ಮಂಗಳೂರು: ದಿನಾಂಕ: 22-06-2026 ರಂದು ಸೋಮವಾರ ಸಂಜೆ 5.30 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ಶ್ರೀ ಗೋಪಾಲಕೃಷ್ಣ ಮಹಿಳಾ ಭಜನಾ ತಂಡ ಕದ್ರಿ ಕಂಬಳ ಇವರ ಸಹಯೋಗದೊಂದಿಗೆ ನಡೆಯಿತು. ಭಕ್ತಿ ಭಾವದಿಂದ ತುಂಬಿದ ಭಜನೆಯನ್ನು ಗೋಕರ್ಣನಾಥ ಹಾಗೂ ನಾರಾಯಣ ಗುರುಗಳಿಗೆ ಸಮರ್ಪಿಸಿದರು.

ಸಂಜೆ 7 ಗಂಟೆಗೆ ಸರಿಯಾಗಿ ಕ್ಷೇತ್ರದ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿ, ಭಜನಾ ತಂಡದ ಸದಸ್ಯರಿಗೆ ಗೌರವ ಸಲ್ಲಿಸಲಾಯಿತು ಘಟಕದ ಅಧ್ಯಕ್ಷರು ಹರೀಶ್ ಕೆ. ಸುವರ್ಣ, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.


