ಆಧುನಿಕ ವೈದ್ಯಕೀಯ ಕ್ಷೇತ್ರವು ತುಂಬಾ ಮುಂದುವರಿದಿದ್ದು ಆರಂಬಿಕ ಹಂತದಲ್ಲೇ ಗುರುತಿಸಿದರೆ ಕ್ಯಾನ್ಸರ್ ಸಂಪೂರ್ಣ ಗುಣಪಡಿಸಬಹುದು.
ಆಧುನಿಕ ಜೀವನ ಶೈಲಿ, ಆಹಾರ ಪದ್ಧತಿ, ಹಾಗೂ ಆರೋಗ್ಯದ ಮೇಲೆ ಇರುವ ನಿರ್ಲಕ್ಷತನದಿಂದ ಸ್ತನ ಕ್ಯಾನ್ಸರ್ ವ್ಯಾಪಕವಾಗಿ ಹಬ್ಬಿದೆ ಎಂದು ಡಾ.ವೆಂಕಟೇಶ ಸಂಜೀವ ಅಭಿಪ್ರಾಯ ಪಟ್ಟರು.
ಅವರು ಮಂಗಳೂರು ರಥಬೀದಿಯ ಮಹಿಳಾ ಪ್ರಥಮ ದರ್ಜೆ ಕಾಲೇಜು ಇಲ್ಲಿನ ಮಹಿಳಾ ವೇದಿಕೆ ಹಾಗೂ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ದಿನಾಂಕ 01.04.2017 ರಂದು ಜರುಗಿದ ಮಹಿಳಾ ಆರೋಗ್ಯ ಮತ್ತು ಸ್ತನ ರೋಗಗಳ ಮಾಹಿತಿ ಶಿಬಿರ ಉದ್ಘಾಟಿಸಿದರು.
ಸ್ತನ ರೋಗಗಳ ಜಾಗೃತಿ, ಅದರ ಪತ್ತೆ ಹಾಗೂ ಚಿಕಿತ್ಸೆಯ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.
ಮಂಗಳೂರು ರಥಬೀದಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ ಹೆಬ್ಬಾರ್, ಶೈಕ್ಷಣಿಕ ಸಲಹೆಗಾರ ಡಾ.ಶಿವರಾಮ ಕೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ನಾಗಪ್ಪ ಗೌಡ, ಮಹಿಳಾ ವೇದಿಕೆ ಅದ್ಯಕ್ಷೆ ಡಾ.ಶೈಲಜಾ ರಾಣಿ, ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ಯಶವಂತ ಪೂಜಾರಿ, ಮಂಗಳೂರು ಮಹಿಳಾ ಯುವವಾಹಿನಿ ಸಲಹೆಗಾರರಾದ ಅಶೋಕ್ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅದ್ಯಕ್ಷೆ ವಿದ್ಯಾ ರಾಕೇಶ್ ಸ್ವಾಗತಿಸಿದರು. ಉಮಾ ಶ್ರೀಕಾಂತ್ ಕಾರ್ಯಕ್ರಮ ನಿರ್ವಹಿಸಿದರು, ಕುಶಲಾ ಯಶವಂತ ಪೂಜಾರಿ ಧನ್ಯವಾದ ನೀಡಿದರು.
Manila Chapter had conducted so many programmes in the current year. All were effective and informative. Thanks to the President and members.