ಮಂಗಳೂರು: ತುಳುನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತಿಲ್ ಇಲ್ಲಿ ಜರುಗಿದ ವಾರ್ಷಿಕ ಮಹೋತ್ಸವ ಹಾಗೂ ನೇಮೋತ್ಸವ ಪುಣ್ಯ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಕೂಳೂರು ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡರು.

ಸಮಾಜದ ಸಾಂಸ್ಕೃತಿಕ ಅಸ್ಮಿತೆಯ ತಾಣವಾಗಿರುವ ಗೆಜ್ಜೆಗಿರಿಗೆ ಸಂಘಟಿತವಾಗಿ ಭೇಟಿ ನೀಡಿದ ಘಟಕದ ತಂಡವು, ಕ್ಷೇತ್ರದ ದೈವಿಕ ವಿಧಿವಿಧಾನಗಳಲ್ಲಿ ಭಾಗಿಯಾಗಿ ಭಕ್ತಿ ಸಮರ್ಪಣೆ ಮಾಡಿತು.


