ಕೊಲ್ಯ : ತುಳುನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್‌ನಲ್ಲಿ ಜರುಗಿದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಯುವವಾಹಿನಿ (ರಿ.) ಕೊಲ್ಯ ಘಟಕದ ಸದಸ್ಯರು ಭಕ್ತಿಪೂರ್ವಕವಾಗಿ ಸ್ವಯಂ ಸೇವೆಯನ್ನು ಸಲ್ಲಿಸಿದರು.
ಆದಿ ದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ಹಾಗೂ ದೇಯಿ ಬೈದ್ಯೆತಿ-ಕೋಟಿ ಚೆನ್ನಯರ ಮೂಲಸ್ಥಾನವಾದ ಈ ಪವಿತ್ರ ಕ್ಷೇತ್ರದಲ್ಲಿ ಫೆಬ್ರವರಿ 28ರಂದು ಜರುಗಿದ ಕಾರ್ಯಕ್ರಮದಲ್ಲಿ ಘಟಕದ ಹೆಚ್ಚಿನ ಸಂಖ್ಯೆಯ ಸದಸ್ಯರು ಪಾಲ್ಗೊಂಡರು. ಬೆಳಿಗ್ಗೆಯಿಂದ ಸಂಜೆಯವರೆಗೆ ಕ್ಷೇತ್ರದ ಪ್ರಸಾದ ಪ್ಯಾಕಿಂಗ್ ಹಾಗೂ ದೇಯಿ ಬೈದ್ಯೆತಿ ಅಮ್ಮನವರ ಮಡಿಲುಪ್ರಸಾದ ಸೇವಾ ವಿಭಾಗದಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ಕ್ಷೇತ್ರದ ಅನ್ನದಾನ ಸೇವೆಗಾಗಿ ಕೊಲ್ಯ ಘಟಕದ ವತಿಯಿಂದ 5,000 ರೂಪಾಯಿಗಳ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಘಟಕದ ಈ ಸೇವಾ ಮನೋಭಾವವನ್ನು ಗುರುತಿಸಿದ ಕ್ಷೇತ್ರದ ಆಡಳಿತ ಸಮಿತಿಯು, ಪದಾಧಿಕಾರಿಗಳಿಗೆ ದೇಯಿ ಬೈದ್ಯೆತಿ ತಾಯಿಯ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿತು.
ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸಕ್ರಿಯವಾಗಿ ಉಪಸ್ಥಿತರಿದ್ದರು.


