ಯುವಸಿಂಚನ - ಏಪ್ರಿಲ್ 2017

ವಿಶುಕುಮಾರ್… ಹೀಗೊಂದು ನೆನಪು

ಮದರಾಸಿನ ’ಚಂದಮಾಮ’ ಪಬ್ಲಿಕೇಶನ್‌ರವರು ಕನ್ನಡದಲ್ಲಿ ’ವಿಜಯಚಿತ್ರ’ ಸಿನೀಮ ಮಾಸಿಕ ಮತ್ತು ವನಿತಾ ಮಹಿಳಾ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದರು. ರವಿರಾಜ ಅಜ್ರಿಯವರು 1978 ರಲ್ಲಿ ಈ ಪತ್ರಿಕೆಗಳಿಗೆ ಕೆಲಸಕ್ಕೆ ಸೇರಿ 1983 ರ ತನಕ ಅಲ್ಲಿ ಸೇವೆ ಸಲ್ಲಿಸಿದರು. 1983 ರಲ್ಲಿ ಖ್ಯಾತ ಪತ್ರಕರ್ತ ದಿ| ಎಸ್ ವಿಜಯಶೀಲ ರಾವ್ ಅವರ ’ಮುಂಜಾನೆ’ ಕನ್ನಡ ದಿನ ಪತ್ರಿಕೆಗೆ ಸೇರಿದರು. ಇದು ಸಿನೀಮ ಪತ್ರಿಕೆಯಾಗಿದ್ದು ಇಲ್ಲಿ ಸುಮಾರು ಮೂರು ವರ್ಷ ಕೆಲಸ ನಿರ್ವಹಿಸಿದರು. ಚಂದಮಾಮ ಪಬ್ಲಿಕೇಶನ್‌ನ ಮಾಲಕ ವಿಶ್ವನಾಥ ರೆಡ್ಡಿಯವರು ’ವಿಜಯಚಿತ್ರ’ ಪತ್ರಿಕೆಯ ಕಚೇರಿಯನ್ನು ಬೆಂಗಳೂರಿನ ಗಾಂಧಿನಗರದಲ್ಲಿ ಪ್ರಾರಂಭಿಸಿದರು. ಅದರಲ್ಲಿ ರವಿರಾಜರು 8 ವರ್ಷಗಳ ಕಾಲ ಸೇವೆ ಸಲ್ಲಿಸಿದರು. 1993 ರಲ್ಲಿ ಮಣಿಪಾಲದಿಂದ ಹೊರಡುವ ಉದಯವಾಣಿ ಬಳಗದ ’ರೂಪತಾರಾ’ ಪತ್ರಿಕೆಗೆ ವರದಿಗಾರರಾದರು. ನಂತರ ಮಣಿಪಾಲ ಉದಯವಾಣಿಗೆ ವರ್ಗಾಯಿಸಿದರು. 2007 ರಲ್ಲಿ ಉದಯವಾಣಿಯಿಂದ ನಿವೃತ್ತರಾದ ನಂತರ ಉಡುಪಿಯಲ್ಲಿ ನೆಲೆನಿಂತಿರುವ ಶ್ರೀ ರವಿರಾಜ ಅಜ್ರಿಯವರು ವಿಶುಕುಮಾರರ ನಿಕಟವರ್ತಿಗಳು. ಇದೀಗ ವಿಶುಕುಮಾರರ ಬಗ್ಗೆ ’ಯುವ ಸಿಂಚನ’ದಲ್ಲಿ ರವಿರಾಜ ಅಜ್ರಿಯವರ ಲೇಖನ ಮಾಲೆ ಪ್ರಕಟಿಸುತ್ತಿದ್ದೇವೆ.

– ಬಿ. ತಮ್ಮಯ

ಇಂದು ವಿಶುಕುಮಾರ್ ಬದುಕಿರುತ್ತಿದ್ದರೆ ಬರುವ ಮಾರ್ಚ್ 4 ಕ್ಕೆ 80 ವರ್ಷ. ಆದರೆ ಅವರು ತಮ್ಮ ಎಳೆ ವಯಸ್ಸಿನಲ್ಲೇ ಅಂದರೆ 49 ವರ್ಷ 6 ತಿಂಗಳಲ್ಲಿ ತಾನು ಜೀವಿತದಲ್ಲಿ ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ನೆರವೇರಿಸಿ ತೀರಿಕೊಂಡರು. ಶಂಕರಾಚಾರ್ಯಾದಿಯಾಗಿ ಎಲ್ಲಾ ದಾರ್ಶನಿಕರು ಅಲ್ಪ ಆಯುಷ್ಯದಲ್ಲೇ ತೀರಿಕೊಂಡವರು. ಆ ಸಾಲಿಗೆ ವಿಶುಕುಮಾರ್ ಕೂಡ ಸೇರಿರುತ್ತಾರೆ.

ಯಾಕೆ ನನಗೆ ವಿಶುಕುಮಾರ್ ಅವರ ನೆನಪಾಯಿತು? ನಾನು ದಿನಾ ಉಡುಪಿ ಅಜ್ಜರಕಾಡುವಿನಲ್ಲಿರುವ ಪುರಭವನದ ಮುಂದೆ ವಾಕಿಂಗ್ ಹೋಗುತ್ತಿದ್ದೇನೆ. ಕಳೆದ ಜುಲೈ 31ರ ಬೆಳಗ್ಗೆ ವಿಶುಕುಮಾರ್ ಅವರ ಪ್ರಶಸ್ತಿ ಪ್ರದಾನ ಸಮಾರಂಭದ ದೊಡ್ಡ ಕಟೌಟ್ ಹಾಕಲಾಗಿತ್ತು. ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿಯವರು ಏರ್ಪಡಿಸಿದ ಸಮಾರಂಭ. ಈ ಸಾಲಿನ ಪ್ರಶಸ್ತಿ ತುಳು- ಕನ್ನಡ ಸಾಹಿತ್ಯರಂಗದ ಹೆಸರಾಂತ ಲೇಖಕಿ ಜಾನಕಿ ಬ್ರಹ್ಮಾವರ ಅವರಿಗೆ ಲಭಿಸಿದೆ.

’ವಿಶುಕುಮಾರ್’- ಈ ಹೆಸರು ಕೇಳಿದ್ದು ನಾನು ಹೈಸ್ಕೂಲಿನಲ್ಲಿ ಓದುವಾಗ – ಆಗ ತಾನೆ ’ಉದಯವಾಣಿ’ ದಿನಪತ್ರಿಕೆ ಪ್ರಾರಂಭವಾದ ದಿನಗಳು. ’ಕೋಟಿ- ಚೆನ್ನಯ್ಯ’ ಚಿತ್ರದ ಚಿತ್ರೀಕರಣದ ಸುದ್ದಿಗಳು ಅದರಲ್ಲಿ ಪ್ರಕಟವಾಗುತ್ತಿತ್ತು.

ವಿಶುಕುಮಾರ್ ಅವರು, ಆಕಾಶದಲ್ಲಿ ಮೋಡಗಳನ್ನು ನೋಡಿ ಬಿಸಿಲಿಗಾಗಿ ಕಾಯುವ ಕಪ್ಪು-ಬಿಳುಪಿನ ಚಿತ್ರಗಳನ್ನು ಉದಯವಾಣಿಯಲ್ಲಿ ಸುಂದರವಾಗಿ ಪ್ರಕಟಿಸಿದ್ದರು. ಅಮರ ಜೋಡಿ ಕೋಟಿ-ಚೆನ್ನಯ್ಯ (ಸುಭಾಷ್ ಪಡಿವಾಳ್-ವಾಮನ್) ಅವರ ಸಚಿತ್ರ ಚಿತ್ರ. ನಮ್ಮನ್ನು ಮೋಡಿ ಮಾಡಿದ್ದವು- ಆ ವೀರ ಜೋಡಿಗಳ ಆಯ್ಕೆ ಹೇಗೆಲ್ಲಾ ಆಯಿತೆಂಬ ವಿವರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ನಂತರ ಚಿತ್ರವನ್ನು ಬೆಳ್ತಂಗಡಿ ಭಾರತ ಟಾಕೀಸ್‌ನಲ್ಲಿ ನೋಡಿದೆವು. ಸೆರೆಯಲ್ಲಿ ಬಂದಿಯಾದ ಕೋಟಿ- ಚೆನ್ನಯರು ಜೋಡು ನಂದಾದೀಪ ಅಮರ ವೀರರು – ಈ ಹಾಡು ನಮ್ಮನ್ನು ಮುಗ್ಧಗೊಳಿಸಿತು. ಬಿಸಿರಕ್ತದ ನಮ್ಮತನವನ್ನು ಬಡಿದೆಬ್ಬಿಸಿತು.

ವಿಶುಕುಮಾರ್ ಬರೆದ ’ಕರಾವಳಿ’, ’ಮದರ್’, ’ಕರ್ಮ’ – ಪುಸ್ತಕಗಳನ್ನು ಲೈಬ್ರರಿಯಲ್ಲಿ ಹುಡುಕಿ ಓದತೊಡಗಿದೆ. ಅವರ ಬರವಣಿಗೆಯ ರೀತಿ ನನಗೆ ಹಿಡಿಸಿತು. ಉದಯವಾಣಿಯ ದೀಪಾವಳಿ ಸಂಚಿಕೆಗೆ ಗೌರವ ಸಂಪಾದಕರಾಗಿ ಕೆಲಸ ಮಾಡಿರುವುದು- ಇವೆಲ್ಲ ಆ ದಿನಗಳಲ್ಲಿ ವಿಶುಕುಮಾರರ ಬಗ್ಗೆ ಕುತೂಹಲ ಮೂಡುತ್ತಿತ್ತು. ಎಂದೂ ನಾನು ಆವರೆಗೆ ಸ್ವತ: ವಿಶುಕುಮಾರ್ ಅವರನ್ನು ನೋಡಿರಲ್ಲಿಲ್ಲ.

1977-78 ರಸಮಯ – ಬದುಕಿನ ಹೋರಾಟದಲ್ಲಿ ನಾನು ಮದರಾಸ್‌ಗೆ ಪ್ರಯಾಣ. ’ಪಾಮ್ ಗ್ರೊ’ ಹೋಟೆಲ್‌ನಲ್ಲಿ ನನಗೆ ಸುಪರ್ ವೈಸರ್ ಕೆಲಸ. ಅದೂ ರಾತ್ರಿ ಪಾಳಿಯಲ್ಲಿ. ಹಗಲು ಹೊತ್ತು ನಾನು ಬಿಡುವು ಆಗಿದ್ದೆ. ಈ ನಡುವೆ ಸಣ್ಣ ಪುಟ್ಟ ಲೇಖನ, ಕಥೆಗಳನ್ನು ಪತ್ರಿಕೆಗಳಿಗೆ ಕಳುಹಿಸುತ್ತಿದ್ದೆ. ಪ್ರಕಟವಾಗುತ್ತಿದ್ದವು. ಇದರ ಆಸಕ್ತಿಯಿಂದ ನನಗೆ ಮದರಾಸ್‌ನಿಂದ ಪ್ರಕಟವಾಗುವ ಚಂದಮಾಮ ಪಬ್ಲಿಕೇಶನ್‌ರವರ ’ವಿಜಯಚಿತ್ರ’ ಕನ್ನಡ ಸಿನಿಮಾ ಮಾಸಿಕ ಪತ್ರಿಕೆಯಲ್ಲಿ ಕೆಲಸ ಸಿಕ್ಕಿತ್ತು.

ವಿಶುಕುಮಾರ್ ಮೊದಲ ಭೇಟಿ:
ಪಾಮ್ ಗ್ರೋ ಹೋಟಲ್‌ಗೆ ವಿಶುಕುಮಾರ್ ಆಗಾಗ ಬರುತ್ತಿದ್ದರು. ಅವರೇ ಅಲ್ಲ- ಕನ್ನಡ ಚಿತ್ರರಂಗದ ಹೆಚ್ಚಿನ ಕಲಾವಿದರು – ನಿರ್ಮಾಪಕರು ಆ ಹೋಟೆಲ್‌ನಲ್ಲಿ ಬಂದು ಉಳಿದುಕೊಳ್ಳುತ್ತಿದ್ದರು. ಆಗ ಮದರಾಸ್‌ನಲ್ಲೇ ಕನ್ನಡ ಚಿತ್ರಗಳ ಚಿತ್ರೀಕರಣ, ರೀರೆಕಾರ್ಡಿಂಗ್, ಡಬ್ಬಿಂಗ್ ಎಲ್ಲಾ ನಡೆಯುತ್ತಿದ್ದವು.

ವಿಶುಕುಮಾರ್ ಅವರು ’ಮದರ್’ ಚಿತ್ರದ ನಿರ್ಮಾಣದಲ್ಲಿ ತೊಡಗಿದ್ದರು. ಪಾಮ್ ಗ್ರೊ ಹೋಟೆಲ್‌ನ ರಿಸೆಪ್ಷೆನ್‌ನಲ್ಲಿ ನಮ್ಮವರೇ ಆದ ಮೂಡಬಿದರೆಯ ಶಿಶುಪಾಲ ಜೈನ್ ಇದ್ದರು. ನಾನು ’ವಿಜಯಚಿತ್ರ’ದಲ್ಲಿ ಕೆಲಸ ಮಾಡುವುದು ಅವರಿಗೆ ಗೊತ್ತಿರುವುದರಿಂದ – ವಿಶುಕುಮಾರ್ ಬಂದಾಗ – ನನ್ನನ್ನು ಕರೆದು ಅವರಿಗೆ ಪರಿಚಯ ಮಾಡಿಸಿದರು.

ವಿಶುಕುಮಾರ್‌ಗೆ ನನ್ನ ಬಗ್ಗೆ ಕುತೂಹಲ. ನನಗೂ ಅಷ್ಟೇ, ನನ್ನ ಅಭಿಮಾನದ ಲೇಖಕ. ಅವರಿಗೆ ಕರಾವಳಿ ಹುಡುಗ… ವಿಜಯಚಿತ್ರ ಪತ್ರಿಕೆಯಲ್ಲಿ!

ನಾನು ಅವರ ಕಾದಂಬರಿ, ಕೋಟಿ-ಚೆನ್ನಯ್ಯ ಚಿತ್ರದ ಬಗ್ಗೆ ಮಾತಾಡಿದೆ. ಅವರಿಗೆ ಹಿಡಿಸಿತು. ಆದರೆ ಗಂಭೀರ ನಡೆಯ, ದಪ್ಪ ಗುಂಗುರು ಕೂದಲಿನ, ಅಗಲ ಹಣೆಯ, ದಪ್ಪ ಮೀಸೆ, ತೀಕ್ಷ್ಣ ಹೊಳೆಯುವ ಕಣ್ಣುಗಳು… ಅಷ್ಟು ಸುಲಭದಲ್ಲಿ ನಮ್ಮನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ …!

ಮುಂದಿನ ಸಂಚಿಕೆಗೆ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 26-10-2024
ಸ್ಥಳ : ಸಮಾಜ ಮಂದಿರ, ಮೂಡುಬಿದಿರೆ

ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ

ದಿನಾಂಕ : 10-11-2024
ಸ್ಥಳ : ಅಮೃತ ಸೋಮೇಶ್ವರ ಸಭಾಭವನ ಊರ್ವಸ್ಟೋರ್

ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು

ದಿನಾಂಕ : 27-10-2024
ಸ್ಥಳ : ಎಸ್.ವಿ.ಎಸ್. ಶಾಲಾ ಮೈದಾನ ಬಂಟ್ವಾಳ

ಬೈದ್ಯಶ್ರೀ ಟ್ರೋಫಿ - 2024

ದಿನಾಂಕ : 07-09-2024
ಸ್ಥಳ : ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ

ನವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮ

ದಿನಾಂಕ :
ಸ್ಥಳ :

ಯುವ ಸ್ಟಾರ್ ಕಿಡ್ - 2024

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!