ಬಜಪೆ: ಯುವವಾಹಿನಿ (ರಿ.) ಕೆಂಜಾರು ಕರಂಬಾರು ಘಟಕದ ವತಿಯಿಂದ ಮೇಘೆ ಹುಣ್ಣಿಮೆಯ ಶುಭ ಸಂದರ್ಭದಲ್ಲಿ ದಿನಾಂಕ 03-03-2026, ಮಂಗಳವಾರದಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕ್ಷೇತ್ರಕ್ಕೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆ 4 ಗಂಟೆಗೆ ಕೆಂಜಾರು ಕರಂಬಾರಿನ ಶ್ರೀ ದೇವಿ ಭಜನಾ ಮಂದಿರದಿಂದ “ಓಂ ಗುರುಭ್ಯೋ ನಮಃ” ಎಂಬ ಗುರುಸ್ಮರಣೆಯೊಂದಿಗೆ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಘಟಕದ ಸದಸ್ಯರು ಹಾಗೂ ಭಕ್ತಾದಿಗಳು ಸೇರಿ ಒಟ್ಟು 15 ಮಂದಿಯ ತಂಡವು ಪಾದಯಾತ್ರೆಯ ಮೂಲಕ ಕಟೀಲು ಕ್ಷೇತ್ರವನ್ನು ತಲುಪಿ, ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಭಕ್ತಿ ಮತ್ತು ಶ್ರದ್ಧೆಯಿಂದ ನಡೆದ ಈ ಪಾದಯಾತ್ರೆಯಲ್ಲಿ ಯುವವಾಹಿನಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾದರು.


