ಮಂಗಳೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಇತ್ತೀಚೆಗೆ ಜರುಗಿದ ಜಾತ್ರಾ ಮಹೋತ್ಸವದ ಪುಣ್ಯ ಸಂದರ್ಭದಲ್ಲಿ, ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ವಿಶೇಷ ಸ್ವಯಂ ಸೇವೆ ಹಾಗೂ ಅನ್ನದಾನ ಸೇವೆಗಳನ್ನು ಸಲ್ಲಿಸಲಾಯಿತು.

ದಿನಾಂಕ 28-02-2026ರ ಮಡಿಲು ಸೇವೆಯ ಪವಿತ್ರ ದಿನದಂದು ಕಂಕನಾಡಿ ಘಟಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದಲ್ಲಿ ಉಪಸ್ಥಿತರಿದ್ದು, ಭಕ್ತಾದಿಗಳ ಅನುಕೂಲಕ್ಕಾಗಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. ಕ್ಷೇತ್ರದ ಶಿಸ್ತು ಮತ್ತು ವ್ಯವಸ್ಥಿತ ನಿರ್ವಹಣೆಯಲ್ಲಿ ಪಾಲ್ಗೊಂಡು ಸೇವೆಯನ್ನು ಅರ್ಪಿಸಿದರು.
ಅನ್ನದಾನಕ್ಕೆ ಧನಸಹಾಯ:
ಯುವವಾಹಿನಿಯ ಸಾಮಾಜಿಕ ಬದ್ಧತೆಯ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಕ್ಷೇತ್ರದ ಅನ್ನದಾನ ಸೇವೆಗಾಗಿ ₹6,000 ದೇಣಿಗೆಯನ್ನು ಹಸ್ತಾಂತರಿಸಿತು. ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಬ್ರಹ್ಮ ಬೈದರ್ಕ್ಲ, ದೇಯಿ ಬೈದೇತಿ ಹಾಗೂ ಕೋಟಿ-ಚೆನ್ನಯ್ಯರ ಸಿರಿ ಗಂಧ ಪ್ರಸಾದವನ್ನು ಸ್ವೀಕರಿಸಿ ಧನ್ಯತೆ ಮೆರೆದರು.
ಸಂಘಟನೆಯ ಈ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯವು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ. ಘಟಕದ ಪ್ರಮುಖ ಸದಸ್ಯರು ಮತ್ತು ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


