
ದಿನಾಂಕ 06-05-2025 : ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಕಾರ್ಮಿಕ ದಿನಾಚರಣೆ ಆಯೋಜಿಸಲಾಗಿತ್ತು.
ಕಾರ್ಮಿಕ ದಿನಾಚರಣೆ ಪ್ರಯುಕ್ತ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಎಮ್ ಆರ್ ದೇಶಪಾಂಡೆ ಶಿಕ್ಷಣಾಧಿಕಾರಿ, ದತ್ತೋಪಂತ್ ಠೇಂಗಡಿ ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಮಂಡಳಿ ಪ್ರಾದೇಶಿಕ ನಿರ್ದೇಶನಾಲಯ, ಮಂಗಳೂರು ಇವರು ಆಗಮಿಸಿದ್ದರು.
ಎಂ ಆರ್ ದೇಶಪಾಂಡೆ ಮಾತನಾಡಿ ಹಿಂದಿನ ದಿನಗಳಲ್ಲಿದ್ದ ಕೆಲಸದ ಅವಧಿ ಇಂದು ಬದಲಾಗಿದ್ದು ಇಂದು ಕೆಲಸದ ಅವಧಿ ಹೆಚ್ಚಳವಾಗಿದೆ, ಉದ್ಯೋಗಿಗಳು ಈ ಹೊಸ ವ್ಯವಸ್ಥೆಗೆ ಅನುಗುಣವಾಗಿ ಬದಲಾಗಬೇಕಾಗಿದೆ ಹಾಗೂ ಸಾಮಾಜಿಕ ಭದ್ರತೆಗಾಗಿ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ ಆರ್ ದೇಶಪಾಂಡೆಯವರನ್ನು ಘಟಕದ ವತಿಯಿಂದ ಗೌರವಿಸಲಾಯಿತು.
ಘಟಕದ ಅಧ್ಯಕ್ಷರಾದ ಅಶೋಕ್ ಅಂಚನ್ ಕೋಡಿಕಲ್, ಕಾರ್ಯದರ್ಶಿ ಯಶವಂತ್ ಪೂಜಾರಿ ಉಳಾಯಿಬೆಟ್ಟು, ನಿಕಟಪೂರ್ವ ಅಧ್ಯಕ್ಷರಾದ ನಾಗೇಶ್ ಅಮೀನ್, ಉಪಾಧ್ಯಕ್ಷರಾದ ಹರೀಶ್ ಕೆ ಸುವರ್ಣ, ದ್ವಿತೀಯ ಉಪಾಧ್ಯಕ್ಷರಾದ ಯತೀಶ್ ಬಳಂಜ, ಕೋಶಾಧಿಕಾರಿ ಮಹೇಶ್ ಅಮೀನ್ ಘಟಕದ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷರು ಹಾಗೂ ಕಾರ್ಯದರ್ಶಿ
ಯುವವಾಹಿನಿ (ರಿ) ಮಂಗಳೂರು ಘಟಕ


