ಮಂಗಳೂರು, ಆಗಸ್ಟ್ 17: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುತ್ತಿರುವ ಸಾಪ್ತಾಹಿಕ ಭಜನಾ ಸಂಕೀರ್ತನ ಸರಣಿಯ ಅಂಗವಾಗಿ ಭಜನಾ ಸೇವೆಯು ಸೋಮವಾರ ಸಂಜೆ ಕ್ಷೇತ್ರದಲ್ಲಿ ಭಕ್ತಿ ಭಾವದಿಂದ ನಡೆಯಿತು.

ಈ ವಾರದ ಭಜನಾ ಸೇವೆಯನ್ನು ವೇದಾವತಿ ಮತ್ತು ಬಳಗ, ಅಳಪೆ–ಮಂಗಳೂರು ಇವರ ಸಹಯೋಗದಲ್ಲಿ ನೆರವೇರಿಸಲಾಯಿತು. ಹರಿನಾಮ ಸ್ಮರಣೆಯೊಂದಿಗೆ ಭಕ್ತಿ ಭಾವಪೂರ್ಣವಾಗಿ ಭಜನೆ ನಡೆಸಿ, ಶ್ರೀ ಗೋಕರ್ಣನಾಥ ಹಾಗೂ ಶ್ರೀ ನಾರಾಯಣಗುರುಗಳ ಚರಣಕ್ಕೆ ಭಜನಾ ಸೇವೆಯನ್ನು ಸಮರ್ಪಿಸಲಾಯಿತು.
ಸಂಜೆ 7 ಗಂಟೆಗೆ ಕ್ಷೇತ್ರದಲ್ಲಿರುವ ಶ್ರೀ ನಾರಾಯಣಗುರುಗಳ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ಬಳಿಕ ಭಜನಾ ತಂಡದ ಸದಸ್ಯರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ, ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ನಿರ್ದೇಶಕ ಗೋಪಾಲ ಪೂಜಾರಿ, ನಾರಾಯಣ ಗುರು ತತ್ವಾದರ್ಶಗಳ ಮಾಜಿ ನಿರ್ದೇಶಕ ಪೂವಪ್ಪ ಕುಕ್ಯಾನ್ ಹಾಗೂ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.


