ಮಂಗಳೂರು : ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಆರ್ಗ್ಯಾನಿಕ್ ಕೋನ್ ತಯಾರಿಕಾ ತರಬೇತಿ ಕಾರ್ಯಗಾರವು ದಿನಾಂಕ 25-04-2026 ರಂದು ಸಂಜೆ 4 ಗಂಟೆಗೆ ಉರ್ವಾಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು.

ಮೆಹೆಂದಿ ಕೋನ್ ತಯಾರಿಸುವ ಸರಿಯಾದ ವಿಧಾನಗಳ ಕುರಿತು ತರಬೇತುದಾರರಾಗಿ ಆಗಮಿಸಿದ ಪ್ರಾರ್ಥನಾ ಅವರು ಸಮಗ್ರ ಮಾಹಿತಿ ನೀಡಿದರು. ಬಳಿಕ ಕೋನ್ ತಯಾರಿಸುವ ವಿಧಾನ ಹಾಗೂ ಕೋನ್ ಫಿಲ್ಲಿಂಗ್ ಮಾಡುವ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ತೋರಿಸಿ ಮಾರ್ಗದರ್ಶನ ನೀಡಿದರು. ಉತ್ತಮ ಹಾಗೂ ಉಪಯುಕ್ತ ತರಬೇತಿ ನೀಡಿದ ಪ್ರಾರ್ಥನಾ ಅವರನ್ನು ಗೌರವಿಸಲಾಯಿತು
ಸುಮಾರು 25 ಮಂದಿ ಸದಸ್ಯರು ಈ ಕಾರ್ಯಗಾರದಲ್ಲಿ ಭಾಗವಹಿಸಿ ಅದರ ಪ್ರಯೋಜನವನ್ನು ಪಡೆದರು. ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕಸ್ತೂರಿ ಮಹೇಶ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು ಕಾರ್ಯದರ್ಶಿ ಸೋನಿಯಾ ರಾಜ್ ಧನ್ಯವಾದ ನೀಡಿದರು


