Yuvavahini

APR 19, 2026 1.30 PM IST

ಯುವಸಿಂಚನ : ಏಪ್ರಿಲ್ 2026

ಕಾರ್ಯನಿರ್ವಾಹಕ ಸಂಪಾದಕರ ಮಾತು : ಹರೀಶ್ ವಿ. ಪಚ್ಚನಾಡಿ

ಹರೀಶ್ ಪಚ್ಚನಾಡಿ ಕಾರ್ಯನಿರ್ವಾಹಕ ಸಂಪಾದಕರು ಯುವಸಿಂಚನ
ಹರೀಶ್ ಪಚ್ಚನಾಡಿ, ಕಾರ್ಯನಿರ್ವಾಹಕ ಸಂಪಾದಕರು
ಯುವಸಿಂಚನ

ಯುವಸಿಂಚನ ಪತ್ರಿಕೆಯ 2025–26ನೇ ಸಾಲಿನ ಪ್ರಥಮ ಆವೃತ್ತಿಯನ್ನು ಬಿಡುಗಡೆಗೊಂಡಿದೆ. ಯುವವಾಹಿನಿಯ 35 ಘಟಕಗಳು ನಿರಂತರ ಕ್ರಿಯಾಶೀಲತೆಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಸೇವೆ ಸಲ್ಲಿಸುತ್ತಿರುವುದು ಅಪಾರ ಸಂತೋಷದ ವಿಷಯ. ಈ ಕಾರ್ಯಚಟುವಟಿಕೆಗಳು ಸಂಸ್ಥೆಯ ಚೈತನ್ಯ ಮತ್ತು ಬದ್ಧತೆಯ ಪ್ರತಿಬಿಂಬವಾಗಿವೆ. ಎಲ್ಲಾ ಘಟಕಗಳು ಸಮಯಕ್ಕೆ ಸರಿಯಾಗಿ ವರದಿಗಳನ್ನು ನೀಡಿ ಸಹಕರಿಸಿದಕ್ಕಾಗಿ ಅಭಿನಂದನೆಗಳು. ಯುವಸಿಂಚನಕ್ಕೆ ಲೇಖನ, ಕವನ, ಕಥೆಗಳನ್ನು ರಚಿಸಿ ಕೊಡುಗೆ ನೀಡಿದ ಎಲ್ಲಾ ಲೇಖಕರಿಗೆ ಹೃತ್ಪೂರ್ವಕ ವಂದನೆಗಳು. ಸಂಪಾದಕ ಬಳಗದ ಸಹಕಾರಕ್ಕೂ ಧನ್ಯವಾದಗಳು. ಯುವವಾಹಿನಿಯ ಎಲ್ಲಾ ಘಟಕಗಳು ಸಮಯಕ್ಕೆ ಸರಿಯಾಗಿ ವರದಿಗಳನ್ನು ನೀಡಿ ಸಹಕರಿಸಿದಕ್ಕಾಗಿ ಅಭಿನಂದನೆಗಳು. ಯುವಸಿಂಚನಕ್ಕೆ ಲೇಖನ, ಕವನ, ಕಥೆಗಳನ್ನು ರಚಿಸಿ ಕೊಡುಗೆ ನೀಡಿದ ಎಲ್ಲಾ ಲೇಖಕರಿಗೆ ಹೃತ್ತೂರ್ವಕ ವಂದನೆಗಳು. ಸಂಪಾದಕ ಬಳಗದ ಸಹಕಾರಕ್ಕೂ ಧನ್ಯವಾದಗಳು.

ನದಿ ಹರಿಯುವಾಗ ತನ್ನ ಶಬ್ದವನ್ನು ಜೋರಾಗಿಸುವುದಿಲ್ಲ. ಆದರೆ ಅದು ತಲುಪುವ ಪ್ರತಿಯೊಂದು ತೀರದಲ್ಲೂ ಜೀವನದ ಗುರುತು ಬಿಟ್ಟು ಹೋಗುತ್ತದೆ. ಅಕ್ಷರಗಳೂ ಹಾಗೆಯೇ ಮೌನವಾಗಿ ಹರಿದಾಗಲೇ ಅವು ಚಿಂತನೆಯ ನೆಲವನ್ನು ತೊಯ್ದು ಬಿಡುತ್ತವೆ. “ಯುವಸಿಂಚನ” ಒಂದು ಪತ್ರಿಕೆ ಮಾತ್ರವಲ್ಲ; ಅದು ಯುವವಾಹಿನಿಯ ಹರಿವಿನ ದಾಖಲಾತಿ. ಇಲ್ಲಿ ಪ್ರಕಟವಾಗುವ ಪ್ರತಿಯೊಂದು ಪದವೂ ಒಂದು ಅನುಭವದ ನೊರೆ, ಒಂದು ಸೇವೆಯ ನೆನಪು, ಒಂದು ಯುವ ಮನಸ್ಸಿನ ಸಂವಾದ. ಸುದ್ದಿ ಹೇಳುವುದು ಸುಲಭ;
ಸಮಾಜವನ್ನು ಅರ್ಥಮಾಡಿಕೊಳ್ಳುವುದು ಅಕ್ಷರಗಳ ನೈತಿಕ ಹೊಣೆ. ಸಂಪಾದಕೀಯದ ಜವಾಬ್ದಾರಿ ಅಕ್ಷರಗಳನ್ನು ಅಲಂಕರಿಸುವುದಲ್ಲ; ಅವುಗಳಿಗೆ ದಿಕ್ಕು ನೀಡುವುದು. ಯಾವುದನ್ನು ಹೇಳಬೇಕು ಎನ್ನುವುದಕ್ಕಿಂತ, ಯಾವುದನ್ನು ಹೇಳದೆ ಬಿಡಬೇಕು ಎಂಬ ವಿವೇಕವೂ ಸಂಪಾದನೆಯ ಭಾಗವೇ. ಸತ್ಯ, ಸಮತೋಲನ ಮತ್ತು ಸಂವೇದನೆ ಈ ಮೂರೂ ಸೇರಿದಾಗಲೇ ಪತ್ರಿಕೆ ವಿಶ್ವಾಸಾರ್ಹವಾಗುತ್ತದೆ.

ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಗಳು ಈ ಪುಟಗಳ ಮೌಲ್ಯಾಧಾರ. ಸಮಾನತೆ, ಮಾನವೀಯತೆ ಮತ್ತು ವಿಚಾರಶೀಲತೆ ಕೇವಲ ಉಲ್ಲೇಖಗಳಾಗಿ ಅಲ್ಲ, ಲೇಖನಗಳ ಧ್ವನಿಯಾಗಿ, ಚಿಂತನೆಯ ದಿಕ್ಕಾಗಿ ಮೂಡಬೇಕು. ಯುವಮನಸ್ಸುಗಳಿಗೆ ಪ್ರಶ್ನೆ ಹುಟ್ಟಿಸಿದರೆ, ಉತ್ತರ ಹುಡುಕುವ ಧೈರ್ಯವೂ ಇಲ್ಲಿಯೇ ಮೊಳೆಯಬೇಕು. ಈ ಸಂಚಿಕೆ ಒಂದು ನದಿಯ ಹರಿವಿನಂತೆಯೇ ಬಹು ಧ್ವನಿಗಳ ಸಂಗಮ. ಪ್ರತಿಯೊಂದು ಘಟಕದ ಅನುಭವ, ಪ್ರತಿಯೊಬ್ಬ ಸದಸ್ಯರ ಕೊಡುಗೆ ಒಟ್ಟಾಗಿ ಸೇರಿದಾಗಲೇ ಈ ಮುಖವಾಣಿ ಪೂರ್ಣವಾಗುತ್ತದೆ. ಓದುಗರಿಗೆ ತಲುಪಿದ ಕ್ಷಣದಲ್ಲಿ ಅಕ್ಷರಗಳ ಪಯಣ ಮುಗಿಯುವುದಿಲ್ಲ; ಅಲ್ಲಿಂದಲೇ ಅದರ ಅರ್ಥ ಆರಂಭವಾಗುತ್ತದೆ.

ಯುವಸಿಂಚನ ಹರಿಯಲಿ……
ಹೃದಯಗಳ ನಡುವೆ……..
ಚಿಂತನೆಗಳ ನಡುವೆ…….
ಮೌಲ್ಯಗಳ ನಡುವೆ……

ಕಾರ್ಯನಿರ್ವಾಹಕ ಸಂಪಾದಕ
ಹರೀಶ್ ವಿ. ಪಚ್ಚನಾಡಿ
ಕಾರ್ಯ ನಿರ್ವಾಹಕ ಸಂಪಾದಕರು
9945618557
harishv179@gmail.com

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!