿಕಲ್ ದ.ಕ. ಜಿಲ್ಲಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಆಚರಣೆ, ಸಸಿ ವಿತರಣೆ ಹಾಗೂ ಶಾಲೆಯ 30 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಜರಗಿರುತ್ತದೆ.
ಕಾರ್ಯಕ್ರಮವನ್ನು ಕೋಡಿಕಲ್ ಬಿಲ್ಲವ ಸಂಘ ಇದರ ಅಧ್ಯಕ್ಷೆ ಶ್ರೀಮತಿ ಲೋಲಾಕ್ಷಿ ದೇವೇಂದ್ರ ಕೋಟ್ಯಾನ್‌ರವರು ಉದ್ಘಾಟಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಯ ಜಯಪ್ಪ ಅದ್ಯಪಾಡಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವೀಣಾ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿದ್ಯಾ ರಾಕೇಶ್, ಘಟಕದ ಸಲಹೆಗಾರರ ಸಾಧು ಪೂಜಾರಿ ಹಾಗೂ ರೋಶನಿ ನಿಲಯದ ಶ್ರೀಮತಿ ವಿನುತ ರೈ ಮೊದಲಾದವರು ಉಪಸ್ಥಿತರಿದ್ದರು.
ಶಾಲೆಯಲ್ಲಿ ಒಟ್ಟು 175 ವಿದ್ಯಾರ್ಥಿಗಳಿದ್ದು ಅವರೆಲ್ಲರಿಗೂ ಸಸಿಗಳನ್ನು ನೀಡಲಾಯಿತು. ಹಾಗೂ 30 ಬಡ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ನೀಡಲಾಯಿತು. ಶ್ರೀಮತಿ ವಿದ್ಯಾರಾಕೇಶ್ ಸ್ವಾಗತಿಸಿದರು, ಪ್ರಮಿಳಾ ಧನ್ಯವಾದ ನೀಡಿದರು. ಸಂಚಾಲಕಿ ರಶ್ಮಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.
ದೇರಳಕಟ್ಟೆ ಸೇವಾಶ್ರಮಕ್ಕೆ ಭೇಟಿ
ತಾ. 18-7-2016 ರಂದು ಮಂಗಳೂರು ಮಹಿಳಾ ಘಟಕದ ಹೆಚ್ಚಿನ ಸದಸ್ಯರೆಲ್ಲರೂ ಸೇರಿ ಘಟಕದ ಸದಸ್ಯೆ ಕುಶಾಲ ಯಶವಂತ್ರವರ ಅತ್ತೆಯ 29 ನೇ ವರ್ಷಾಚರಣೆಯನ್ನು ದೇರಳಕಟ್ಟೆ ಸೇವಾಶ್ರಮದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಆಶ್ರಮಕ್ಕೆ ದಿನಬಳಕೆಯ ವಸ್ತುಗಳನ್ನು ನೀಡುವುದರೊಂದಿಗೆ ಆಶ್ರಮದಲ್ಲಿ ನೆಲೆಸಿರುವ ವೃದ್ದರಿಗೆ ಊಟೋಪಚಾರದ ವ್ಯವಸ್ಥೆಯನ್ನೂ ಕುಶಾಲ ಯಶವಂತರವರ ಸಹಕಾರದೊಂದಿಗೆ ನೆರವೇರಿಸಲಾಯಿತು.
ಫ್ಯಾನ್ಸಿ ಆಭರಣದ ತಯಾರಿ ತರಬೇತಿ
ತಾ. 2-7-2016 ರಂದು ಕೇಂದ್ರ ಸಮಿತಿಯ ಕಚೇರಿಯಲ್ಲಿ ಮಂಗಳೂರು ಮಹಿಳಾ ಘಟಕದ ವತಿಯಿಂದ ಫ್ಯಾನ್ಸಿ ಆಭರಣ ಹಾಗೂ ಪೇಪರ್ ಜ್ಯುವೆಲ್ಲರಿ ತಯಾರಿಯ ತರಬೇತಿ ಕಾರ್ಯಾಗಾರ ಜರಗಿತು. ಈ ಕಾರ್ಯಕ್ರಮದಲ್ಲಿ ಶ್ರೀಮತಿ ವೃಂದಾ ರಾವ್ ಮತ್ತು ಅಧ್ಯಕ್ಷೆ ವಿದ್ಯಾ ರಾಕೇಶ್ ತರಬೇತಿಯನ್ನು ನೀಡಿದರು. ಸುಮಾರು 38 ಮಹಿಳೆಯರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.
super programme